Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಈ ನಗರ ಬಳಸುವುದಕ್ಕಿಂತ ನಾಲ್ಕು ಪಟ್ಟು...

ಈ ನಗರ ಬಳಸುವುದಕ್ಕಿಂತ ನಾಲ್ಕು ಪಟ್ಟು ಹೆಚ್ಚು ವಿದ್ಯುತ್ ಉತ್ಪಾದಿಸುತ್ತದೆ!

ವಾರ್ತಾಭಾರತಿವಾರ್ತಾಭಾರತಿ19 April 2016 3:39 PM IST
share
ಈ ನಗರ ಬಳಸುವುದಕ್ಕಿಂತ ನಾಲ್ಕು ಪಟ್ಟು ಹೆಚ್ಚು ವಿದ್ಯುತ್ ಉತ್ಪಾದಿಸುತ್ತದೆ!

ಭಾರತ ಸೇರಿ ಪ್ರಮುಖ ದೇಶಗಳು ಕಶ್ಮಲಕಾರಿ ಹೊಗೆ ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ. ಹೀಗಾಗಿ ಸುಸ್ಥಿರ ವಿದ್ಯುತ್ತಿಗಾಗಿ ಪ್ರಯತ್ನಿಸಲಾಗುತ್ತಿದೆ. ಈ ನಡುವೆ ಜರ್ಮನಿ ಸ್ವತಃ ಬಳಸುವುದಕ್ಕಿಂತ ಹೆಚ್ಚು ಸೋಲಾರ್ ಶಕ್ತಿಯನ್ನು ಹೇಗೆ ಉತ್ಪಾದಿಸಬಹುದು ಎನ್ನುವುದನ್ನು ತೋರಿಸಿಕೊಟ್ಟಿದೆ.

ಭಾರತದಲ್ಲಿ ಈಗ 4 ಗಿಗಾ ವಾಟ್ಸ್‌ಗಳಷ್ಟೇ ಸೋಲಾರ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಭಾರತವು 2022ಗಾಗುವಾಗ 100 ಗಿಗಾ ವಾಟ್ಸ್ ಸಾಮರ್ಥ್ಯದ ಸೋಲಾರ್ ವಿದ್ಯುತ್ ಘಟಕ ಸ್ಥಾಪಿಸಲು ಉದ್ದೇಶಿಸಿದೆ. ಆದರೆ ಜರ್ಮನಿಯ ಫ್ರೀಬರ್ಗ್‌ನಲ್ಲಿ ಸೊನೆನ್ಷಿಫ್ ಎನ್ನುವ ಸಮುದಾಯ ಸ್ವತಃ ಬಳಕೆಯ ನಾಲ್ಕುಪಟ್ಟು ಅಧಿಕ ವಿದ್ಯುತ್ ಉತ್ಪಾದಿಸುತ್ತಿದೆ.

ಆ ನಗರದ ಬಗ್ಗೆ ವಿವರ ತಿಳಿಯೋಣ.

ಫ್ರಾನ್ಸ್- ಜರ್ಮನಿ ಗಡಿಯಲ್ಲಿರುವ ಫ್ರೀಬರ್ಗ್ ವಿಶ್ವಯುದ್ಧ 2ರಲ್ಲಿ ಪೂರ್ಣವಾಗಿ ನಾಶವಾಗಿತ್ತು. 70ರ ಪರಮಾಣು ವಿರೋಧಿ ಚಳವಳಿಯಿಂದ ಜನಿಸಿದ ಸೋಲಾರ್ ನಗರವು 2022ರ ಒಳಗೆ ಎಲ್ಲಾ ಅಣುವಿದ್ಯುತ್ ಸ್ಥಾವರ ಸ್ಥಗಿತಗೊಳಿಸುವ ಜರ್ಮನಿಯ ಗುರಿಯನ್ನು ಹೊಂದಿದೆ. ಜಪಾನಿನ ಫುಕೋಶಿಮದಲ್ಲಿ ಅಣು ದುರುಂತವಾದ ಮೇಲೆ ಜರ್ಮನಿ ಸುಸ್ಥಿರ ಮೂಲದ ಹಾದಿ ಹಿಡಿಯಿತು. ಈಗ ಅದು ತನ್ನ ಶೇ 30ರಷ್ಟು ವಿದ್ಯುತ್ತನ್ನು ಸೋಲಾರ್ ಮತ್ತು ಪವನ ಶಕ್ತಿಯಿಂದ ಪಡೆಯುತ್ತಿದೆ.

