ಇಂಡಿಯಾ ಫ್ರಟರ್ನಿಟಿ ಫೋರಮ್ ರಿಯಾದ್ ವತಿಯಿಂದ - ಸ್ನೇಹ ಕೂಟ 2016

ಇಂಡಿಯಾ ಫ್ರಟರ್ನಿಟಿ ಫೋರಮ್ ರಿಯಾದ್ ಕರ್ನಾಟಕ ಚಾಪ್ಟರ್ ವತಿಯಿಂದ “ಸ್ನೇಹ ಕೂಟ 2016” ಕುಟುಂಬ ಸಮ್ಮಿಲನ ಕಾರ್ಯಕ್ರಮವು ಇತ್ತೀಚೆಗೆ ರಿಯಾದಿನ ಅಲ್ ರುಶ್ದ್ ರೆಸಾರ್ಟ್ ನಲ್ಲಿ ಅದ್ದೂರಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಸಾವಿರಾರು ಅನಿವಾಸಿ ಭಾರತೀಯರು ಪಾಲ್ಗೊಂಡರು ಮಾಸ್ಟರ್ ಆದಿಲ್ ಹುಸೈನ್ ಯವರ ಕಿರಾತ್ ನೊಂದಿಗೆ ಸಭಾ ಕಾರ್ಯಕ್ರಮ ಆರಂಭವಾಯಿತು. ವೇದಿಕೆಯಲ್ಲಿರುವ ಎಲ್ಲಾ ಅತಿಥಿಗಳನ್ನು ಹೂ ಗುಚ್ಛ ನೀಡುವುದರ ಮೂಲಕ ಕಾರ್ಯಕ್ರಮಕ್ಕೆ ಸ್ವಾಗತಿಸಲಾಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಂಡಿಯಾ ಫ್ರಟರ್ನಿಟಿ ಫೋರಮ್ ರಿಯಾದ್ ಜಿಲ್ಲಾಧ್ಯಕ್ಷರಾದ ಜನಾಬ್ ಅಬ್ದುಲ್ ರವೂಫ್ ಕಲಾಯಿಯವರು ವಹಿಸಿದ್ದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಐ ಎಫ್ ಎಫ್ ನಡೆಸುತ್ತಿರುವ ಸಾಮಾಜಿಕ ಸೇವೆಯನ್ನು ಹಾಗು ಸಂಘಟನೆಯ ಮಹತ್ವ ಮತ್ತು ಅವಶ್ಯಕತೆಯ ಬಗ್ಗೆ ನೆರೆದಂತಹ ಸಭಿಕರಿಗೆ ವಿವರಿಸಿದರು.ಕಾರ್ಯಕ್ರಮವನ್ನು ಸೌದಿ ಆರೋಗ್ಯ ಸಚಿವಾಲಯ ವೈದ್ಯರಾದ ಡಾ.ಕೈಸರ್ ಪರ್ವೇಜ್ ಉದ್ಘಾಟಿಸುತ್ತಾ ಅನಿವಾಸಿಗರು ತಮ್ಮ ಆರೋಗ್ಯದ ದ್ರಷ್ಟಿಯಿಂದ. ಶುದ್ದ ನೀರಿಗೆ ಹಾಗು ಸಸ್ಯಹಾರಕ್ಕೆ ಹೆಚ್ಚಿನ ಪ್ರಾಸ್ತತ್ಯ ನೀಡಿ ಎಂದು ಸಲಹೆ ನೀಡಿದರು.
ಈ ಕಾರ್ಯಕ್ರಮಕ್ಕೆ ಮುಖ್ಯ ಭಾಷಣಗಾರರಾಗಿ ಆಗಮಿಸಿದ ಐ ಎಫ್ ಎಫ್ ಜಿದ್ದಃ ಜಿಲ್ಲಾ ಸಮಿತಿ ಸದಸ್ಯ ರಾದ ಜನಾಬ್. ಅಬ್ದುಲ್ ಮಜೀದ್ ರವರು ಪ್ರಸಕ್ತ ಇಂಡಿಯಾ ದೇಶದ ರಾಜಕೀಯ ಸ್ಥಿತಿಗತಿಗಳ ಬಗ್ಗೆ ವಿಸ್ತಾರವಾಗಿ ವಿವರಿಸಿದರು . ಹಿಂದುಳಿದ ವರ್ಗದ ಜನರು ಒಗ್ಗೂಡಿ ದೇಶ ರಕ್ಷಣೆ ಕಾರ್ಯದಲ್ಲಿ ತೊಡಗಬೇಕು . ನಮ್ಮ ಹಕ್ಕುಗಳನ್ನು ಹೋರಾಟದ ಮೂಲಕ ಪಡೆಯಬೇಕು. ಮುಸ್ಲಿಮರು ಐಕ್ಯತೆಯಿಂದ ಸಮುದಾಯದ ಸಬಲೀಕರಣ ಸಾದ್ಯ ಎಂದು ಕರೆ ನೀಡಿದರು
