ಪುತ್ತೂರು: ಅಪರಿಚಿತ ಮೃತದೇಹ ಪತ್ತೆ
ಪುತ್ತೂರು:ಅಪರಿಚಿತ ಮೃತದೇಹವೊಂದು ಮಂಗಳವಾರ ಪುತ್ತೂರು ತಾಲೂಕಿನ ನೆಹರೂನಗರ ಸಮೀಪದ ರೈಲ್ವೇ ಹಳಿಯ ಬದಿಯಲ್ಲಿ ಪತ್ತೆಯಾಗಿದೆ. ನೆಹರುನಗರ ಸಮೀಪದಲ್ಲಿ ಮಂಗಳವಾರ ಮಧ್ಯಾಹ್ನದ ವೇಳೆಗೆ ಮಧ್ಯ ವಯಸ್ಸಿನ ಗಂಡಸಿನ ಮೃತದೇಹ ರೈಲ್ವೇ ಹಳಿ ಬದಿಯ ಚರಂಡಿಯಲ್ಲಿ ಪತ್ತೆಯಾಗಿದೆ. ಮೃತದೇಹದ ಗುರುತು ಪತ್ತೆಯಾಗಿಲ್ಲ. ರೈಲ್ವೇ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Next Story





