Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಕನ್ಹಯ್ಯ ಸಿಕ್ಕ ಮೇಲೆ ರೋಹಿತ್ ಮರೆತು...

ಕನ್ಹಯ್ಯ ಸಿಕ್ಕ ಮೇಲೆ ರೋಹಿತ್ ಮರೆತು ಹೋಗಿದ್ದು ಸುಳ್ಳೇ?

ಶ್ರೀಧರ್ ಪ್ರಭು , ಬೆಂಗಳೂರುಶ್ರೀಧರ್ ಪ್ರಭು , ಬೆಂಗಳೂರು19 April 2016 10:45 PM IST
share
ಕನ್ಹಯ್ಯ ಸಿಕ್ಕ ಮೇಲೆ ರೋಹಿತ್ ಮರೆತು ಹೋಗಿದ್ದು ಸುಳ್ಳೇ?

ನಾನು ಅನೇಕ ದಿನಗಳಿಂದ ಈ ಬೆಳವಣಿಗೆಗಳನ್ನು ಎಚ್ಚರಿಕೆಯಿಂದ ಗಮನಿಸುತ್ತಿದ್ದೇನೆ. ಅಕ್ಕ ಮಾಯಾವತಿಯವರನ್ನು ಟೀಕಿಸುವ ಯಾವುದೇ ಅವಕಾಶವನ್ನೂ ಯಾವ ಮಾಧ್ಯಮದವರೂ ಕಳೆದುಕೊಳ್ಳುವುದಿಲ್ಲ. ಕಾಂಗ್ರೆಸ್ ಭಾಜಪ ಮತ್ತು ಎಡ ಚಿಂತನೆಯವರು, ಅದರಲ್ಲೂ ಈ ಪಕ್ಷಗಳಲ್ಲಿರುವ ದಲಿತರು ಮಾಯಾವತಿಯವರನ್ನು ಅತ್ಯಂತ ತೀಕ್ಷ್ಣವಾಗಿ ಟೀಕಿಸುತ್ತಾರೆ. ಸಂತೋಷ. ಮಾಯಾವತಿಯವರೂ ಸೇರಿದಂತೆ ಸಾರ್ವಜನಿಕ ಜೀವನದಲ್ಲಿರುವ ಯಾವ ವ್ಯಕ್ತಿಯೂ ಟೀಕೆಗೆ ಅತೀತರಲ್ಲ. ಆಗಿರಲೂ ಕೂಡದು.

ಆದರೆ ಟೀಕೆ ಮಾಡುವಾಗ ನಾವು ಸತ್ಯಕ್ಕೆ ಮತ್ತು ತಥ್ಯಕ್ಕೆ ನಿಷ್ಠರಾಗಿರಬೇಕಲ್ಲವೇ? 
ಮೊದಲನೇ ವಿಚಾರ ಮಾಯಾವತಿಯವರು ಹೇಳಿದ್ದಾದರೂ ಏನು? ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿರುವಂತೆ ಅವರು ಹೇಳಿದ್ದು ಹೀಗೆ:

//Mayawati also took on JNUSU president Kanhaiya Kumar, saying that even though he considered Rohith Vemula, the Dalit scholar who committed suicide in Hyderabad, as his ideal, he belonged to the forward Bhumihar caste. She said that Kanhaiya Kumar was associated with the Communist ideology which was “totally different from that of Ambedkar”. “While communists advocate end of economic inequality as mean to end poverty, Ambedkar said in India, poverty can not be ended without eliminating casteist and a discrimination-based social system,” said Mayawati.//

