Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಅಮೆರಿಕದ ಅಧ್ಯಕ್ಷರನ್ನು ಆಯ್ಕೆ ಮಾಡುವುದು...

ಅಮೆರಿಕದ ಅಧ್ಯಕ್ಷರನ್ನು ಆಯ್ಕೆ ಮಾಡುವುದು ಹೇಗೆ?

ಇಲ್ಲಿದೆ ಐದು ಹಂತಗಳ ಮಾಹಿತಿ

ವಾರ್ತಾಭಾರತಿವಾರ್ತಾಭಾರತಿ20 April 2016 5:56 PM IST
share
ಅಮೆರಿಕದ ಅಧ್ಯಕ್ಷರನ್ನು ಆಯ್ಕೆ ಮಾಡುವುದು ಹೇಗೆ?

ವಾಶಿಂಗ್ಟನ್, ಎ. 20: ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಅಮೆರಿಕದ ಜನರು ನವೆಂಬರ್‌ನಲ್ಲಿ ಬರುವ ಮೊದಲ ಸೋಮವಾರದ ಮಾರನೆ ದಿನ ಮಂಗಳವಾರ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡುತ್ತಾರೆ. ಈ ವರ್ಷ ಮತದಾನದ ದಿನಾಂಕ 2016 ನವೆಂಬರ್ 8.

ಅಮೆರಿಕದ ಚುನಾವಣಾ ವ್ಯವಸ್ಥೆ ನೇರವಾಗಿಲ್ಲ. ಕೇವಲ ಮತಗಳಿಂದ ಮಾತ್ರ ಅಮೆರಿಕದ ಅಧ್ಯಕ್ಷರು ಆಯ್ಕೆಯಾಗುವುದಿಲ್ಲ. ಇಲ್ಲಿ ಯಾರು ಅಧ್ಯಕ್ಷೀಯ ಅಭ್ಯರ್ಥಿಯಾಗಬಹುದು ಎಂಬಲ್ಲಿಂದ ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರದವರೆಗೆ ಐದು ಹಂತದ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ವಿವರಿಸಲಾಗಿದೆ.

1. ಅರ್ಹತೆಗಳು

ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಬಯಸುವವರು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು:

ಎ)ಅಭ್ಯರ್ಥಿಗಳು ಅಮೆರಿಕದಲ್ಲೇ ಹುಟ್ಟಿದವರಾಗಿರಬೇಕು.

ಬಿ)ಅವರಿಗೆ 35 ವರ್ಷ ತುಂಬಿರಬೇಕು.

ಸಿ)ಕಳೆದ 14 ವರ್ಷಗಳಿಂದ ಅಮೆರಿಕದ ಪ್ರಜೆಯಾಗಿರಬೇಕು.

2. ಪ್ರೈಮರಿಗಳು ಮತ್ತು ಕಾಕಸ್‌ಗಳು

ಪ್ರತಿ ಅಭ್ಯರ್ಥಿಗೆ ಪಕ್ಷವೊಂದು ಬೆಂಬಲ ನೀಡುತ್ತದೆ ಹಾಗೂ ಪ್ರತಿ ಪಕ್ಷಕ್ಕೆ ಅದರದ್ದೇ ಆದ ಅನುಯಾಯಿಗಳಿದ್ದಾರೆ. ಪ್ರೈಮರಿಗಳು ಮತ್ತು ಕಾಕಸ್‌ಗಳು ಇಂಥ ಸಮಾನ ಮನಸ್ಕ ಅಭ್ಯರ್ಥಿಗಳು ಮತ್ತು ಪಕ್ಷವೊಂದರ ಅನುಯಾಯಿಗಳನ್ನು ಜೊತೆಗೆ ತರುತ್ತವೆ ಹಾಗೂ ಹಾಗೂ ಮಹಾ ಚುನಾವಣೆಯಲ್ಲಿ ಪಕ್ಷವನ್ನು ಪ್ರತಿನಿಧಿಸುವ ಅಭ್ಯರ್ಥಿಯನ್ನು ಆರಿಸುವಲ್ಲಿ ನೆರವಾಗುತ್ತವೆ.

