ಪ್ರತಿಷ್ಠಿತ ಪುಲಿಟ್ಝರ್ ಪ್ರಶಸ್ತಿ ಪ್ರದಾನ
ನ್ಯೂಯಾರ್ಕ್, ಎ. 19: ಅಮೆರಿಕದ ಮುದ್ರಣ ಪತ್ರಿಕೋದ್ಯಮ ಮತ್ತು ಕಲಾ ಕ್ಷೇತ್ರದ ಅತ್ಯಂತ ಪ್ರತಿಷ್ಠಿತ ಪುಲಿಟ್ಝರ್ ಪ್ರಶಸ್ತಿಗಳನ್ನು ಪುಲಿಟ್ಝರ್ ಮಂಡಳಿಯು ಇಲ್ಲಿನ ಕೊಲಂಬಿಯ ವಿಶ್ವವಿದ್ಯಾನಿಲಯದಲ್ಲಿ ಸೋಮವಾರ ಪ್ರದಾನ ಮಾಡಿದೆ.
ಈ ವರ್ಷ ಪುಲಿಟ್ಝರ್‌ನ 100ನೆ ಪ್ರಶಸ್ತಿ ಪ್ರದಾನವಾಗಿದೆ. ಪತ್ರಿಕೆಯೊಂದರ ಪ್ರಕಾಶಕ ಜೋಸೆಫ್ ಪುಲಿಟ್ಝರ್‌ರ ಹೆಸರಿನಲ್ಲಿ 1917ರಲ್ಲಿ ಪ್ರಶಸ್ತಿಯನ್ನು ಸ್ಥಾಪಿಸಲಾಗಿತ್ತು.
‘ದ ಟ್ಯಾಂಪ ಬೇ ಟೈಮ್ಸ್’ನ ಲಿಯೊನೋರಾ ಲಾಪೀಟರ್ ಆ್ಯಂಟನ್ ಮತ್ತು ಆ್ಯಂಟನಿ ಕಾರ್ಮಿಯರ್ ಹಾಗೂ ‘ದ ಸ್ಯಾರಸೋಟ ಹೆರಾಲ್ಡ್-ಟ್ರಿಬ್ಯೂನ್’ನ ಮೈಕಲ್ ಬ್ರಾಗ ಅವರಿಗೆ ತನಿಖಾ ವರದಿಗಾರಿಕೆಯ ಪ್ರಶಸ್ತಿಗಳನ್ನು ನೀಡಲಾಗಿದೆ.
‘ದ ವಾಶಿಂಗ್ಟನ್ ಪೋಸ್ಟ್’ನ ಸಿಬ್ಬಂದಿಗೆ ರಾಷ್ಟ್ರೀಯ ವರದಿಗಾರಿಕೆಗಾಗಿ ನೀಡಲಾಗಿದೆ.
‘ದ ನ್ಯೂಯಾರ್ಕ್ ಟೈಮ್ಸ್’ನ ಆ್ಯಲಿಸಾ ಜೆ. ರೂಬಿನ್ ಅಂತಾರಾಷ್ಟ್ರೀಯ ವರದಿಗಾರಿಕೆಗಾಗಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.
‘ದ ಲಾಸ್ ಏಂಜಲಿಸ್ ಟೈಮ್ಸ್’ ಸಿಬ್ಬಂದಿ ಬ್ರೇಕಿಂಗ್ ನ್ಯೂಸ್‌ಗಾಗಿ ಪ್ರಶಸ್ತಿ ಬಾಚಿಕೊಂಡಿದ್ದಾರೆ.





