Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ‘ಕೆಎಂಡಿಸಿಯಲ್ಲಿ ಮುಹಮ್ಮದ್ ಸಲೀಮ್...

‘ಕೆಎಂಡಿಸಿಯಲ್ಲಿ ಮುಹಮ್ಮದ್ ಸಲೀಮ್ ಕರ್ಮಕಾಂಡ’

ವಾರ್ತಾಭಾರತಿವಾರ್ತಾಭಾರತಿ20 April 2016 11:15 PM IST
share
‘ಕೆಎಂಡಿಸಿಯಲ್ಲಿ ಮುಹಮ್ಮದ್ ಸಲೀಮ್ ಕರ್ಮಕಾಂಡ’

 ಅಮ್ಜದ್ ಖಾನ್ ಎಂ.
ಬೆಂಗಳೂರು, ಎ.20: ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ಕೆಎಂಡಿಸಿ)ದ ವ್ಯವಸ್ಥಾಪಕ ನಿರ್ದೇಶಕರ ಹುದ್ದೆ ಅಲಂಕರಿಸಲು ಕೆಎಎಸ್ ಅಥವಾ ಐಎಎಸ್ ಅಧಿಕಾರಿಗಳಿಗೆ ಮಾತ್ರ ಅರ್ಹತೆಯಿದ್ದರೂ, ಕೆಸಿಎಸ್ ಅಧಿಕಾರಿ ಮುಹಮ್ಮದ್ ಸಲೀಮ್ ‘ಪ್ರಬಲ ಲಾಬಿ’ ನಡೆಸಿ ನಾಲ್ಕು ಬಾರಿ ಈ ಹುದ್ದೆಯನ್ನು ಅಲಂಕರಿಸಿ, ಕೋಟ್ಯಂತರ ರೂ. ದುರ್ಬಳಕೆ ಮಾಡಿರುವ ಆರೋಪ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಸಾಮಾಜಿಕ ಕಾರ್ಯಕರ್ತ ಅಮೀರ್‌ಖಾನ್, ಜಾಗೋ ಕರ್ನಾಟಕ ಯೂತ್ಸ್ ಅಂಡ್ ವುಮೆನ್ಸ್ ವೆಲ್ಫೇರ್ ಸೊಸೈಟಿಯ ಪದಾಧಿಕಾರಿಗಳು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಪಡೆದಿರುವ ದಾಖಲೆಗಳು ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿಯಾಗಿದ್ದ ಬಿ.ಎಚ್.ಅನಿಲ್‌ಕುಮಾರ್ 2013ರ ಜು.3ರಂದು ಸರಕಾರಕ್ಕೆ ನೀಡಿರುವ ವರದಿಯಲ್ಲಿ ಉಲ್ಲೇಖಿಸಿರುವ ಅಂಶಗಳಿಂದ ಅವರ ವಿರುದ್ಧದ ಆರೋಪಗಳು ಮೇಲ್ನೋಟಕ್ಕೆ ಸತ್ಯವೆಂದು ಕಂಡು ಬರುತ್ತಿದೆ. ಅನಿಲ್‌ಕುಮಾರ್ ವರದಿಯಲ್ಲೇನಿದೆ?
ಮುಹಮ್ಮದ್ ಸಲೀಮ್ ಈ ಹಿಂದೆ ಎರಡು ಬಾರಿ ಕೆಎಂಡಿಸಿಯಲ್ಲಿ ಕೆಲಸ ನಿರ್ವಹಿಸಿದ ಸಂದರ್ಭದಲ್ಲಿ ಇವರ ವಿರುದ್ಧ ಅನೇಕ ದೂರುಗಳಿದ್ದು, ಇವರನ್ನು ಈ ಹುದ್ದೆಗೆ ಮತ್ತೆ ನೇಮಕ ಮಾಡುವುದು ಸೂಕ್ತವಲ್ಲ. ಕೆಎಂಡಿಸಿ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯು ರಾಜ್ಯ ