ಯು.ಟಿ.ಫರೀದ್ ಸ್ಮರಣಾರ್ಥ ‘ಮೈಸೂರು ಟ್ರೋಪಿ’ ಕ್ರಿಕೆಟ್ ಪಂದ್ಯಾಟ
ಬಡವರ್ಗದ ಜನರಿಗೆ ಸವಲತ್ತು, ಸಹಾಯಧನ ವಿತರಣೆ

ಕೊಣಾಜೆ, ಎ.19: ಯುವಜನತೆ ನಮ್ಮ ದೇಶದ ಶಕ್ತಿಯಾಗಿದ್ದಾರೆ. ಜಾತಿ ಧರ್ಮ ಬೇದ ಮರೆತು ಎಲ್ಲರೂ ಸಾಮರಸ್ಯದ ಮೂಲದ ಸಮಾಜಸೇವೆಯೊಂದಿಗೆ ಮುನ್ನಡೆದರೆ ಉತ್ತಮ ಸೌಹಾರ್ದಯುತವಾದ ಸಮಾಜವನ್ನು ಕಟ್ಟಲು ಸಾಧ್ಯ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಅಭಿಪ್ರಾಯಪಟ್ಟರು. ಅವರು ದೇರಳಕಟ್ಟೆಯ ಮೈದಾನದಲ್ಲಿ ಮಂಗಳೂರು ವಲಯ ಯುವ ಕಾಂಗ್ರೆಸ್ ಹಾಗೂ ಡಿಎಫ್‌ಸಿ ದೇರಳಕಟ್ಟೆ ಇದರ ಆಶ್ರಯದಲ್ಲಿ ಮಾಜಿ ಶಾಸಕ ಯು.ಟಿ.ಫರೀದ್ ಸ್ಮರಣಾರ್ಥ ನಡೆಯುತ್ತಿರುವ ಮೈಸೂರು ಟ್ರೋಫಿ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟದ ಅಂಗವಾಗಿ ಸೋಮವಾರ ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಬಡರೋಗಿಗಳಿಗೆ ಸಹಾಯ ಧನ ವಿತರಣೆ ಹಾಗೂ ಬಡವರ್ಗದ ಜನರಿಗೆ ಸ್ವ ಉದ್ಯೋಗಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಟೈಲರಿಂಗ್ ಯಂತ್ರವನ್ನು ವಿತರಿಸಿ ಮಾತನಾಡಿದರು. ಮುಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್ ಮಾತನಾಡಿ, ಯಾರು ನೈಜವಾಗಿ ತಮ್ಮ ಧರ್ಮವನ್ನು ಪ್ರೀತಿಸುತ್ತಾರೋ ಅವರು ಅನ್ಯಧರ್ಮವನ್ನು ನಿಂದಿಸಲಾರರು. ಆದ್ದರಿಂದ ನಾವು ಸಮಾಜದಲ್ಲಿ ಸೌಹಾರ್ದಯುತ ವಾತವಾರಣನಿರ್ಮಾಣದೊಂದಿಗೆ ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಡರೋಗಿಗಳಿಗೆ ಸಹಾಯಧನ ವಿತರಣೆ ಹಾಗೂ ಸ್ವಉದ್ಯೋಗಿಗಳಿಗೆ ಟೈಲರಿಂಗ್ ಮಿಷಿನ್‌ನನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಯುವ ಕಾಂಗ್ರೆಸ್‌ನ ಅಧ್ಯಕ್ಷರಾದ ಮಿಥುನ್ ರೈ, ಉದ್ಯಮಿ ಮೈಸೂರು ಬಾವ, ಹರ್ಷರಾಜ್ ಮುದ್ಯ, ಕಾಂಗ್ರೆಸ್ ಮುಖಂಡ ಸದಾಶಿವ ಉಳ್ಳಾಲ್, ಬೆಳ್ಮ ಗ್ರಾಪಂ ಅಧ್ಯಕ್ಷೆ ವಿಜಯ, ಕಾಂಗ್ರೆಸ್ ಮುಖಂಡರಾದ ಮುಹಮ್ಮದ್ ಮೋನು, ಅಬ್ದುರ್ರಹ್ಮಾನ್ ಕೋಡಿಜಾಲ್, ಸಂತೋಷ್ ಶೆಟ್ಟಿ, ಎನ್.ಎಸ್.ಕರೀಂ, ತಾಪಂ ಮಾಜಿ ಸದಸ್ಯರಾದ ಇಬ್ರಾಹಿಂ ಮೈಸೂರು, ಮುಹಮ್ಮದ್ ಮುಸ್ತಫಾ, ಮಂಗಳೂರು ವಲಯ ಯುವ ಕಾಂಗ್ರೆಸ್ ಅಧ್ಯಕ್ಷ ನಝರ್ ಷಾ ಪಟ್ಟೋರಿ, ಕೊಣಾಜೆ ಗ್ರಾಪಂ ಅಧ್ಯಕ್ಷ ಶೌಕತ್ ಅಲಿ, ಸಿದ್ದೀಕ್ ತಲಪಾಡಿ, ಅಬ್ದುಲ್ ಜಲೀಲ್ ಮೋಂಟುಗೋಳಿ, ಬಾವು ತಲಪಾಡಿ, , ಅಬ್ದುಲ್ ಸತ್ತಾರ್, ರವಿರಾಜ್ ಶೆಟ್ಟಿ, ಹನೀಫ್ ಡಿಎಫ್‌ಸಿ, ಹಂಝ ಹಮೀದ್, ಸಿದ್ದೀಕ್, ಫಾರೂಕ್ ಸಿ.ಎಂ., ಕಬೀರ್ ಡಿ., ಟಿ.ಎಸ್.ನಾಸಿರ್, ರಫೀಕ್ ಅಂಬ್ಲಮೊಗರು ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿರಿದ್ದರು. ಮುಹಮ್ಮದ್ ಮುಸ್ತಫಾ ಸ್ವಾಗತಿಸಿದರು. ನಝರ್ ಷಾ ಪಟ್ಟೋರಿ ಕಾರ್ಯಕ್ರಮ ನಿರೂಪಿಸಿದರು.
ಸಚಿವರ ತಂಡಕ್ಕೆ ಜಯ: ಯುವ ಕಾಂಗ್ರೆಸ್ ಮತ್ತು ಡಿಎಫ್‌ಸಿ ಆಶ್ರಯದಲ್ಲಿ ನಡೆಯುತ್ತಿರುವ ಕ್ರಿಕೆಟ್ ಪಂದ್ಯಾಟದ ನಡುವೆ ಸಚಿವ ಯು.ಟಿ.ಖಾದರ್ ತಂಡ ಹಾಗೂ ಮೈಸೂರು ಬಾವ ಅವರ ತಂಡಗಳ ನಡುವೆ 4 ಓವರ್‌ಗಳ ಕ್ರಿಕೆಟ್ ಪಂದ್ಯಾಟವನ್ನು ಹಮ್ಮಿಕೊಳ್ಳಲಾಗಿತ್ತು. ಈ ಎರಡು ತಂಡಗಳ ರೋಮಾಂಚನಕಾರಿ ಕ್ರಿಕೆಟ್ ಪಂದ್ಯಾಟದಲ್ಲಿ ಸಚಿವರ ತಂಡವು ಕೊನೆಯ ಕ್ಷಣದಲ್ಲಿ ಜಯ ಗಳಿಸಲು ಒಂದು ಬಾಲ್‌ಗೆ 1 ರನ್‌ನ ಅವಶ್ಯಕತೆಯಿತ್ತು. ಈ ಸಂದರ್ ಸಚಿವ ಖಾದರ್ ಆಕರ್ಷಕ ಬ್ಯಾಟಿಂಗ್ ಮೂಲಕ ರನ್ ಗಳಿಸಿ ತಂಡಕ್ಕೆ ಜಯ ತಂದುಕೊಟ್ಟರು.