ಈ ಮೇಲಿನ ವಿಚಾರಗಳಲ್ಲಿ ಯಾವುದು ಸುಳ್ಳು? ಕನ್ಹಯ್ಯ ಭೂಮಿಹಾರ ಜಾತಿಗೆ ಸೇರಿದ್ದು ಸುಳ್ಳೇ? ಆತ ಕಮ್ಯುನಿಸ್ಟ್ ಚಿಂತನೆ ಹೊಂದಿರುವುದು ಸುಳ್ಳೇ? ಒಬ್ಬ ಅಪ್ಪಟ ಅಂಬೇಡ್ಕರ್ ವಾದಿಗೆ ಮಾರ್ಕ್ಸ್ ವಾದಿಗಳ ಜೊತೆಗೆ ಸೈದ್ಧಾಂತಿಕ ಭಿನಾಭಿಪ್ರಾಯಗಳಿರುವುದು ಸುಳ್ಳೇ? ಭಾರತದ ಸಮಸ್ಯೆಗಳಿಗೆ ಸರ್ವಾಂಗೀಣ ಪರಿಹಾರ ಕೇವಲ ಸಂಪತ್ತಿನ ಸಮ ಹಂಚಿಕೆಯಿಂದ ಸಾಧ್ಯವಾಗದು ಎಂದು ಬಾಬಾ ಸಾಹೇಬರು ಹೇಳಿರುವುದು ಸುಳ್ಳೇ?

ಮಾಯಾವತಿಯವರು ಕನ್ಹಯ್ಯ ಭೂಮಿಹಾರ ಜಾತಿಗೆ ಸೇರಿದ್ದ ಕಾರಣದಿಂದಾಗಿ ಅವರನ್ನು ದ್ವೇಷಿಸಬೇಕು ಎಂದು ಮಾಯಾವತಿಯವರು ಹೇಳಿದ್ದಾರೆಯೇ?

ಈ ಹೇಳಿಕೆಗಳಲ್ಲಿ ಎಲ್ಲಾದರೂ ಕನ್ಹಯ್ಯ ಕುರಿತು ಹೀಗಳಿಕೆ ಇದೆಯೇ? ಮಾಯಾವತಿಯವರ ಹೇಳಿಕೆಯನ್ನು ಪಕ್ಕಕ್ಕಿಡೋಣ. ಅವರು ಎತ್ತಿದ ಪ್ರಶ್ನೆಗಳು ಸೈದ್ಧಾಂತಿಕವೇ ಅಥವಾ ವಯಕ್ತಿಕ ಟೀಕೆಯೇ? ಕಮ್ಯುನಿಸ್ಟ್ ಚಳುವಳಿಗಳಲ್ಲಿ ಅದರಲ್ಲೂ ಅವರ ವಿದ್ಯಾರ್ಥಿ ಚಳುವಳಿಗಳಲ್ಲಿ ನೇತೃತ್ವ ಕೊಡುತ್ತಿರುವವರ ಜಾತಿಗಳು ಅಷ್ಟೊಂದು ಗೌಣವೇ? ಎಡ ಚಳುವಳಿ ಪ್ರಜ್ಞಾಪೂರ್ವಕವಾಗಿ ವಿದ್ಯಾರ್ಥಿ ಚಳುವಳಿಗಳ ನೇತೃತ್ವ ತಳಸಮುದಾಯಗಳಿಗೆ ನೀಡುತ್ತಿದೆಯೇ?

