ಬೆಳ್ತಂಗಡಿ: ಬೀಡಿ ಕಾರ್ಮಿಕರಿಂದ ಅನಿರ್ಧಿಷ್ಠವಧಿ ಹೋರಾಟ

ಬೆಳ್ತಂಗಡಿ: ಬೀಡಿ ಕೈಗಾರಿಕೆ ಸ್ಥಗಿತವನ್ನು ವಿರೋಧಿಸಿ ಬೀಡಿ ಕಾರ್ಮಿಕರಿಗೆ ಪರ್ಯಾಯ ಉದ್ಯೋಗಕ್ಕೆ ಆಗ್ರಹಿಸಿ ಬೆಳ್ತಂಗಡಿ ಭಾರತ್ ಬೀಡಿ ಕಂಪೆನಿ ಎದುರು ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರು ನಡೆಸುತ್ತಿರುವ ಅನಿರ್ದಿಷ್ಟಾವದಿ ಹೋರಾಟ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ರಾಜ್ಯ ಉಪಾಧ್ಯಕ್ಷ, ಸೌತ್‌ಕೆನರಾ ಬೀಡಿ ವರ್ಕರ್ಸ್ ಫೆಡರೇಶನ್ ದ..ಜಿಲ್ಲಾಧ್ಯಕ್ಷ ಬಿ.ಎಂ.ಭಟ್ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಶಾಸನ ಬೀಡಿ ಕಾರ್ಮಿಕರ ಬದುಕನ್ನು ಕಸಿದುಕೊಳ್ಳಲಿದೆ. ದೇಶದ ಕೋಟ್ಯಾಂತರ ಬೀಡಿ ಕಾರ್ಮಿಕ ಮಹಿಳೆಯರು ಬಿೀದಿಪಾಲಾಗುತ್ತಿದ್ದಾರೆ ಕಾರ್ಮಿಕರ ತಾಳ್ಮೆಗೂ ಒಂದು ಮಿತಿಯಿದೆ. ಸರಕಾರಗಳು ಕೂಡಲೇ ಎಚ್ಚೆತ್ತುಕೊಂಡು ಸಮಸ್ಯೆ ಪರಿಹಾರಕ್ಕೆ ಮುಂದಾಗದಿದ್ದರೆ ಜಿಲ್ಲೆಯ ಲಕ್ಷಾಂತರ ಕಾರ್ಮಿಕರು ಬೀದಿಗೆ ಇಳಿದು ನ್ಯಾಯ ಕೇಳಬೇಕಾಗಲಿದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಬೀಡಿ ಕೆಲಸಗಾರರ ಸಂಘದ ಮುಖಂಡರಾದ ವಸಂತ ನಡ, ಜಯರಾಂ ಮಯ್ಯ, ರೋಹಿಣಿ ಪೆರಾಡಿ, ಈಶ್ವರಿ ಪದ್ಮುಂಜ, ನೆಬಿಸ ಬೆಳ್ತಂಗಡಿ, ಪುಷ್ಪ ಮುಗುಳಿ, ಕುಸುಮ ಮಾಚಾರು, ಜಯಂತಿ ನೆಲ್ಲಿಂಗೇರಿ , ಮೀನಾಕ್ಷಿ ಪಡಂಗಡಿ, ಸಿಐಟಿಯು ಮುಖಂಡ ಶೇಖರ. ಎಲ್, ಬೀಡಿಗುತ್ತಿಗೆದಾರರ ಸಂಘದ ಅಧ್ಯಕ್ಷ ಸಿ.ಮಹಮ್ಮದ್ ಸೇರಿದಂತೆ ಬೀಡಿ ಗುತ್ತಿಗೆದಾರರು ಉಪಸ್ಥಿತರಿದ್ದರು.





