ಅಂಕೋಲಾ: ಪಿಎಸ್ಸೈ ಕುಮಾರ್ ಹಾಡಕಾರರಿಗೆ ಬೀಳ್ಕೊಡುಗೆ

ಅಂಕೋಲಾ, ಎ.19: ಅಂಕೋಲಾ ಪೊಲೀಸ್ ಠಾಣೆಯಲ್ಲಿ ದಕ್ಷ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಜನಪ್ರಿಯತೆಗಳಿಸಿದ ಪಿಎಸ್ಸೈ ಕುಮಾರ ಹಾಡಕಾರ ಅವರು ದಾಂಡೇಲಿ ನಗರ ಠಾಣೆಗೆ ವರ್ಗಾವಣೆಗೊಂಡ ಹಿನ್ನೆಲೆ ಶನಿವಾರ ಠಾಣೆಯಲ್ಲಿ ಪಿಐ ಅರುಣಕುಮಾರ ನೇತೃತ್ವದಲ್ಲಿ ಸಿಬ್ಬಂದಿ ವರ್ಗ, ಸಾರ್ವಜನಿಕರು ಮತ್ತು ವಿವಿಧ ಸಂಘಟನೆಯವರು ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಿದರು. ಹಿರಿಯ ನ್ಯಾಯವಾದಿ ಎಸ್.ಆರ್.ನಾರ್ವೇಕರ ಮಾತನಾಡಿ, ಯಾವುದೇ ಸರಕಾರಿ ನೌಕರರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವರ್ಗಾವಣೆಗೊಳ್ಳುವುದು ಸಹಜ ಪ್ರಕ್ರಿಯೆ. ಆದರೆ ಜನಸ್ನೇಹಿಯಾಗಿ ಕಾರ್ಯನಿರ್ವಹಿಸಿದ ಪಿಎಸ್ಸೈ ಹಾಡಕಾರ ಅವರು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿ, ಒಳ್ಳೆಯ ಅಧಿಕಾರಿಯಾಗಿ ಸಾರ್ವಜನಿಕರ ವಲಯಗಳಲ್ಲಿ ಕಾಣಿಸಿಕೊಂಡಿರುವುದು ಶ್ಲಾಘನೀಯ ಎಂದರು. ಪುರಸಭೆ ಅಧ್ಯಕ್ಷ ಭಾಸ್ಕರ ಕೇ.ನಾರ್ವೇಕರ, ಅವರು ಮಾತನಾಡಿ, ಕುಮಾರ ಹಾಡಕಾರ ಅವರು ಅಂಕೋಲೆಯ ಜನಮಾನಸದಲ್ಲಿ ಶಾಶ್ವ್ವತವಾಗಿ ನೆನಸುವಂತೆ ಕಾರ್ಯನಿರ್ವಹಿಸುವ ಜೊತೆಯಲ್ಲಿ ದಕ್ಷ ಅಧಿಕಾರಿಯಾಗಿ ಇನ್ನಿತರರಿಗೆ ಮಾದರಿಯಾಗಿದ್ದಾರೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪಿಎಸ್ಸೈ ಕುಮಾರ ಹಾಡಕಾರ, ನಮ್ಮ ಮೇಲಧಿಕಾರಿಗಳ ಮತ್ತು ಹಿರಿಯ ಕಿರಿಯ ಸಿಬ್ಬಂದಿಯ ಸಹಕಾರದಿಂದ ನಾನು ಪ್ರಮಾಣಿಕವಾಗಿ ಕಾರ್ಯನಿರ್ವಹಿಸಿದ್ದೇನೆ. ಅಲ್ಲದೆ ಠಾಣೆಯ ಹವಲ್ದಾರ ಶೇಣ್ವಿ ಇವರು ಪ್ರತಿಯೊಂದು ಪ್ರಕರಣದ ಮಾರ್ಗ ಸೂಚಿಯಾಗಿದ್ದರು ಎಂದರು.
ಪಿಐ ಅರುಣಕುಮಾರ ಜಿ. ಕೋಳೂರ ಅಧ್ಯಕ್ಷತೆ ವಹಿಸಿದ್ದರು. ಪಿಎಸ್ಸೈ ಎಚ್.ಓಂಕಾರಪ್ಪ, ಪುರಸಭೆ ಸದಸ್ಯ ಸಂದೀಪ್ ಜಿ. ಬಂಟ, ಕೆ.ಎಲ್.ಇ. ಕಾಲೇಜಿನ ಪ್ರಾಚಾರ್ಯ ವಿನಾಯಕ ಹೆಗಡೆ, ವಕೀಲ ಉಮೇಶ ನಾಯ್ಕ ಮಾತನಾಡಿದರು.
ವರದಿಗಾರ ಕೆ.ರಮೇಶ್, ಸುಭಾಶ್ ಕಾರೇಬೈಲ್, ಸಂಪಾದ ಗುನಗಾ, ಸೇರಿದಂತೆ ಹಲವರು ಮಾತನಾಡಿದರು. ಈ ಸಂದರ್ಭದಲ್ಲಿ ಎಎಸ್ಸೈಗಳಾದ ಎಸ್ಪಿ ಪೂಜಾರ, ದುರ್ಗಪ್ಪ ಕಲಘಟಗಿ, ವಸಂತ ನಾಯ್ಕ, ಲಲಿತಾ ರಜಪೂತ, ಪತ್ರಕರ್ತರಾದ ಮಂಜುನಾಥ ಜಾಂಬ್ಳೇಕರ್, ವಿದ್ಯಾಧರ ಮೊರಬಾ, ರಘು ಕಾಕರಮಠ, ನ್ಯಾಯವಾದಿ ಎನ್.ಐ.ಬಂಟ್, ಪುರಸಭೆ ನಾಮಮಾತ್ರ ಸದಸ್ಯ ನವಾಝ್ ಶೇಖ್, ನಾಗರಾಜ ಐಗಳ, ಅರ್ಪಣ ಭಟ್, ಸಿಬ್ಬಂದಿ ವಸಂತ ನಾಯ್ಕ, ಜಿ.ಬಿ.ರಾಣೆ, ಸಂತೋಷ, ಮದರಸಾಬ್ ಚಿಕ್ಕೇರಿ, ನಾಗೇಶ ಹರಿ ಕಂತ್ರ, ರಾಜೇಶ ನಾಯ್ಕ, ವಿಜಯ ರಾಠೋಡ, ರೂಪಾ ಗೌಡ, ವಾಣಿ ನಾಯಕ ಮತ್ತಿತರರು ಉಪಸ್ಥಿತರಿದ್ದರು. ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ್ ನಾಯ್ಕ ನಿರೂಪಿಸಿದರು. ಮೋಹನದಾಸ್ ಶೇಣ್ವಿ ಮಾತನಾಡಿ, ವಂದಿಸಿದರು.







