ವೆಲೆನ್ಸಿಯಾ: ಬೈಕ್‌ಗಳ ಮುಖಾಮುಖಿ ಢಿಕ್ಕಿ
ಮಂಗಳೂರು, ಎ. 19: ಕಂಕನಾಡಿ ಬಳಿಯ ವೆಲೆನ್ಸಿಯಾ ವೃತ್ತದ ಬಳಿ ಬೈಕ್‌ಗಳ ನಡುವೆ ಢಿಕ್ಕಿ ಸಂಭವಿಸಿ ಚಾಲಕರು ಪಾರಾದ ಘಟನೆ ಇಂದು ಸಂಜೆ ನಡೆದಿದೆ.
ಸಂಜೆ ಸುಮಾರು 6:30ರ ಹೊತ್ತಿಗೆ ಕಂಕನಾಡಿ ಕಡೆಯಿಂದ ಬರುತ್ತಿದ್ದ ಡಿಸ್ಕವರಿ ಮತ್ತು ಜೆಪ್ಪು ಮಾರ್ಗವಾಗಿ ಕಂಕನಾಡಿ ಕಡೆಗೆ ತೆರಳುತ್ತಿದ್ದ ಪಲ್ಸರ್ ಬೈಕ್‌ಗಳ ನಡುವೆ ಢಿಕ್ಕಿ ಸಂಭವಿಸಿದೆ. ಪಲ್ಸರ್ ಚಾಲಕ ಕಂಕನಾಡಿಯ ನಿವಾಸಿ ಅನುಪ್ ಹಾಗೂ ಡಿಸ್ಕವರಿ ಚಾಲಕ ಸೂಟರ್‌ಪೇಟೆ ಬಳಿಯ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Next Story





