Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಹಿಂದಿನಿಂದ ರಪ್ ಅಂತ ಒಂದು ಲಾಠಿ ಏಟು...

ಹಿಂದಿನಿಂದ ರಪ್ ಅಂತ ಒಂದು ಲಾಠಿ ಏಟು ಬಿತ್ತು...ನಾನು ಒಬ್ಬನೇ, ಅವರು ಏಳು ಜನ..ಅಸಹಾಯಕನಾಗಿ ಏಟು ತಿಂದೆ

ಪಿ ಎಫ್ ಪ್ರತಿಭಟನೆ ವರದಿ ಮಾಡಲು ಹೋಗಿ ಪೋಲಿಸರಿಂದ ಹಿಗ್ಗಾಮುಗ್ಗಾ ಥಳಿಸಲ್ಪಟ್ಟ ಪತ್ರಕರ್ತನ ಅಳಲು

ಶರಣ್ ಗುರಿಕಾರಶರಣ್ ಗುರಿಕಾರ19 April 2016 11:31 PM IST
share
ಹಿಂದಿನಿಂದ ರಪ್  ಅಂತ ಒಂದು ಲಾಠಿ ಏಟು ಬಿತ್ತು...ನಾನು ಒಬ್ಬನೇ, ಅವರು ಏಳು ಜನ..ಅಸಹಾಯಕನಾಗಿ ಏಟು ತಿಂದೆ

