ಇವುಗಳನ್ನು ಬ್ರಿಟಿಷರು ನಮ್ಮಿಂದ ಕಲಿತರು
ಕೊಹಿನೂರು ಭಾರತಕ್ಕೆ ಸೇರಿದ್ದೇ ಬ್ರಿಟನಿಗೆ ಸೇರಿದ್ದೇ ಎನ್ನುವುದು ಹೇಳುವುದು ಕಷ್ಟ. ಆದರೆ ಭಾರತಕ್ಕೆ ಸೇರಿದ ಕೆಲವು ಆಹರವನ್ನು ಬ್ರಿಟಿಷರು ತಮ್ಮದೆಂದು ಅಪ್ಪಿಕೊಂಡಿದ್ದಾರೆ. ಭಾರತೀಯ ಮೂಲದ ಕೆಲವು ಆಹಾರಗಳು ಬ್ರಿಟನಿನ ಪಾರಂಪರಿಕ ಆಹಾರವಾಗಿವೆ. ಅವುಗಳು ಯಾವುವು?
ಕೆಡಗಿರೀ
ಇದು ಕಿಚಡಿ. ಆದರೆ ವಿಭಿನ್ನ ರೂಪದ ಕಿಚಡಿ. ಬ್ರಿಟಿಷ್ ಕೆಡಗಿರೀ ಅಕ್ಕಿ, ಧಾನ್ಯಗಳು, ಮೀನು ಮತ್ತು ಅರ್ಧ ಬೇಯಿಸಿದ ಮೊಟ್ಟೆ ಮತ್ತು ಸಾಂಬಾರು ಪದಾರ್ಥಗಳಲ್ಲಿ ಮಾಡಲಾಗುತ್ತದೆ. ಭಾರತದಲ್ಲಿ ನೆಲೆಸಿದ್ದ ಬ್ರಿಟಿಷರ ಪತ್ನಿಯರು ಇಲ್ಲಿನ ಆಹಾರವನ್ನು ಅವರಿಗೆ ಒಪ್ಪುವ ರೀತಿಯಲ್ಲಿ ಬದಲಿಸಿದರು ಎನ್ನಲಾಗುತ್ತದೆ.
ಚಟ್ನಿ
ತಮ್ಮ ಮಾಂಸಾಹಾರದ ಜೊತೆಗೆ ಬ್ರಿಟಿಷರು ಚಟ್ನಿಗಳನ್ನು ಬಳಸುತ್ತಾರೆ. ಭಾರತೀಯ ಮಸಾಲೆಗಳನ್ನು ಹಾಕಿ ಸೃಷ್ಟಿಸಿದ ಚಟ್ನಿ. ಭಾರತೀಯರು ಟೊಮ್ಯಾಟೊ, ಪುದೀನ ಮತ್ತು ಕೊತ್ತಂಬರಿಗಳಿಂದ ಇದನ್ನು ಮಾಡುತ್ತಾರೆ. ಬ್ರಿಟಿಷರು ಹಸಿರು ಸೇಬು, ರುಬರ್ಬ ಮತ್ತು ಬೆರ್ರಿಗಳಿಂದ ಚಟ್ನಿ ಮಾಡುತ್ತಾರೆ.
ಸಾಂಬಾರುಗಳು ಮತ್ತು ತಂದೂರಿ
ಮತ್ತೊಮ್ಮೆ ಮಸಾಲ ಮತ್ತು ತಂತ್ರಜ್ಞಾನ ನಮ್ಮದೇ. ಬ್ರಿಟಿಷರು ತಮ್ಮದೇ ರೀತಿಯಲ್ಲಿ ಬದಲಿ ಸೃಷ್ಟಿ ಮಾಡಿದ್ದಾರೆ. ಮಾಂಸ ಮತ್ತು ಕೋಳಿ ಮಾಂಸದ ಜೊತೆಗೆ ಈ ಮಸಾಲೆ ಮಿಶ್ರಣ ಕಾಣುತ್ತೇವೆ. ಇದು ಬ್ರಿಟಿಷರ ಪ್ರಿಯ ಆಹಾರವಾಗಿದೆ. ಬಟರ್ ಚಿಕನಿನಿಂದ ಚಿಕನ್ ಟೀಕಾ ಮಸಾಲ ಮತ್ತು ಮಸಾಲೆಮಯ ರೋಸ್ಟುಗಳಾದ ತಂದೂರಿ ಮುರ್ಗಾ ಎಲ್ಲವೂ ಉತ್ತರ ಭಾರತೀಯ ಆಹಾರಗಳು. ಈಗ ಬ್ರಿಟನಿನಲ್ಲಿ ಪ್ರಸಿದ್ಧ.