ಜೆ ಏನ್ ಯುನಲ್ಲಿ ಅಪಾರ ಸಂಖ್ಯೆಯ ಬಹುಜನ ಸಮುದಾಯವಿದೆ ಆದರೆ ಕಮ್ಯುನಿಸ್ಟ್ ಚಿಂತನೆಯ ವಿದ್ಯಾರ್ಥಿ ಸಂಘಟನೆ AISF ನವರು ಒಬ್ಬ ಭೂಮಿಹಾರನನ್ನೇ ಅಧ್ಯಕ್ಷ ಪದವಿಗೆ ಆರಿಸಿದ್ದು ಸುಳ್ಳೇ? ಇದೇ ಜೆ ಏನ್ ಯು ನಲ್ಲಿ ಯೆಚೂರಿ ಕರಾಟ್ ಏನ್ ರಾಮ್ ಇತ್ಯಾದಿ ವಿದ್ಯಾರ್ಥಿ ಮುಖಂಡರು ಎಡಮುಖಿ ವಿದ್ಯಾರ್ಥಿ ಚಳುವಳಿಗೆ ನೇತೃತ್ವ ಕೊಟ್ಟಿದ್ದು ಸುಳ್ಳೇ? ನಂತರದಲ್ಲಿ ಯೆಚೂರಿ ಮತ್ತು ಕರಾಟ್ ಪಕ್ಷದ ಅತ್ಯುನ್ನತ ಹುದ್ದೆಗೆ ಏರಿದ್ದು ಸುಳ್ಳೇ? ನಂಬೂದರಿಪಾಡರು ಪಕ್ಷದ ಚುಕ್ಕಾಣಿ ಹಿಡಿದಾಗ ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಯೆಚೂರಿ ಮತ್ತು ಕರಾಟ್ ಕೇಂದ್ರ ಸಮಿತಿಗೆ ಬಂದಿದ್ದು ಸುಳ್ಳೇ? ಇಂದು ಇಡೀ ಕಮ್ಯುನಿಸ್ಟ್ ಪರ ವಿದ್ಯಾರ್ಥಿ ಚಳುವಳಿಯ ಸಾರ್ವಜನಿಕ ಮುಖವಾಗಿ ಕನ್ಹಯ್ಯರನ್ನು ಬಿಂಬಿಸುತ್ತಿರುವುದು ಸುಳ್ಳೇ? ಕನ್ಹಯ್ಯ ಸಿಕ್ಕ ಮೇಲೆ ರೋಹಿತ್ ಮರೆತು ಹೋಗಿದ್ದು ಸುಳ್ಳೇ?

ದೇಶದ ವಿದ್ಯಾರ್ಥಿ ಚಳುವಳಿ ರೋಹಿತ್ ಘಟನೆ ನಂತರದಲ್ಲಿ ಕ್ರೋಢೀಕರಣಗೊಂಡು ಅಂಬೇಡ್ಕರ್ವಾದದೆಡೆ ಹೊರಳಿಕೊಳ್ಳುತ್ತಿದ್ದಾಗ ಕನ್ಹಯ್ಯ ಮತ್ತು ವೇಮುಲ ವಿಚಾರಗಳನ್ನು ಬೆರೆಸಿ ಕಲಸುಮೇಲೋಗರ ಮಾಡಿ ಒಟ್ಟಾರೆ ಚಳುವಳಿಯನ್ನು ‘ಕನ್ಹಯ್ಯಮಯ’ ವಾಗಿಸುವ ಪ್ರಯತ್ನ ನಡೆಯುತ್ತಿದೆಯೇ? ಅಂಬೇಡ್ಕರ್ವಾದವನ್ನು ದೇಶ ತಬ್ಬಿಕೊಳ್ಳುವುದನ್ನು 'ಕನ್ಹಯ್ಯವಾದ' ತಿಂದು ಹಾಕುತ್ತಿದೆಯೇ? ಅಂಬೇಡ್ಕರ್ವಾದವನ್ನು Co-opt ಮಾಡಿಕೊಳ್ಳಲಾಗುತ್ತಿದೆಯೇ? ಇದನ್ನು ತಪ್ಪಿಸುವ ಅಧಿಕಾರ ಮತ್ತು ಜವಾಬ್ದಾರಿ ಬಹುಜನ ಚಳುವಳಿಯ ಮೇಲಿಲ್ಲವೆ?

ಇದು ಅಪರಾಧವೇ? ಈ ಅಪರಾಧಕ್ಕಾಗಿ ಬಹುಜನ ನಾಯಕತ್ವ ಇನ್ನೆಷ್ಟು ದಿನ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕು?

share
ಶ್ರೀಧರ್ ಪ್ರಭು , ಬೆಂಗಳೂರು
ಶ್ರೀಧರ್ ಪ್ರಭು , ಬೆಂಗಳೂರು
Next Story
X