ನಾನು ಶರಣ್ ಗುರಿಕಾರ,ಜನಶ್ರೀ ಕ್ರೈಂ ವರದಿಗಾರ, ಇವತ್ತು (ಮಂಗಳವಾರ ) ಸುಮಾರು 10 ಗಂಟೆಗೆ ಎಂದಿನಂತೆ ನಾನು ಆಫೀಸ್ ಗೆ ಹೋದೆ...ಹೊಸೂರು ರಸ್ತೆಯ ಕ್ರೈಸ್ಟ್ ಕಾಲೇಜ್ ಬಳಿ 50 ಜನ ಮಹಿಳೆಯರು ಫಿಎಫ್ ಗಾಗಿ ಪ್ರತಿಭಟನೆ ಮಾಡ್ತಿದ್ದಾರೆ..ನೀವು ಹೋಗಿ ಸುದ್ದಿ ಮಾಡಿ ಅಂತ ನಮ್ಮ ಮುಖ್ಯಸ್ಥರು ಹೇಳಿದ್ರು..ಅವಸರದಲ್ಲೇ ಹೊರಟ ನನಗೆ ಕ್ರೈಸ್ಟ್ ಕಾಲೇಜ್ ಮುಟ್ಟುವ ಮೊದಲೇ ಕೆಲ ಮಹಿಳೆಯರು ಅಳುತ್ತ ಬರ್ತಿದ್ರು...ಲೋಗೋ ಕೈಯಲ್ಲಿದ್ದ ಕಾರಣ ನನ್ನ ನೋಡಿದ ಮಹಿಳೆಯರು ಸಿಕ್ಕಾಪಟ್ಟೇ ಅಳಲು ಶುರು ಮಾಡಿದ್ರು...ಅವರ ಚದರಿದ ಕೂದಲು ಹಾಗು ಮೈ ಮೇಲೆ ಇದ್ದ ರಕ್ತದ ಕಲೆಗಳನ್ನು ನೋಡಿದ್ರೆ ಇವರ ಮೇಲೆ ಹಲ್ಲೆಯಾಗಿದೆ ಅನ್ನೋದು ಎದ್ದು ಕಾಣ್ತಿತ್ತು..ಅವರು ಅಳುತ್ತ ತಮ್ಮ ನೋವು ತೋಡಿಕೊಳ್ತಿದ್ರು..ನಾನು ಲೋಗೋ    ಹಿಡಿದಿದ್ದೆ...ಹಿಂದಿನಿಂದ ರಪ್  ಅಂತ ಒಂದು ಲಾಠಿ ಏಟು ಬಿತ್ತು...ಅಲ್ಲೆ ಕುಸಿದು ಬಿದ್ದ ನನಗೆ ಚೇತರಿಸಿಕೊಳ್ಳುವ ಮೊದಲೇ ಹುಳಿಮಾವು ಇನ್ಸ್‌ಪೆಕ್ಟರ್, ವಿಜಯ ಕುಮಾರ್ ಹಾಗೂ ಅದೇ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಚಂದ್ರಪ್ಪ ಹಾಗೂ ಮೂವರು ಕ್ರೈಂ ಪಿಸಿಗಳು ನನ್ನ.ಮೇಲೆ ಮುಗಿದ ಬಿದ್ರು ..ಅದನ್ನ ಶೂಟ್ ಮಾಡುತ್ತಿದ್ದ ನಮ್ಮ ಕ್ಯಾಮರ್ ಮನ್ ಗೆ ಹೊಡೆದು ಕ್ಯಾಮರ್ ವನ್ನು ನುಚ್ಚು ನೂರು ಮಾಡಿದ್ರು..ಕ್ಯಾಮರದಲ್ಲಿ ಕ್ಯಾಸೆಟ್ ಸಹ ತೆಗೆದುಕೊಂಡ್ರು..ಬಳಿಕ ನೇರವಾಗಿ ನನ್ನ ಬಳಿ ಬಂದು ನಿಮ್ಮ ಲಾಭಕೊಸ್ಕರ ಏನ್ ಬೇಕಾದ್ರು ಮಾಡ್ತೀರಾ ಸೂಳೆ ಮಕ್ಕಳೇ ಅಂತ ಸಿಕ್ಕ ಪಟ್ಟೆ ಹೊಡೆದ್ರು... ನಿಮ್ಮಿಂದನೇ ನಾವು ನೆಮ್ಮದಿ ಹಾಕಿ ಮಾಡಿಕೊಂಡಿವಿ ಬೋಳಿ ಮಕ್ಕಳೆ ಅಂತ ಅಸಹ್ಯವಾಗಿ ಬೈದು ಬಿಲ್ಡಿಂಗ್ ವೊಂದರಲ್ಲಿ ಕರೆದೋಯ್ಸು  ಹಿಗ್ಗಾಮಗ್ಗ ತಳಿಸಿದ್ರು.. ಅಲ್ಲಿವರೆಗೂ ನೋವುಂಡು ನಾನು ತಾಳ್ಮೆ ಯಿಂದನೇ ಇದ್ದೆ... ನಾನು ಒಬ್ಬನೇ ಅವರು ಏಳು ಜನ...