ಒಂದು ರೀತಿಯಲ್ಲಿ ಇವುಗಳು ''ಚುನಾವಣೆಯ ಮುನ್ನ ನಡೆಯುವ ಚುನಾವಣೆಗಳು''. ಇಲ್ಲಿ ಪಕ್ಷವೊಂದನ್ನು ಮಹಾಚುನಾವಣೆಯಲ್ಲಿ ಪ್ರತಿನಿಧಿಸುವ ಅಭ್ಯರ್ಥಿಯನ್ನು ಪ್ರಜಾಸತ್ತಾತ್ಮಕ ರೀತಿಯಲ್ಲೇ ಆರಿಸಲಾಗುತ್ತದೆ.

ಪ್ರೈಮರಿಗಳಲ್ಲಿ ಮತದಾನ ನೇರವಾಗಿದೆ. ಇಲ್ಲಿ ಪಕ್ಷದ ಅನುಯಾಯಿಗಳು ತಮಗೆ ಬೇಕಾದ ಅಭ್ಯರ್ಥಿಗಳಿಗೆ ಮತಹಾಕುತ್ತಾರೆ. ಈ ಪ್ರೈಮರಿ ಚುನಾವಣೆಗಳನ್ನು ರಾಜ್ಯ ಅಥವಾ ಸ್ಥಳೀಯ ಸರಕಾರಗಳು ನಡೆಸುತ್ತವೆ.

ಕಾಕಸ್‌ಗಳಲ್ಲಿ, ಪಕ್ಷದಲ್ಲಿ ತಾವು ಯಾರನ್ನು ಬೆಂಬಲಿಸಬೇಕು ಎನ್ನುವ ಆಧಾರದಲ್ಲಿ ಮತದಾರರು ತಮ್ಮನ್ನು ತಾವು ಹಲವು ಗುಂಪುಗಳಲ್ಲಿ ವಿಂಗಡಿಸಿಕೊಳ್ಳುತ್ತಾರೆ. ಬಳಿಕ ಅವರು ಮಾತುಕತೆ ನಡೆಸುತ್ತಾರೆ ಹಾಗೂ ತಮ್ಮ ಗುಂಪನ್ನು ಸೇರಿಕೊಳ್ಳುವಂತೆ ಇತರರಿಗೆ ಮನವರಿಕೆ ಮಾಡುವ ಭಾಷಣಗಳನ್ನು ಮಾಡುತ್ತಾರೆ. ಅಂತಿಮವಾಗಿ ಮತದಾನ ಮಾಡಲಾಗುತ್ತದೆ ಹಾಗೂ ವಿಜಯಿಯನ್ನು ಘೋಷಿಸಲಾಗುತ್ತದೆ.

3. ನಿಯೋಗಿಗಳು (ಡೆಲಿಗೇಟ್ಸ್)

ಪ್ರತಿ ಪ್ರೈಮರಿ ಅಥವಾ ಕಾಕಸ್‌ನ ಕೊನೆಯಲ್ಲಿ, ವಿಭಿನ್ನ ಪಕ್ಷಗಳ ಅಭ್ಯರ್ಥಿಗಳು 'ನಿಯೋಗಿ'ಗಳನ್ನು ಆರಿಸುತ್ತಾರೆ. ಪಕ್ಷವೊಂದರ ಪ್ರತಿ ಅಭ್ಯರ್ಥಿ ಪಕ್ಷದ ಟಿಕೆಟ್ ಗೆಲ್ಲುವುದಕ್ಕಾಗಿ ಪೂರ್ವ ನಿರ್ಧರಿತ ಸಂಖ್ಯೆ ನಿಯೋಗಿಗಳನ್ನು ಆರಿಸಬೇಕಾಗುತ್ತದೆ.

ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಬಯಸುವವರು 4,765 ನಿಯೋಗಿಗಳ ಪೈಕಿ 2,383 ನಿಯೋಗಿಗಳನ್ನು ಆರಿಸಬೇಕು. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಬಯಸುವವರು 2,472 ನಿಯೋಗಿಗಳ ಪೈಕಿ 1,237 ಮಂದಿಯನ್ನು ಆರಿಸಬೇಕು. ಎರಡು ಪಕ್ಷಗಳ ನಿಯೋಗಿಗಳ ಸಂಖ್ಯೆಯಲ್ಲಿ ಹೆಚ್ಚು ಕಡಿಮೆ ಯಾಕೆ ಎನ್ನುವು ಪ್ರಶ್ನೆಗೆ ಸುದೀರ್ಘ ವಿವರಣೆಯ ಅಗತ್ಯವಿದೆ. ಆಸಕ್ತರು ಕೆವಿನ್ ಜೆ. ಕೋಲ್‌ಮನ್ ಬರೆದ ಚುನಾವಣಾ ವಿಶ್ಲೇಷಣೆಯನ್ನು ನೋಡಬಹುದು.

ನಿಯೋಗಿಗಳಲ್ಲಿ ಎರಡು ವಿಧ- ಬದ್ಧತೆ ಹೊಂದಿದ ಹಾಗೂ ಬದ್ಧತೆ ಹೊಂದಿಲ್ಲದವರು.

4. ರಾಷ್ಟ್ರೀಯ ಸಮಾವೇಶಗಳು

ಅಗತ್ಯ ಸಂಖ್ಯೆಯ ನಿಯೋಗಿಗಳನ್ನು ಆರಿಸಿದ ಅಭ್ಯರ್ಥಿಯನ್ನು ಮಹಾಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನಾಗಿ ಘೋಷಿಸಲು ಪಕ್ಷಗಳು ರಾಷ್ಟ್ರೀಯ ಸಮಾವೇಶಗಳನ್ನು ಏರ್ಪಡಿಸುತ್ತವೆ.

 ಅಗತ್ಯ ಸಂಖ್ಯೆಯ ನಿಯೋಗಿಗಳನ್ನು ಯಾರೂ ಪಡೆಯದಿದ್ದರೆ, ಆಗ ಸಮಾವೇಶವು ಸ್ಪರ್ಧಾತ್ಮಕವಾಗುತ್ತದೆ. ಬದ್ಧತೆ ಹೊಂದಿದ ಹಾಗೂ ಹೊಂದಿಲ್ಲದ ನಿಯೋಗಿಗಳು ಮಹತ್ವ ಪಡೆದುಕೊಳ್ಳುತ್ತಾರೆ.

ಸ್ಪರ್ಧಾತ್ಮಕ ಸಮಾವೇಶ ಪೋಪ್ ಆಯ್ಕೆಯಂತೆ ಇರುತ್ತದೆ. ಪ್ರೈಮರಿ ಮತ್ತು ಕಾಕಸ್‌ಗಳಲ್ಲಿ ಒಮ್ಮತ ಇರದಿದ್ದರೆ, ಇನ್ನೊಂದು ಸುತ್ತಿನ ಮತದಾನವನ್ನು ಏರ್ಪಡಿಸಲಾಗುತ್ತದೆ. ಇಲ್ಲಿ ಬದ್ಧತೆ ಹೊಂದಿದ ನಿಯೋಗಿಗಳು ಸಾಮಾನ್ಯವಾಗಿ ಮೊದಲ ಸುತ್ತಿನ ಮತದಾನದಲ್ಲಿ ತಮ್ಮನ್ನು ಗೆದ್ದುಕೊಂಡ ಅಭ್ಯರ್ಥಿಗಳ ಪರವಾಗಿ ಮತ ಹಾಕಬೇಕಾಗುತ್ತದೆ. ಆದರೆ, ಬದ್ಧತೆ ಹೊಂದಿಲ್ಲದ ನಿಯೋಗಿಗಳು ಹಾಗೆ ಮಾಡಬೇಕಾಗಿಲ್ಲ.

 ನಂತರದ ಸುತ್ತುಗಳ ಮತದಾನದಲ್ಲಿ, ಬದ್ಧತೆ ಹೊಂದಿದ ನಿಯೋಗಿಗಳಿಗೆ ಯಾವುದೇ ಅಭ್ಯರ್ಥಿಯನ್ನು ಆರಿಸಲು ಅನುಮತಿ ನೀಡಲಾಗುತ್ತದೆ. ಒಮ್ಮತ ಏರ್ಪಟ್ಟು ಅಭ್ಯರ್ಥಿಯೋರ್ವ ಆಯ್ಕೆಗೊಳ್ಳುವವರೆಗೆ ಮತದಾನ ಮುಂದುವರಿಯುತ್ತದೆ.

