ತಲಾಕ್ ಪ್ರಶ್ನಿಸಿದ ಶಾಯರಾ ಬಾನು ಸ್ಫೋಟಕ ಹೇಳಿಕೆ
ಆರು ಬಾರಿ ಒತ್ತಾಯದ ಗರ್ಭಪಾತ
ನೈನಿತಾಲ್, ಎ.19: ಮೂರು ಬಾರಿ ತಲಾಕ್ ಹೇಳುವ ಮೂಲಕ ವಿಚ್ಛೇದನ ನೀಡುವ ಪದ್ಧತಿಯ ಕಾನೂನುಬದ್ಧತೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿರುವ ಶಾಯರಾ ಬಾನು ಇದೀಗ ದೇಶಾದ್ಯಂತ ಸುದ್ದಿಯ ಕೇಂದ್ರವಾಗಿದ್ದಾರೆ.
ಎಲ್ಲ ಪ್ರತಿಕೂಲ ಪರಿಸ್ಥಿತಿಯ ನಡುವೆಯೂ ಇನ್ಯಾವುದೇ ಅಗ್ನಿ ಪರೀಕ್ಷೆ ಸ್ವೀಕರಿಸುವ ಸ್ಥಿತಿಯಲ್ಲಿ ಇಲ್ಲದ ಕಾರಣ ಸುಪ್ರೀಂಕೋರ್ಟ್‌ಗೆ ಮೊರೆ ಹೋಗಿರುವುದಾಗಿ 37 ವರ್ಷದ ಮಹಿಳೆ ವಿವರಿಸಿದರು. ಉಧಾಂಸಿಂಗ್ ನಗರ ಜಿಲ್ಲೆಯ ಕಾಶಿಪುರದ ಇವರು ಸಮಾಜಶಾಸ್ತ್ರದ ಸ್ನಾತಕೋತ್ತರ ಪದವೀಧರೆ. ನನಗೆ ನ್ಯಾಯ ಬೇಕು. ಜೀವನವಿಡೀ ಅದನ್ನೇ ಪ್ರತಿಪಾದಿಸುತ್ತೇನೆ ಎಂದು ಹೇಳಿದರು.
ಪತಿಯ ಒತ್ತಡದಿಂದಾಗಿ ಆರು ಬಾರಿ ಗರ್ಭಪಾತ ಮಾಡಿಸಿಕೊಳ್ಳಬೇಕಾಯಿತು. ಆತ ಬಲಾತ್ಕಾರವಾಗಿ ಗರ್ಭಪಾತ ಗುಳಿಗೆ ತಿನ್ನಿಸಿದ್ದರಿಂದ ಆರೋಗ್ಯಸ್ಥಿತಿ ಸಂಪೂರ್ಣ ಹದಗೆಟ್ಟಿದೆ ಎಂದು ಇಬ್ಬರು ಮಕ್ಕಳ ತಾಯಿಯಾದ ಶಾಯರಾ ವಿವರಿಸಿದರು. ಇದೀಗ ಪತಿಯ ಜತೆಗೇ ಇರುವ ಮಕ್ಕಳ ಜತೆ ಬಾಳ್ವೆ ನಡೆಸಲು ಬಯಸಿರುವುದಾಗಿ ತಿಳಿಸಿದರು.
Next Story