ಅಸಹಾಯಕನಾಗಿ  ಏಟು ತಿಂದು ಸುಮ್ಮನೆ ನಿಂತಿದ್ದೆ..ಅಷ್ಟೊತ್ತಿಗೆ ಆಫೀಸ್ ನವರಿಗೆ ಸುದ್ದಿ ತಿಳಿತು....ಅಷ್ಟೊತ್ತಿಗೆ ನನ್ನ ಮೇಲೆ ಹಲ್ಲೆ ಮಾಡಿದ ಪೊಲೀಸರು ಪರಾರಿಯಾಗಿದ್ರು...ಅಷ್ಟಕ್ಕೂ ಆ ಇನ್ಸ್‌ಪೆಕ್ಟರ್  ಹಾಗೂ ತಂಡ ನನ್ನ ಮೇಲೆ ಹಲ್ಲೆ ಮಾಡಿದ್ದು, ಏಕೆ.. ಅಥವಾ ಮಾಧ್ಯಮದವರು ಅಂದ್ರೆ ಅಷ್ಟೊಂದು ಕೀಳಾ ಪೊಲೀಸ್ರಿಗೆ...? ಅಥವಾ ವರದಿಗಾರಿಕೆಯನ್ನ ಮಾಡೋದೆ ತಪ್ಪಾ..? ಸಮಾಜದ ನಾಲ್ಕನೇ ಅಂಗ ಅನ್ನೋದು ಕೇವಲ ಪುಸ್ತಕದಲ್ಲಿ ಮಾತ್ರನಾ..? ಹಾಗಾದ್ರೆ ಪತ್ರಕರ್ತರಿಗೆ ಎಲ್ಲಿದೆ ಭದ್ರತೆ...15,20 ಸಾವಿರಕ್ಕೆ ನೆಮ್ಮದಿಯಿಲ್ಲದೆ ಕೆಲಸ ಮಾಡಿ, ಸಮಾಜದ ಡೊಂಕನ್ನ ಸಮಾಜಕ್ಕೆ ತೋರಿಸಿ, ನೀವು ಬದಲಾಗಿ ಅನ್ನೋರ ಬದುಕು ಇಷ್ಟೊಂದು ಕೀಳಾ..? ನಮಗೆ ಯಾರಿಂದ ಇದೆ ಭದ್ರತೆ..? ನಾವು ಯಾಕಾಗಿ ಸಮಾಜ ತಿದ್ದೋ ಪ್ರಯತ್ನ ಮಾಡ್ತಿದ್ದಿವಿ...ಪೊಲೀಸರಿಗೆ ಬೆನ್ನೆಲುಬಾಗಿ ನಿಂತು ಅವರ ಕರ್ತವ್ಯವನ್ನು ಮೆಚ್ಚಿ ಕೊಂಡಾಡ್ತಿವೇಕೆ...ಕೆಟ್ಟವರ ಬಣ್ಣ ಬಯಲಿಗೆಳೆದು ನೀವು ಇಂತವರಿಂದ ದೂರವಿರಿ, ನಿಮ್ಮ ಜತೆ ನಾವಿದ್ದಿವಿ ಅಂತ ದಿನ ಬಾಯಿ ಬಡಕೊಳ್ಳೊ ನಮಗೆ ಎಲ್ಲಿದೆ ನ್ಯಾಯ ...? ಗೊತ್ತು ಗುರಿ ಇಲ್ದೋರಿಗಾಗಿ ದಿನ ಸಾಯೋ ನಾವು..ಭದ್ರತೆನೇ ಇಲ್ದೆ ಬದುಕೋದು ಯಾಕಾಗಿ...ಈ ಹುದ್ದೆ  ದೂರದಿಂದ ನೋಡೋರೊಗೆ ಮಾತ್ರ ಚಂದ ಹಾಗೂ ಹೆಮ್ಮೆ ತರೋ ವಿಷಯ..ಆದ್ರೆ ನಮಗೆ....??

...
ಇದೀಗ ಇನ್ಸ್‌ಪೆಕ್ಟರ್ ಹಾಗೂ ತಂಡದ ಮೇಲೆ ಮೈಕೋಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಆಸ್ಪತ್ರೆ ಸೇರಿದ್ದೇನೆ..

ಪ್ರತಿ ಪ್ಯಾಕೇಜ್  ಕೊನೆಯಲ್ಲಿ ನಾವು ಬರಿಯೋ ಕಾದು ನೋಡೋಣ ಅನ್ನೋ ಸ್ಲೋಗನ್ ನ್ನ ಮತ್ತೊಮ್ಮೆ ಬರಿತ್ತಿದ್ದಿನಿ...ಕಾದು ನೋಡೋಣ
   
        ಶರಣ್ ಗುರಿಕಾರ
ಪೊಲೀಸರಿಂದ ಕಾರಣವಿಲ್ಲದೆ ಹಲ್ಲೆಗೊಳಗಾದವನು

share
ಶರಣ್ ಗುರಿಕಾರ
ಶರಣ್ ಗುರಿಕಾರ
Next Story
X