ಒಮನ್: ಪಾರ್ಕ್‌ನಲ್ಲಿ ಸಿಕ್ಕ ಮಗುವಿನ ಹೆತ್ತವರು ಇನ್ನೂ ಪತ್ತೆಯಾಗಿಲ್ಲ!

ಮಸ್ಕತ್, ಎಪ್ರಿಲ್ 19: ಬುರೈಮಿನ ಸಾರ್ವಜನಿಕ ಪಾರ್ಕ್‌ನಲ್ಲಿ ಸಿಕ್ಕಿದ್ದ ಮಗುವನ್ನು ಮಸ್ಕತ್ ಶಿಶು ಸಂರಕ್ಷಣಾ ಕೇಂದ್ರಕ್ಕೆ ಸೇರಿಸಲಾಗಿದೆ. ಮಗುವಿನ ಹೆತ್ತವರ ಹುಡುಕಾಟ ತೀವ್ರಗತಿಯಲ್ಲಿ ನಡೆಯುತ್ತಿದೆ. ಮಗುವನ್ನು ದತ್ತಕ್ಕೆ ಪಡೆಯಲು ಹಲವಾರು ಮಂದಿ ಮುಂದೆ ಬಂದಿದ್ದಾರೆ ಎಂದು ವರದಿಗಳು ತಿಳಿಸಿವೆ.
ಆದರೆ ಇಷ್ಟು ಬೇಗ ದತ್ತು ನೀಡುವ ಯೋಜನೆ ಇಲ್ಲ. ಮಗುವಿನ ಹೆತ್ತವರನ್ನು ಕಂಡು ಹುಡುಕುವ ಎಲ್ಲ ಪ್ರಯತ್ನಗಳು ಮುಗಿದಾದ ಮೇಲೆಯೇ ಎಲ್ಲ ಕಾನೂನು ಕ್ರಮಗಳು ಪೂರ್ತಿಯಾಗಿ ದತ್ತು ನೀಡಲಾಗುವುದುಎಂದು ಸಾಮಾಜಿಕ ಕಲ್ಯಾಣ ಸಚಿವಾಲಯ ತಿಳಿಸಿದೆ. ಅದುವರೆಗೆ ಅಲ್ ವಿಲಾಫಕ್ ಸಂರಕ್ಷಣಾ ಕೇಂದ್ರದಲ್ಲಿ ಮಗುವನ್ನು ಇರಿಸಲಾಗುವುದು. ಜೊತೆಗೆ ಮಗುವಿನ ಹೆತ್ತವರನ್ನು ಕಂಡು ಹುಡುಕಲಿಕ್ಕಾಗಿ ಸಾರ್ವಜನಿಕ ನೆರವು ಪಡೆಯಲಾಗುತ್ತಿದೆ. ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಳ್ಳಲಾಗುತ್ತಿದೆ. ಇಂಗ್ಲಿಷ್ ಮತ್ತು ಅರಬಿಯಲ್ಲಿರುವ ಟ್ವಿಟರ್ ಸಂದೇಶವನ್ನು ಹಲವಾರು ಮಂದಿ ಟ್ವೀಟ್ ಮಾಡಿದ್ದಾರೆ. ಮಗುವಿನ ಹೆತ್ತವರನ್ನು ಹುಡುಕಿಕೊಟ್ಟವರಿಗೆ 1000 ರಿಯಾಲ್ ನೀಡಲಾಗುವುದು ಎಂದು ಸ್ವದೇಶಿ ಸಾಮಾಜಿಕ ಮಾಧ್ಯಮಗಳು ವಾಗ್ದಾನ ಮಾಡಿವೆ ಎಂದು ವರದಿಗಳು ತಿಳಿಸಿವೆ.





