ಗ್ರಾಪಂ ಉಪಚುನಾವಣೆ: ಬಂಟ್ವಾಳದಲ್ಲಿ ಕಾಂಗ್ರೆಸ್‌ಗೆ ಮೇಲುಗೈ

ಬಂಟ್ವಾಳ, ಎ.20: ತಾಲೂಕಿನಲ್ಲಿ ವಿವಿಧ ಕಾರಣಗಳಿಂದ ತೆರವಾಗಿದ್ದ 8 ಗ್ರಾಮ ಪಂಚಾಯತ್‌ಗಳ 9 ಸ್ಥಾನಗಳಿಗೆ ರವಿವಾರ ನಡೆದ ಉಪ ಚುನಾವಣೆಯ ಮತ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಒಟ್ಟು 9 ಸ್ಥಾನಗಳ ಪೈಕಿ 5 ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. ವಿಜೇತ
ಅಭ್ಯರ್ಥಿಗಳ ವಿವರ: ತಾಲೂಕಿನ ಬಾಳ್ತಿಲ ಗ್ರಾಮ ಪಂಚಾಯತ್‌ನ 5ನೆ ವಾರ್ಡ್‌ನಲ್ಲಿ ರೇಣುಕಾ (ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ), ಕೆದಿಲ ಗ್ರಾಪಂನ 4ನೆ ವಾರ್ಡ್ ಅಭ್ಯರ್ಥಿ ಸುದರ್ಶನ್ (ಕಾಂಗ್ರೆಸ್), ಸಾಲೆತ್ತೂರು ಗ್ರಾಪಂನ 1ನೆ ವಾರ್ಡ್ ಅಭ್ಯರ್ಥಿ ಜಯಲಕ್ಷ್ಮೀ(ಕಾಂಗ್ರೆಸ್), ಮಂಚಿ ಗ್ರಾಪಂನ 6ನೆ ವಾರ್ಡ್ ಅಭ್ಯರ್ಥಿ ಮೋಹನಪ್ರಭು(ಬಿಜೆಪಿ), ಕನ್ಯಾನ ಗ್ರಾಪಂನ 2ನೆ ವಾರ್ಡ್ ಅಭ್ಯರ್ಥಿ ಝಿಯಾದ್(ಕಾಂಗ್ರೆಸ್), ಅನಂತಾಡಿ ಗ್ರಾಪಂನ 1ನೆ ವಾರ್ಡ್ ಅಭ್ಯರ್ಥಿ ಸುಮಿತ್ರಾ(ಬಿಜೆಪಿ), ಬಾಳೆಪುಣಿ ಕೈರಂಗಳ ಗ್ರಾಪಂನ 2ನೆ ವಾರ್ಡ್ ಅಭ್ಯರ್ಥಿ ಲೋಹಿತ್ ವಿ. (ಬಿಜೆಪಿ), ವಿಟ್ಲಮುಡ್ನೂರು ಗ್ರಾಪಂನ 3ನೆ ವಾರ್ಡ್ ಅಭ್ಯರ್ಥಿ ಡಿ.ರಮೇಶ್ ನಾಯಕ್ (ಕಾಂಗ್ರೆಸ್), ಹಾಗೂ ವಿಟ್ಲ ಮುಡ್ನೂರು ಗ್ರಾಪಂನ 1ನೆ ವಾರ್ಡ್ ಅಭ್ಯರ್ಥಿ ಉಷಾ(ಬಿಜೆಪಿ).
ವಿಜಯೋತ್ಸವ: ಜಯಗಳಿಸಿದ ಅಭ್ಯರ್ಥಿಗಳನ್ನು ಆಯಾಯ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಹೂವಿನ ಹಾರಹಾಕಿ ಅಭಿನಂದಿಸಿದು. ಅಲ್ಲದೆ ಘೋಷಣೆಗಳನ್ನು ಕೂಗುತ್ತಾ ವಿಜಯೋತ್ಸವ ಆಚರಿಸುತ್ತಿದ್ದ ದೃಶ್ಯ ಮತ ಎಣಿಕೆ ಕೇಂದ್ರದ ಹೊರಗಡೆ ಕಂಡುಬಂದವು. ಬುಧವಾರ ಬೆಳಗ್ಗೆ ಬಿ.ಸಿ.ರೋಡ್‌ನ ಶ್ರೀಶಕ್ತಿ ಭವನದಲ್ಲಿ ಮತ ಎಣಿಕೆ ಕಾರ್ಯ ನಡೆಯಿತು. ಮುಂಜಾಗೃತ ಕ್ರಮವಾಗಿ ಮತ ಎಣಿಕೆ ಕೇಂದ್ರದ ಸುತ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಯಿತು.