ಮನೆಗಳ ಮಹಡಿಗಳನ್ನು ಸೋಲಾರ್ ಪ್ಯಾನೆಲುಗಳಿಂದ ಮಾಡಲಾಗಿದೆ. ಈಗ ಕಟ್ಟಡದ ಭಾಗವಾಗಿಯೇ ಸೋಲಾರ್ ಪ್ಯಾನಲುಗಳನ್ನು ಕಟ್ಟಲಾಗುತ್ತದೆ. 70 ಸರ್ಕಾರಿ ಶಾಲೆಗಳ ಪೈಕಿ 2.35 ಪಿವಿ ವ್ಯವಸ್ಥೆ ಹೊಂದಿದೆ. ವಿಶ್ವವಿದ್ಯಾಲಯ ಆಸ್ಪತ್ರೆ ಕೆಫೆಟೆರಿಯದಲ್ಲಿ 272 ಚದರ ಮೀಟರ್ ಸೋಲಾರ್ ಥರ್ಮಲ್ ಪರಿಕರವಿದೆ. ಇಲ್ಲಿ ವಿಶ್ವದ ಮೊದಲ ಸೋಲಾರ್ ವಿದ್ಯುತ್ ಚಾಲಿತ ಫುಟ್ಬಾಲ್ ಸ್ಟೇಡಿಯಂ ಇದೆ. ಅದರಲ್ಲಿ ದೊಡ್ಡ ಪಿವಿ ಅರೆಯನ್ನು ಮಹಡಿಯಲ್ಲಿ ಹಾಕಲಾಗಿದ್ದು, 290 ಕಿಲೋವಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಫ್ರೀಬರ್ಗ್ ಕೇಂದ್ರ ಘಟಕದಲ್ಲಿ 19 ಮಹಡಿಗಳ ಉದ್ದದ ಪಿವಿ ವ್ಯವಸ್ಥೆಯಲ್ಲಿ 240 ಸೋಲಾರ್ ಪ್ಯಾನಲುಗಳಿವೆ.

ನಗರದಲ್ಲಿ ಶೇ 100ರಷ್ಟು ಸಾರ್ವಜನಿಕ ಸಾರಿಗೆ ಬಳಕೆಯಾಗುತ್ತಿದೆ. ಶೇ35ರಷ್ಟು ಜನರು ಕಾರುಗಳಿಲ್ಲದೆ ನೆಲೆಸಿದ್ದಾರೆ. ಶೇ 20ರಷ್ಟು ಮಂದಿ ತಲಾ ಕಾರ್ಬನ್ ಡೈಆಕ್ಸೈಡ್ ಹೊಗೆ ಕಡಿಮೆಯಾಗಿದೆ. ಫ್ರೀಬರ್ಗಿಗೆ 1973ರಲ್ಲಿ ಅಣು ಸ್ಥಾವರದ ಇಂಜಿನಿಯರ್ ಆಗಿ ಬಂದ ಡಯಟರ್ ಸೀಫೀಲ್ಡ್ ಪ್ರಕಾರ, ಅಣು ಸ್ಥಾವರ ಸ್ವಚ್ಛ ಇಂಧನವಲ್ಲ. ದುಬಾರಿ ಕೂಡ. ತ್ಯಾಜ್ಯ ಎಲ್ಲಿ ಹಾಕುವುದೆನ್ನುವಂತಹ ಹಲವು ಸಮಸ್ಯೆಗಳೂ ಇವೆ.

ಸೌರ ವಿದ್ಯುತ್ ಕಲ್ಪನೆ ಪೂರ್ಣವಾಗಿ ಜನರಿಗೆ ಸೇರಿದೆ. ಫ್ರೀಬರ್ಗಲ್ಲಿ ಆಗುವ ಬಹುತೇಕ ಬೆಳವಣಿಗೆಯಲ್ಲಿ ಸ್ಥಳೀಯ ಸರ್ಕಾರದ ಕೈವಾಡವಿರುವುದಿಲ್ಲ. ಸರ್ಕಾರ ಜನರ ಅಭಿಪ್ರಾಯಕ್ಕೆ ಮನ್ನಣೆ ಕೊಡಬೇಕು ಅಥವಾ ಒತ್ತಾಯಪೂರ್ವಕ ಅದನ್ನು ಒಪ್ಪಿಸಲಾಗುತ್ತದೆ. ಕಟ್ಟಡಗಳ ವಾಸ್ತುಶೈಲಿಯನ್ನೂ ಸೌರ ಪ್ಯಾನೆಲುಗಳು ಹೆಚ್ಚು ಸೂರ್ಯನ ಬೆಳಕನ್ನು ಪಡೆಯುವಂತೆ ನಿರ್ಮಿಸಲಾಗಿದೆ. ಮನೆಗಳೆಲ್ಲವನ್ನೂ ಹಸಿರು ಕಟ್ಟಡ ತಂತ್ರಜ್ಞಾನದ ಗುಣಮಟ್ಟದಲ್ಲಿ ನಿರ್ಮಿಸಲಾಗಿದ್ದು, ಶೇ 70ರಷ್ಟು ಕಡಿಮೆ ಇಂಧನ ಬಳಸುತ್ತದೆ.

ಭಾರತವು ಮಹಾತ್ವಾಕಾಂಕ್ಷೆಯ ಸೌರ ವಿದ್ಯುತ್ ಉತ್ಪಾದನೆಯ ಗುರಿಗಳನ್ನು ಇಡುತ್ತಿರುವ ಸಂದರ್ಭದಲ್ಲಿ ಫ್ರೀಬರ್ಗ್ ಉದಾಹರಣೆಯಾಗಬೇಕು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X