ಸಿ.ಎ.ಜಿ. ವರದಿ : ಶಬಾನಾಗೆ ಸಂಕಷ್ಟ

ಮುಂಬೈ : ನಟಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಶಬಾನಾ ಆಜ್ಮಿಯವರ ಎನ್‌ಜಿಒ ಮಿಝ್ವನ್ ವೆಲ್ಫೇರ್ ಸೊಸೈಟಿ 2011 ಹಾಗೂ 2012ರಲ್ಲಿ ಆಯೋಜಿಸಿದ್ದಎರಡು ಚ್ಯಾರಿಟಿ ಫ್ಯಾಶನ್ ಶೋಗಳನ್ನು ಆಯೋಜಿಸುವಾಗಮನರಂಜನಾ ತೆರಿಗೆ ವಿನಾಯಿತಿ ಪಡೆಯಲು ವಿಧಿಸಲಾಗಿದ್ದ ಷರತ್ತುಗಳನ್ನು ಉಲ್ಲಂಘಿಸಿದೆಯೆಂದು ಸಿ.ಎ.ಜಿ. ವರದಿ ತಿಳಿಸಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರಕಾರ ಎನ್‌ಜಿಒ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.
ಆಗಸ್ಟ್ 2015ರಲ್ಲಿಸಿ.ಎ.ಜಿ ಈ ವಿಚಾರವನ್ನು ಎತ್ತಿದಂದಿನಿಂದ ಮುಂಬೈ ಸಬ್ ಅರ್ಬನ್ ಕಲೆಕ್ಟರ್ ಅವರ ಕಚೇರಿ ಮಿಝ್ವಿನ್ ವೆಲ್ಫೇರ್ ಸೊಸೈಟಿಗೆ ಹಲವು ನೊಟೀಸುಗಳನ್ನು ನೀಡಿ ಷರತ್ತುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮನರಂಜನಾ ತೆರಿಗೆ ಪಾವತಿಸುವಂತೆ ಆಗ್ರಹಿಸಿತ್ತು.
ಮಹಾರಾಷ್ಟ್ರದ ಕಂದಾಯ ಸಚಿವ ಏಕನಾಥ್ ಖಡ್ಸೆಯವರಿಗೆ ನಟಿ ಸೆಪ್ಟೆಂಬರ್ 22,2015ರಂದು ಬರೆದ ಪತ್ರವೊಂದರಲ್ಲಿ ಸರಕಾರ ಷರತ್ತುಗಳನ್ನು ಹಿಂದಕ್ಕೆ ಪಡೆಯಲು ಮನಸ್ಸು ಮಾಡದಿದ್ದಲ್ಲಿ ಮೂಲ ಮನರಂಜನಾ ತೆರಿಗೆ (ಬಡ್ಡಿಯಿಲ್ಲದೆ) ಪಾವತಿಸುವುದಾಗಿ ತಿಳಿಸಿದ್ದರು. ಈದಾಖಲೆ ತನಗೆ ದೊರೆತಿದೆಯೆಂದು ಇಂಡಿಯನ್ ಎಕ್ಸ್ ಪ್ರೆಸ ಪತ್ರಿಕೆ ಹೇಳಿಕೊಂಡಿದೆ.
ಸದ್ಯ ಅಮೆರಿಕಾದಲ್ಲಿರುವ ನಟಿಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯನ್ನು ದೂರವಾಣಿ ಮೂಲಕ ಸಂಪರ್ಕಿಸಿ ತಾನು ಎಪ್ರಿಲ್ 20ರಂದು ಮುಂಬೈ ತಲುಪಿದ ಕೂಡಲೇ ಪಾವತಿ ಮಾಡುವುದಾಗಿ ಹೇಳಿದ್ದಾರೆನ್ನಲಾಗಿದೆ.
ಈ ಎನ್‌ಜಿಒ ಶಬಾನಾ ಅವರ ತಂದೆ ದಿ. ಕೈಫಿ ಆಜ್ಮಿಯವರಿಂದ ಸ್ಥಾಪಿತವಾಗಿದ್ದುಉತ್ತರ ಪ್ರದೇಶದ ಆಝಂಘರ್ ನಲ್ಲಿರುವ ಅವರ ಹುಟ್ಟೂರು ಮಿಝ್ವನ್ಹೆಸರನ್ನೇ ಅದಕ್ಕಿಡಲಾಗಿದೆ. ಫ್ಯಾಶನ್ ಶೋಗಳ ಮುಖಾಂತರ ಮಿಝ್ವಾನ್ ವೆಲ್ಫೇರ್ ಸೊಸೈಟಿ 2011ರಲ್ಲಿ ರೂ 84 ಲಕ್ಷ ಹಾಗೂ 2012ರಲ್ಲಿ ರೂ 52 ಲಕ್ಷ ಸಂಗ್ರಹಿಸಿತ್ತು, ಎಂದುಸಿ.ಎ.ಜಿ. ವರದಿ ತಿಳಿಸಿದೆ.







