ಛತ್ತೀಸ್ ಗಡದಲ್ಲಿ ಮತ್ತೆ ಚರ್ಚ್ ದಾಳಿ: ಪಾದ್ರಿ ಮೇಲೆ ಹಲ್ಲೆ, ಗರ್ಭಿಣಿ ಪತ್ನಿಗೆ ಬೆಂಕಿ ಇಟ್ಟು ಉರಿಸುವ ವಿಫಲ ಯತ್ನ

ರಾಯ್‌ಪುರ, ಎಪ್ರಿಲ್ 19: ಛತ್ತೀಸ್‌ಗಡದ ಬಸ್ತಾರ್‌ನಲ್ಲಿ ಅಜ್ಞಾತ ವ್ಯಕ್ತಿಗಳು ಚರ್ಚ್‌ನಲ್ಲಿದ್ದ ಪಾದ್ರಿ ಮತ್ತು ಅವರ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದು ಅಲ್ಲಿದ್ದ ವಸ್ತುಗಳಿಗೆ ಬೆಂಕಿ ಹಚ್ಚಿದ್ದಾರೆಂದು ವರದಿಯಾಗಿದೆ. ಬಸ್ತಾರ್ ಜಿಲ್ಲೆಯ ಪೊಲೀಸ್ ಅಧೀಕ್ಷಕ ಆರ್. ಎನ್. ದಾಸ್‌ರು ತಿಳಿಸಿರುವ ಪ್ರಕಾರ ರವಿವಾರ ಎಪ್ರಿಲ್ 17ರಂದು ಜಿಲ್ಲೆಯ ಪರಪಾ ಠಾಣಾ ವ್ಯಾಪ್ತಿಯ ಕರನ್‌ಜಿ ಮಾತಾಗುಡಿ ಪಾರಾ ಗ್ರಾಮದಲ್ಲಿ ಶಸ್ತ್ರಗಳನ್ನುಹೊಂದಿದ್ದ ಇಬ್ಬರು ಚರ್ಚ್‌ಗೆ ದಾಳಿಯಿಟ್ಟು ಪಾದ್ರಿ ಮತ್ತು ಅವರ ಪತ್ನಿಯನ್ನು ಥಳಿಸಿದ್ದಾರೆ. ಹಲ್ಲೆಕೋರರು ಅಲ್ಲಿದ್ದ ಸಾಮಗ್ರಿಗಳಿಗೆ ಬೆಂಕಿ ಇಟ್ಟಿದ್ದಾರೆ. ಪಾದ್ರಿ ದೀನಬಂಧು ಸಮೆಲಿಯವರ ದೂರಿನ ಪ್ರಕಾರ ಪೊಲೀಸರು ಕೇಸು ದಾಖಲಿಸಿಕೊಂಡು ಆರೋಪಿಗಳನ್ನು ಹುಡುಕುತ್ತಿದ್ದಾರೆ.
ಪಾದ್ರಿ ದೀನಬಂಧು ಸಮೆಲಿಯವರು ದೂರು ದಾಖಲಿಸಿದೊಡನೆ ಪೊಲೀಸರು ಆರೋಪಿಗಳನ್ನು ಹುಡುಕಾಟ ಆರಂಭಿಸಿದ್ದು ಪೊಲೀಸ್ ಅಧೀಕ್ಷಕ ದಾಸ್‌ರು ಇಬ್ಬರು ಚರ್ಚ್‌ಗೆ ಬಂದು ಪ್ರಾರ್ಥನೆ ಮಾಡುವುದಾಗಿ ಹೇಳಿದ್ದರು. ಚರ್ಚ್ ಪ್ರವೇಶಿಸಿದ ನಂತರ ಪಾದ್ರಿ ಮತ್ತು ಅವರ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾರೆ ಮತ್ತು ಅಲ್ಲಿರುವ ವಸ್ತುಗಳಿಗೆ ಬೆಂಕಿಇಟ್ಟಿದ್ದಾರೆಂದು ಮಾಹಿತಿ ದೊರಕಿದೆ ಎಂದು ತಿಳಿಸಿರುವುದಾಗಿ ವರದಿಯಾಗಿದೆ. ದಾಳಿ ನಡೆಸಿದ ಬಳಿಕ ಇಬ್ಬರು ಆರೋಪಿಗಳು ಅಲ್ಲಿಂದ ಓಡಿಹೋಗಿದ್ದಾರೆ. ಪೊಲೀಸರಿಗೆ ಮಾಹಿತಿ ದೊರೆತೊಡನೆ ಚರ್ಚ್‌ಗೆ ಪೊಲೀಸ್ ಪಡೆಯನ್ನು ರವಾನಿಸಲಾಗಿದೆ ಎಂದು ಪೊಲೀಸಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ. ಆರೋಪಿಗಳ ವಿರುದ್ಧ ಐಪಿಸಿ 295,392,452,435,323 ಮತ್ತು 34ರ ಪ್ರಕಾರ ಪ್ರಕರಣ ದಾಖಲಿಸಲಾಗಿದೆಯೆಂದೂ ವರದಿಗಳು ತಿಳಿಸಿವೆ.







