ಕೆಸಿಎಫ್ ಯುಎಇ ವತಿಯಿಂದ ಏಪ್ರಿಲ್ 29 ರಂದು ದುಬೈ ನಲ್ಲಿ ಅಸ್ಸುಫ್ಫ ಪ್ರಶಸ್ತಿ ಪ್ರಧಾನ ಸಮಾರಂಭ
ದುಬೈ: ಕರ್ನಾಟಕ ಕಲ್ಚರಲ್ ಫೌಂಡೇಶನ್ - ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ವತಿಯಿಂದ ಯುಎಇ ಯಾದ್ಯಂತ ಕಳೆದ ಆರು ತಿಂಗಳುಗಳಿಂದ ಚಾಲ್ತಿಯಲ್ಲಿದ್ದ ಸಿಲಬಸ್ ಆಧಾರಿತ ಪ್ರಥಮ ಹಂತದ ಅಸ್ಸುಫ್ಫಾ ತರಗತಿಯ ಪ್ರಶಸ್ತಿ ಪ್ರಧಾನ ಸಮಾರಂಭ ಏಪ್ರಿಲ್ 29 ರಂದು ಶುಕ್ರವಾರ ಸಂಜೆ 6.30ಕ್ಕೆ ದುಬೈ ಅಬೂ ಹೈಲ್ ನಲ್ಲಿರುವ ಐಸಿಎಫ್ ಸಭಾಂಗಣದಲ್ಲಿ ನಡೆಯಲಿದೆ.
ಕೆಸಿಎಫ್ ಐ ಎನ್ ಸಿ ಅದ್ಯಕ್ಷರಾದ ಬಹು ಎಸ್ ಪಿ ಹಂಝ ಸಖಾಫಿ ಬಂಟ್ವಾಳ, ಬಹು ಹಸನುಲ್ ಅಹ್ದಲ್ ತಂಘಳ್ (ದಾರುಲ್ ಹುದಾ ತಂಬಿನಮಕ್ಕಿ ಬೆಳ್ಳಾರೆ), ಸಯ್ಯದ್ ಝೈನುಲ್ ಆಬಿದೀನ್ ಜಮಲುಲ್ಲೈಲಿ (ಮುದರ್ರಿಸ್ ಕಾಜೂರು), ಅಸ್ಸಯ್ಯಿದ್ ಇಸ್ಮಾಯಿಲ್ ಹಾದೀ ತಂಘಳ್ ಉಜಿರೆ (ಅಧ್ಯಕ್ಷರು ಮರ್ಕಝುಲ್ ಹುದಾ ಕುಂಬ್ರ), ಬಹು ಮಹಮೂದುಲ್ ಫೈಝಿ ವಾಲೆಮಂಡೂವು (ಅಧ್ಯಕ್ಷರು ದಾರುಲ್ ಅಶ್ಅರಿಯ್ಯ ಸುರಿಬೈಲು), ಬಹು ಎಮ್ಮೆಸ್ಸೆಂ ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ ಕಕ್ಕಿಂಜೆ (ಉಪಾಧ್ಯಕ್ಷರು, ಕೆಸಿಎಫ್ ಐ ಎನ್ ಸಿ), ಬಹು ಅಬ್ದುಲ್ ಹಮೀದ್ ಸಅದಿ (ಅಧ್ಯಕ್ಷರು ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ), ಜನಾಬ್ ಶೈಖ್ ಬಾವ ಹಾಜಿ ಅಬೂಧಾಬಿ (ಪ್ರಧಾನ ಕಾರ್ಯದರ್ಶಿ ಕೆಸಿಎಫ್ ಐ ಎನ್ ಸಿ) ಸೇರಿದಂತೆ ಹಲವಾರು ಸಯ್ಯಿದರುಗಳು, ಉಲಮಾ ಉಮಾರಾ ನಾಯಕರುಗಳು ಭಾಗವಹಿಸಲಿದ್ದಾರೆ.
ಏಪ್ರಿಲ್ 22 ರಂದು ಅಸ್ಸುಫ್ಫಾ ಪರೀಕ್ಷೆ :
ಅಸ್ಸುಫ್ಫಾ ಪರೀಕ್ಷೆಯು ಏಪ್ರಿಲ್ 22 ರಂದು ಯುಎಇ ಯ ಒಟ್ಟು 9 ಕೇಂದ್ರಗಳಲ್ಲಿ ನಡೆಯಲಿದೆ, ದುಬೈಯ ಐದು ಕೇಂದ್ರಗಳಲ್ಲಿ, ಅಬುಧಾಬಿ, ಶಾರ್ಜಾ, ಅಲ್ ಐನ್ ಮತ್ತು ಅಜ್ಮಾನ್ ಗಳಲ್ಲಿ ಒಂದೊಂದು ಕೇಂದ್ರಗಳಲ್ಲಿ ಪರೀಕ್ಷೆಯು ನಡೆಯಲಿದೆ ಎಂದು ಪರೀಕ್ಷಾ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಸ್ವಾಗತ ಸಮಿತಿ ರಚನೆ: ಅಸ್ಸುಫ್ಫಾ ಪ್ರಶಸ್ತಿ ಪ್ರಧಾನ ಸಮಾರಂಭದ ಯಶಸ್ವಿಗಾಗಿ ಸ್ವಾಗತ ಸಮಿತಿ ರಚಿಸಲಾಗಿದ್ದು, ಅಧ್ಯಕ್ಷರಾಗಿ ಇಬ್ರಾಹಿಂ ಬ್ರೈಟ್ ಮಾರ್ಬಲ್, ಕಾರ್ಯಾಧ್ಯಕ್ಷರಾಗಿ ಇಬ್ರಾಹಿಂ ಸಖಾಫಿ ಕೆದುಂಬಾಡಿ ಹಾಗೂ ಕನ್ವೀನರಾಗಿ ಮುಹಮ್ಮದ್ ರಫೀಕ್ ಸಂಪ್ಯ ಇವರುಗಳನ್ನು ಆಯ್ಕೆ ಮಾಡಲಾಗಿದ್ದು, ಸಮಾರಂಭದ ಯಶಸ್ವಿಗಾಗಿ ಶ್ರಮಿಸುವಂತೆ ಕೆಸಿಎಫ್ ರಾಷ್ಟ್ರೀಯ ಸಮಿತಿ ಶಿಕ್ಷಣ ವಿಭಾಗದ ಅಧ್ಯಕ್ಷರಾದ ಅಬ್ದುಲ್ ಜಲೀಲ್ ನಿಝಾಮಿ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.







