ರಾತ್ರಿಯ ಸುಖ ನಿದ್ದೆಗೆ ಅತ್ಯುತ್ತಮ, ಕೆಟ್ಟ ಆಹಾರಗಳು
ಧೀರ್ಘ ಕೆಲಸದ ನಂತರ ಉತ್ತಮ ನಿದ್ದೆಯನ್ನು ನೀವು ಆಶಿಸುವುದು ಸಾಮಾನ್ಯ. ಆದರೆ ಮಲಗುವ ಮೊದಲು ನೀವು ಸೇವಿಸಿದ ಕೊನೆಯ ಆಹಾರ ನಿದ್ದೆಯ ಮೇಲೆ ಬಹಳ ಪರಿಣಾಮ ಬೀರುತ್ತದೆ ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು. ಹಾಗಿದ್ದರೆ ನಿಮ್ಮ ನಿದ್ದೆಗೆ ನೆರವಾಗುವ ಮತ್ತು ಕದಿಯುವುದೇನು ಎನ್ನುವುದನ್ನು ತಿಳಿದುಕೊಳ್ಳೋಣ.
ನಿದ್ದೆ ಬರಿಸುವುದು: ಹಾಲು
ಅಜ್ಜಿ ನಿಮ್ಮನ್ನು ಹಾಲು ಕುಡಿದೇ ಮಲಗಬೇಕು ಎಂದು ಒತ್ತಾಯಿಸುತ್ತಿದ್ದದ್ದು ನೆನಪಿದೆಯೇ? ಹಾಲಿನಲ್ಲಿ ಅಮಿನೋ ಆಸಿಡ್ ಟ್ರೈಪ್ಟೊಫನ್ ಇದೆ. ಅದು ಮೆದುಳಿನ ರಾಸಾಯನಿಕ ಸೆರೊಟೊನಿನ್‌ಗೆ ಮುನ್ಸೂಚಕವಾಗಿದೆ.
ನಿದ್ದೆ ಬರಿಸುವುದು: ಅಕ್ಕಿ
ತೂಕದ ವಿಷಯಕ್ಕೆ ಬಂದಾಗ ಅನ್ನ ಸೇವಿಸಬಾರದು ಎಂದು ಹಲವರು ಹೇಳುತ್ತಾರೆ. ಆದರೆ ಅನ್ನವು ನಿದ್ದೆ ಬರಲು ಉತ್ತಮ ಆಹಾರ. ಕೆಲವರು ಅನ್ನದಿಂದ ತೂಕ ಏರುವುದಿಲ್ಲ ಎಂದೂ ಹೇಳುತ್ತಾರೆ. ಅನ್ನ ಹೊಟ್ಟೆಯನ್ನು ಹಗುರಗೊಳಿಸುವ ಕಾರಣದಿಂದಲೇ ಸಣ್ಣ ಮಕ್ಕಳಿಗೆ ಬೇರೆ ಆಹಾರ ಕೊಡುವ ಮೊದಲು ಅದನ್ನು ನೀಡಲಾಗುತ್ತದೆ ಎನ್ನುವವರೂ ಇದ್ದಾರೆ.
ನಿದ್ದೆ ಓಡಿಸುವುದು: ಡಾರ್ಕ್ ಚಾಕಲೇಟು/ ಕಾಫಿ
ಡಾರ್ಕ್ ಚಾಕಲೇಟು ಆರೋಗ್ಯಕರ ಮತ್ತು ಚಾಕಲೇಟು ಪ್ರಿಯರಲ್ಲಿ ಜನಪ್ರಿಯ. ಆದರೆ ಮಲಗುವ ಮೊದಲು ಇದನ್ನು ಸೇವಿಸಬೇಡಿ. ಇವುಗಳಲ್ಲಿ ಕಾಫಿಯಷ್ಟೇ ಕೆಫೈನ್ ಇರುತ್ತದೆ. ಕಾಫಿ ಕೂಡ ಮಲಗುವ ಸಮಯದಲ್ಲಿ ತರವಲ್ಲ.
