ಚಂಡಿಗಡದಲ್ಲಿ ಹೆಣ್ಣುಮಕ್ಕಳು ಉದ್ದ ಬಟ್ಟೆ ಧರಿಸಬೇಕು, ತುಂಡು ಬಟ್ಟೆ ಧರಿಸಿದರೆ ಬಂಧನ
ನೈಟ್‌ಕ್ಲಬ್‌ಗಳಿಗೆ ತೀವ್ರ ನಿಯಂತ್ರಣ!

ಹೊಸದಿಲ್ಲಿ, ಎಪ್ರಿಲ್ 20: ಚಂಡಿಗಡದ ನೈಟ್ ಕ್ಲಬ್‌ಗಳಿಗೆ ಇನ್ನು ತುಂಡು ಬಟ್ಟೆ ಧರಿಸಿ ಯುವತಿಯರು ಹೋಗುವಂತಿಲ್ಲ. ಇದನ್ನು ನಿಯಂತ್ರಿಸಲು ಚಂಡಿಗಡ ಸ್ಥಳೀಯಾಡಳಿತ ಮುಂದಾಗಿದೆ. ಗೌರವಾರ್ಹ ರೀತಿಯಲ್ಲಿ ಬಟ್ಟೆ ಧರಿಸಿ ಬಂದವರಿಗೆ ಪ್ರವೇಶ ನೀಡುವಂತೆ ಕ್ಲಬ್‌ಗಳಿಗೆ ಕ್ರಮಕೈಗೊಳ್ಳಲು ಅದು ಮುಂದಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ನಿಯಂತ್ರಣ ಏರ್ಪಡಿಸುವ ಈ ನಿರ್ದೇಶನಗಳ ವಿರುದ್ಧ ಈಗಾಗಲೇ ಬಹಳಷ್ಟು ಮಂದಿ ಟೀಕೆಯೊಂದಿಗೆ ರಂಗಪ್ರವೇಶಿಸಿದ್ದಾರೆ. ಆದರೆ ನಗರದ ಬಾರ್‌ಗಳಲ್ಲಿ, ನೈಟ್ ಕ್ಲಬ್‌ಗಳಲ್ಲಿ ದೇಶದ್ರೋಹದಂತಹ ವಿಷಯಗಳು ಸಂಭವಿಸುತ್ತಿವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಎಪ್ರಿಲ್ ಒಂದರಿಂದ ಈ ನಿಯಮ ಜಾರಿಗೆ ಬಂದಿದೆ. ಬಾರ್‌ಗಳು ಸಮಯಕ್ರಮವನ್ನು ಎರಡುಗಂಟೆ ಕಡಿಮೆ ಮಾಡಿ ರಾತ್ರೆ ಹನ್ನೆರಡಕ್ಕೆ ಸೀಮಿತಗೊಳಿಸಲಾಗಿದೆ. ಅಲ್ಲದೆ ಬಾರ್ ಮಾಲಕರ ಮೇಲೆ ಕಠಿಣ ನಿಯಂತ್ರಣದ ವ್ಯವಸ್ಥೆಗೆ ಮುಂದಾಗಿದೆ. ಗೌರವಾರ್ಹವಲ್ಲದ ರೀತಿಯಲ್ಲಿ ಬಟ್ಟೆಧರಿಸಿ ಬರುವ ಯವತಿಯರಿಗೆ ಪ್ರವೇಶ ನೀಡಿದರೆ ನೈಟ್ ಕ್ಲಬ್‌ಗಳ ಲೈಸನ್ಸ್ ರದ್ದು ಪಡಿಸಲಾಗುವುದು.
ಡ್ಯೂಟಿ ಕಮಿಶನ್ ಚೇರ್‌ಮೆನ್ ಮತ್ತುಮುನ್ಸಿಪಲ್ ಕಾರ್ಪೊರೇಶನ್ ಕಮಿಶನರ್ ಚಂಡಿಗಡ ಪೊಲೀಸ್ ಸುಪರಿಂಟೆಂಡೆಂಟ್ ಆರೋಗ್ಯವಿಭಾಗ ನಿರ್ದೇಶಕರು ಎಕ್ಸೈಸ್ ಕಮಿಶನರ್ ಟ್ಯಾಕ್ಸ್ ಕಮಿಶನರ್ ಸದಸ್ಯರಿರುವ ಸಮಿತಿ ಇಂತಹ ವಿಷಯಗಳನ್ನು ಪರಿಶೀಲಿಸಿ ಕ್ರಮಕೈಗೊಳ್ಳಲಿದೆ. ನೈಟ್‌ಕ್ಲಬ್‌ಗಳು ಡಿಸ್ಕೊತೆಕ್‌ಗಳು ಶಿಷ್ಟಾಚಾರವನ್ನು ಪಾಲಿಸುವುದಿಲ್ಲ ಎಂದು ಅನಿಸಿದರೆ ಲೈಸನ್ಸ್ ನವೀಕರಣ ನಡೆಸದಿರುವ ಅಧಿಕಾರವೂ ಇವರಿಗೆ ಇದೆ.
ಶಿಷ್ಟಾಚಾರ ರಹಿತ ವಸ್ತ್ರಧಾರಿ ಯುವತಿಯರಿಗೆ ಪ್ರವೇಶ ನೀಡುವುದು ಅಂತಹ ಚಿತ್ರಗಳನ್ನು ಉಪಯೋಗಿಸಿ ಜಾಹೀರಾತು ನೀಡುವುದು ನಿಷೇಧಿಸಲಾಗಿದೆ. ದೇಶದ್ರೋಹ ಸಹಿತ ವಿಷಯಗಳನ್ನು ಚರ್ಚಿಸುವುದಕ್ಕೆ ನಿಷೇಧ ಹೇರಲಾಗಿದೆ. ಇಂತಹ ಕೃತ್ಯಗಳು ಗಮನಕ್ಕೆಬಂದರೆ ಲೈಸೆನ್ಸ್ ರದ್ದು ಪಡಿಸುವ ಅಧಿಕಾರವನ್ನು ಸಮಿತಿಗೆ ನೀಡಲಾಗಿದೆ ಎಂದು ವರದಿಗಳು ತಿಳಿಸಿವೆ.