5. ಸಾರ್ವತ್ರಿಕ ಚುನಾವಣೆ

ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ಅಧ್ಯಕ್ಷರನ್ನು ಆಯ್ಕೆ ಮಾಡಲು ಅಮೆರಿಕದ ಪ್ರಜೆಗಳು ಮತದಾನ ಮಾಡುತ್ತಾರೆ. ಆದರೆ, ಇಲ್ಲಿಯೂ ಅವರು ತಮ್ಮ ಅಧ್ಯಕ್ಷರನ್ನು ನೇರವಾಗಿ ಆಯ್ಕೆ ಮಾಡುವುದಿಲ್ಲ. ಅಧ್ಯಕ್ಷರನ್ನು ಆಯ್ಕೆ ಮಾಡಲು 'ಇಲೆಕ್ಟೋರಲ್ ಕಾಲೇಜ್' ಎಂಬ ಪರೋಕ್ಷ ವಿಧಾನವನ್ನು ಅಮೆರಿಕ ಅನುಸರಿಸುತ್ತದೆ. ಈ ವ್ಯವಸ್ಥೆಯ ಪ್ರಕಾರ, ಪ್ರಜೆಗಳು 'ಇಲೆಕ್ಟರ್ಸ್‌' ಎಂಬ ಜನರ ಗುಂಪುಗಳಿಗೆ ಮತ ಹಾಕುತ್ತಾರೆ. ಹಾಗೂ ಈ 'ಇಲೆಕ್ಟರ್'ಗಳು ಮುಂದೆ ಅಧ್ಯಕ್ಷರನ್ನು ಆಯ್ಕೆ ಮಾಡುತ್ತಾರೆ.

ಈ ಇಲೆಕ್ಟರ್‌ಗಳು ಯಾರು?

ಇಲೆಕ್ಟೋರಲ್ ಕಾಲೇಜ್ ವ್ಯವಸ್ಥೆಯಲ್ಲಿ, ಪ್ರತಿ ರಾಜ್ಯವು ಕಾಂಗ್ರೆಸ್‌ನಲ್ಲಿನ ತನ್ನ ಪ್ರಾತಿನಿಧ್ಯದ ಆಧಾರದಲ್ಲಿ ನಿರ್ದಿಷ್ಟ ಸಂಖ್ಯೆಯ ಇಲೆಕ್ಟರ್‌ಗಳನ್ನು ಪಡೆಯುತ್ತದೆ. ಒಟ್ಟು 558 ಇಲೆಕ್ಟೋರಲ್ ಮತಗಳಿವೆ.

ಪ್ರತಿ ರಾಜಕೀಯ ಪಕ್ಷವು ಇಲೆಕ್ಟರ್‌ಗಳನ್ನು ನಾಮಕರಣ ಮಾಡುತ್ತದೆ. ಅವರು ಸರಕಾರ ನೇಮಿಸಿದ ಅಧಿಕಾರಿಗಳು, ಪಕ್ಷದ ನಾಯಕರು ಅಥವಾ ಅಧ್ಯಕ್ಷೀಯ ಅಭ್ಯರ್ಥಿಯೊಂದಿಗೆ ವೈಯಕ್ತಿಕ ಅಥವಾ ರಾಜಕೀಯ ಸಂಬಂಧ ಇರುವ ವ್ಯಕ್ತಿಗಳಾಗಿರಬಹುದು.

ಸಾರ್ವತ್ರಿಕ ಮತದಾನದ ಬಳಿಕ ಪ್ರತಿ ಆಯ್ದ ಇಲೆಕ್ಟರ್ ಒಂದು ಮತ ಚಲಾಯಿಸುತ್ತಾರೆ. 270ರ ಗಡಿ ದಾಟಿದ ಅಭ್ಯರ್ಥಿ ವಿಜಯಿಯಾಗುತ್ತಾರೆ.

ಹೊಸದಾಗಿ ಆಯ್ಕೆಯಾಗುವ ಅಧ್ಯಕ್ಷರು ಜನವರಿಯಲ್ಲಿ ಅಧಿಕಾರಿ ಸ್ವೀಕರಿಸುತ್ತಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X