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಗಳಾಗಿ ಗೋಲ್ಡನ್ ತೆಲಂಗಾಣ ವೆಲ್ಫೇರ್ ಅಸೋಸಿಯೇಷನ್ ಮುಖ್ಯ ಪೋಷಕರಾದ ಜನಾಬ್ ಸೆಯ್ಯೆದ್ ಮೊಜಾಮ್ ಅಲಿಯವರು ಸಾಮಾಜಿಕ ಸೇವೆಯಲ್ಲಿ ತೊಡಗಿಸಿ ಕೊಂಡ ಐ ಎಫ್ ಎಫ್ ನ ಕಾರ್ಯಕರ್ತ ರನ್ನು ಶ್ವಾಘಿಸಿದರು. ಮುಂದಿನ ದಿನಗಳಲ್ಲಿ ಎಲ್ಲಾ ಮುಸ್ಲಿಂ ಸಂಘಟನೆಗಳು ಒಟ್ಟು ಸೇರಿ ಸಮುದಾಯದ ಒಳಿತಿಗಾಗಿ ಕೆಲಸ ಮಾಡಬೇಕಾಗಿ ಕರೆ ಕೊಟ್ಟರು
ಕಾರ್ಯಕ್ರಮದಲ್ಲಿ ಇಂಡಿಯಾ ಫ್ರಟರ್ನಿಟಿ ಫೋರಮ್ ರಿಯಾದ್ ಕೋ - ಆರ್ಡಿನೇಟರ್ ಜನಾಬ್ ಇಲ್ಯಾಸ್ ತಿರೂರು ಹಾಗೂ ಇಂಡಿಯನ್ ಸೋಶಿಯಲ್ ಫೋರಮ್ ರಿಯಾದ್ ಕರ್ನಾಟಕ ರಾಜ್ಯ ಉಪಾದ್ಯಕ್ಷರಾದ ಜನಾಬ್ ಮುಸ್ತಾಕ್ ಕಾಸಿಂರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಐ ಎಫ್ ಎಫ್ ರಿಯಾದ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಇನೋಳಿಯವರು ಸ್ವಾಗತಿಸಿದರೆ ಜಿಲ್ಲಾ ಸಮಿತಿ ಸದಸ್ಯರಾದ ಮೊಹಮ್ಮದ್ ಹನೀಫ್ ರವರು ಧನ್ಯವಾದ ಹಾಗೂ ಶರೀಫ್ ಕಬಕ ಮತ್ತು ನವೀದ್ ಕುಂದಾಪುರರವರು ಕಾರ್ಯಕ್ರಮವನ್ನು ನಿರೂಪಿಸಿದರು .
ಮನೋರಂಜನೆಗಾಗಿ “ ನಂಗಲೋ ಜಮಾತ್ ” ಎಂಬ ಹಾಸ್ಯ ಪ್ರಹಸನವನ್ನು ಐ ಎಫ್ ಎಫ್ ರಿಯಾದ್ ಸದಸ್ಯರು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಮಕ್ಕಳಿಗಾಗಿ, ಮಹಿಳೆಯರಿಗಾಗಿ ಮತ್ತು ಪುರುಸರಿಗಾಗಿ ಕ್ವಿಜ್ ಹಗ್ಗ ಜಗ್ಗಾಟ , ಮೂಸಿಕಲ್ ಚೇರ್ ಮತ್ತು ಓಟ ಮುಂತಾದ ಸ್ಫರ್ದೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ವಿತರಿಸಲಾಯಿತು
ಯುವಕರ ವಾಲಿಬಾಲ್ ಪಂದ್ಯಾಟ ದಲ್ಲಿ ಪುತ್ತೂರು ರೈಡೆರ್ಸ್ ತಂಡವು ವಿಜಯಿಯಾಗಿ , ಬಣಕಲ್ ತಂಡವು ದ್ವಿತೀಯ ಪ್ರಶಸ್ತಿ ಗೆದ್ದು ಕೊಂಡಿತು, ಹಗ್ಗ ಜಗ್ಗಾಟ ದಲ್ಲಿ ಐ.ಎಫ್.ಎಫ್ ರಿಯಾದ್ ತಂಡವು ವಿಜಯಿಯಾಗಿ, ಪುತ್ತೂರು ರೈಡೆರ್ಸ್ ತಂಡವು ದ್ವಿತೀಯ ಸ್ಥಾನವನ್ನು ಪಡೆಯಿತು.
ಕಾರ್ಯಕ್ರಮದಲ್ಲಿ ಏಕ್ಷ್ಪೋ -2016 ಜನರ ಮನಸೆಳೆಯಿತು. ಬ್ಲಾಸಮ್ ಇಂಟರ್ನ್ಯಾಷನಲ್ ಸ್ಕೂಲ್ ರಿಯಾದ್, ಅಕಾ ಇಂಡಸ್ಟ್ರಿಯಲ್ ಸರ್ವಿಸಸ್, ಕಂಪಾಸ್ ಲಾಜಿಸ್ಟಿಕ್ಸ್, ಫಾನಾರ್, ಫ್ರೆಂಡಿ ಮೊಬೈಲ್, ಮತ್ತು ಮ್ಯಾಗ್ನಮ್ ಕಾರ್ಯಕ್ರದ ಪ್ರಾಯೋಜಕರಾಗಿದ್ದರು.







