ಲೈಂಗಿಕ ಕಿರುಕುಳ ಕೊಟ್ಟಾತನಿಗೆ ಇರಿದ ಬಾಲಕಿಗೆ ದಂಡ ತೆರಲು ಹಣವಿಲ್ಲದಾಗ ನ್ಯಾಯಾಧೀಶರೇ ದಂಡ ತೆತ್ತು ಪಾರು ಮಾಡಿದರು!

ಇಂಗ್ಲೆಂಡ್, ಎಪ್ರಿಲ್ 20: ಕೋರ್ಟ್‌ನ ಮುಂದೆ ಲೈಂಗಿಕವಾಗಿ ಕಿರುಕಳಕ್ಕೆ ಯತ್ನಿಸಿದ ಪ್ರಕರಣವೊಂದು ಬಂದಾಗ ಹದಿನೈದು ವರ್ಷದ ಬಾಲಕಿಯನ್ನು ಜೈಲಿಗೆ ತಳ್ಳಲು ಮನಸ್ಸಾಗದ ನ್ಯಾಯಾಧೀಶ ಜೋನಾಥನ್ ಡರ್ಹಂ ಹಾಲ್ ಕ್ಯೂಸಿಕ್ ತನ್ನ ಕೈಯಿಂದಲೇ ದಂಡದ ಹಣತೆತ್ತು ಪಾರು ಮಾಡಿದ ಘಟನೆ ಬ್ರಿಟನ್‌ನಿಂದ ವರದಿಯಾಗಿದೆ. ತನಗೆ ಕಿರುಕುಳ ನೀಡುತ್ತಿದ್ದ 56ವರ್ಷದ ಮಧ್ಯವಯಸ್ಕನನ್ನುಬಾಲಕಿ ಮಾರಕವಾಗಿ ಇರಿದು ಗಾಯಗೊಳಿಸಿದ್ದಳು. ಚಾಕುಆತನ ಹೃದಯದವರೆಗೂ ಹೋಗಿತ್ತು.
ಆದರೆ ವಿಚಾರಣೆಯಲ್ಲಿ ನ್ಯಾಯಾಧೀಶರಿಗೆ ಈ ದುಷ್ಟ ಬಾಲಕಿಯ ಜೀವನವನ್ನೇ ನಾಶಪಡಿಸಿದ್ದಾನೆ ಎಂದು ಮನವರಿಕೆಯಾಗಿದ್ದ ನ್ಯಾಯಾಧೀಶರಿಗೆ. ಲೈಂಗಿಕ ಕಿರುಕುಳ ಮತ್ತು ಆಕ್ಷೇಪಿಸುತ್ತಿದ್ದಾತನನ್ನು ಈ ಬಾಲಕಿ ತಿವಿದಿದ್ದಾಳೆ ಎಂದು ವಿಚಾರಣೆಯಲ್ಲಿ ನ್ಯಾಯಾಧೀಶರು ಮನಗಂಡರು. ಬಾಲಕಿಗೆ ಎಂಟು ವರ್ಷವಾಗಿದ್ದಾಗ ಪ್ರಸ್ತುತ ದುಷ್ಟ ವ್ಯಕ್ತಿ ಲೈಂಗಿಕವಾಗಿ ಕಿರುಕುಳ ನೀಡಿದ್ದನೆಂದು ಆತನಿಗೆ ಜೈಲು ಶಿಕ್ಷೆ ವಿಧಿಸದೆ ಕಮ್ಯುನಿಟಿ ಆರ್ಡರ್ ನೀಡಿ ಬಿಡಲಾಗಿತ್ತು.ಆನಂತರವೂ ಆತ ಬಾಲಕಿಯನ್ನು ಬೆದರಿಸುತ್ತಿದ್ದ. ಬಾಲಕಿಗೆ ಹದಿನಾಲ್ಕು ವರ್ಷವಾದಾಗ ತಾನು ಈತನನ್ನು ಕೊಲ್ಲುತ್ತೇನೆ ಎಂದು ಹೇಳಿ ಆರೋಪಿಯ ಮನೆಗೆ ಹೋಗಿದ್ದಳು. ಅಲ್ಲಿ ಆತನ ಇಬ್ಬರು ಎಳೆಯ ಮಕ್ಕಳ ಮುಂದೆಯೇ ಆತನಿಗೆ ಇರಿದಿದ್ದಳು.
ತೀವ್ರವಾಗಿ ಗಾಯಗೊಂಡಿದ್ದ ಆತನಿಗೆ ಪ್ಯಾರಾ ಮೆಡಿಕಲ್ ಸರ್ಜನ್‌ಗಳು ತುರ್ತು ಚಿಕಿತ್ಸೆ ನೀಡಿ ಗುಣಪಡಿಸಿದ್ದರು. ಈತನನ್ನು ತಿವಿದ ಬಳಿಕ ಬಾಲಕಿ ಬ್ರಾಂಡ್‌ಫೋರ್ಡ್ ಸಿಟಿ ಸೆಂಟರ್ ಟ್ರಾಫಲ್ಗರ್ ಹೌಸ್ ಪೊಲೀಸ್ ಸ್ಟೇಶನ್‌ನಲ್ಲಿ ಶರಣಾಗಿದ್ದಳು. ಮೊದಲು ಬಾಲಕಿ ವಿರುದ್ಧ ಕೊಲೆಯತ್ನ ಕೇಸು ದಾಖಲಿಸಲಾಗಿತ್ತು. ಆದರೆ ಬಾಲಕಿ ತಪ್ಪೊಪ್ಪಿಕೊಂಡು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಸ್ವೀಕರಿಸಿತ್ತು. ಕೆಲವು ದಿನಗಳ ಹಿಂದೆ ಅವಳನ್ನು ಶಾಲೆಯಿಂದಲೂ ಹೊರಗೆ ಹಾಕಲಾಗಿತ್ತು. ಕಾನೂನು ವ್ಯವಸ್ಥೆ ತನಗೆ ನೆರವಾಗಿಲ್ಲ ಎಂಬ ಹತಾಶೆಯಿಂದ ಆಕೆ ಚೂರಿಯಿಂದ ಇರಿದಳೆಂದು ಅವಳ ವಕೀಲ ಇಲಿಯಾಸ್ ಪಟೇಲ್ ವಾದಿಸಿದ್ದರು. ಬಾಲಕಿಗೆ ನ್ಯಾಯ ಒದಗಿಸಬೇಕೆಂದು ಅವರು ನ್ಯಾಯಾಲಯವನ್ನು ವಿನಂತಿಸಿದ್ದರು. ಕೊನೆಗೆ ನ್ಯಾಯಾಧೀಶರೇ ಬಾಲಕಿಗೆ ವಿಧಿಸಿದ ದಂಡವನ್ನು ಸ್ವಯಂ ಪಾವತಿಸಿ ಅವಳಿಗೆ ನೆರವಾದ ಅಪೂರ್ವ ಘಟನೆ ನಡೆದಿರುವುದಾಗಿ ವರದಿಯಾಗಿದೆ.