ನಿದ್ದೆ ಬರಿಸುವುದು: ಬಾಳೆಹಣ್ಣು
ಬಾಳೆಹಣ್ಣು ಸೇವಿಸಿ ಮಲಗಿದರೆ ಒತ್ತಡ ಕಡಿಮೆಯಾಗುತ್ತದೆ. ಹೌದು, ಅದರ ಪೊಟಾಶಿಯಂ ನಿಮ್ಮ ಒತ್ತಡ ಕಡಿಮೆ ಮಾಡುತ್ತದೆ. ಮೆಗ್ನೇಶಿಯಂ ಮೂಳೆಗಳನ್ನು ರಿಲ್ಯಾಕ್ಸ್ ಮಾಡುತ್ತದೆ. ಕಾರ್ಬೋಹೇಡ್ರೇಟುಗಳು ಉತ್ತಮ ನಿದ್ದೆಗೆ ಜಾರಲು ನೆರವಾಗುತ್ತವೆ.
ನಿದ್ದೆ ಓಡಿಸುವುದು: ಕೋಳಿ/ ಪನೀರ್ ಸಾಂಬಾರ್
ಕೋಳಿ ಸಾರು ತಿಂದು ಮಲಗಿದಲ್ಲಿ ನಿದ್ದೆ ಬರದು. ಕ್ಯಾಲರಿ ಇರುವ ಆಹಾರವನ್ನು ನಿದ್ದೆ ಮಾಡುವ ಮೊದಲು ಸೇವಿಸಬಾರದು. ಅವುಗಳು ನಿಮ್ಮ ನಿದ್ದೆಯನ್ನು ಕದಿಯುತ್ತವೆ.
ನಿದ್ದೆ ಬರಿಸುವುದು: ತರಕಾರಿ ಸೂಪ್
ಬಿಸಿಯಾದ ತರಕಾರಿ ಸೂಪ್ ಕುಡಿದು ಮಲಗಿದರೆ ಉತ್ತಮ ನಿದ್ದೆ ಬರುತ್ತದೆ. ಮೃದುವಾದ ತರಕಾರಿಗಳನ್ನು ಜೀರ್ಣಿಸುವುದು ಸರಳ. ಹೀಗಾಗಿ ಜೀರ್ಣಗ್ರಂಥಿಗಳಿಗೆ ರಾತ್ರಿಯಿಡೀ ಕೆಲಸವಿರುವುದಿಲ್ಲ.
ನಿದ್ದೆ ಓಡಿಸುವುದು: ಗ್ರೀನ್ ಟೀ
ಅಚ್ಚರಿಯೆ? ಆರೋಗ್ಯಮಯ ಜೀವನಕ್ಕೆ ಗ್ರೀನ್ ಟೀ ಬೇಕೆಂದು ಎಲ್ಲರಿಗೂ ಗೊತ್ತಿದೆ. ಆದರೆ ಇದನ್ನು ದಿನದಲ್ಲಿ ಕುಡಿಯಿರಿ. ಇದು ಡಿಕ್ಯಾಫಿನೆಟೆಡ್ ಅಲ್ಲದೆ ಇರುವ ಕಾರಣ ರಾತ್ರಿ ನಿದ್ದೆ ಹಾರಿ ಹೋಗಲಿದೆ.
ನಿದ್ದೆ ಬರಿಸುವುದು: ಇಡೀ ಗೋಧಿ ಧಾನ್ಯ
ನಿಮ್ಮ ಪ್ರಿಯ ಉಪಹಾರದ ಧಾನ್ಯವನ್ನು ರಾತ್ರಿ ಸೇವಿಸಲು ಆರಂಭಿಸಿ. ಇದು ಉತ್ತಮ ನಿದ್ದೆ ಬರಿಸುತ್ತದೆ. ಹಾಲಿಗೆ ಸೇರಿಸಿಕೊಂಡರೆ ಇದು ಅತ್ಯುತ್ತಮ ನಿದ್ದೆಗೆ ದಾರಿ ಮಾಡಿಕೊಡುತ್ತದೆ.
ಕೊನೆಯದಾಗಿ ನೀವು ಮಲಗುವ ಮೊದಲು ಕನಿಷ್ಠ ಒಂದು ಅಥವಾ ಎರಡು ಗಂಟೆಗಳ ಮೊದಲು ಆಹಾರ ಸೇವಿಸಬೇಕು. ಆಹಾರ ಜೀರ್ಣವಾಗಲು ಸಮಯ ಹಿಡಿಯುತ್ತದೆ.