ಗ್ರಾಪಂ ಉಪಚುನಾವಣಾ ಫಲಿತಾಂಶ: ಆರಬೋಡಿ, ವೇಣೂರಿನಲ್ಲಿ ಬಿಜೆಪಿ ಮೇಲುಗೈ

ಬೆಳ್ತಂಗಡಿ, ಎ.20: ಗ್ರಾಮ ಪಂಚಾಯತ್ ಉಪಚುನಾವಣಾ ಫಲಿತಾಂಶ ಬರಲಾರಂಭಿಸಿದ್ದು, ವೇಣೂರು ಹಾಗೂ ಆರಂಬೋಡಿ ಗ್ರಾಮ ಪಂಚಾಯತ್‌ಗಳಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ
ವೇಣೂರು ಗ್ರಾಪಂನಲ್ಲಿ 8 ಕ್ಷೇತ್ರಗಳಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಆರು ಸ್ಥಾನಗಳಲ್ಲಿ ಜಯ ಗಳಿಸಿದರೆ, ಕಾಂಗ್ರೆಸ್‌ಗೆ ಕೇವಲ ಎರಡು ಸ್ಥಾನಗಳು ಮಾತ್ರ ಲಭಿಸಿವೆ. ಇನ್ನು ಆರಬೋಡಿ ಗ್ರಾಪಂನಲ್ಲಿ ಆರು ಸ್ಥಾನಗಳಲ್ಲಿ ಎಣಿಕೆಯ ಮೊದಲ ಸುತ್ತಿನಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ
ಉಪ ಚುನಾವಣೆ ನಡೆದ ಕಲ್ಮಂಜ ಹಾಗೂ ಚಾರ್ಮಾಡಿ ಗ್ರಾ.ಪಂ ನ ತಲಾ ಒಂದು ಸ್ಥಾನಗಳನ್ನು ಕಾಂಗ್ರೆಸ್ ಗೆದ್ದುಕೊಂಡಿದೆ. ಮಚ್ಚಿನ ಗ್ರಾಪಂನ ಒಂದು ಸ್ಥಾನವನ್ನು ಬಿಜೆಪಿ ಗೆದ್ದುಕೊಂಡಿದೆ.
Next Story





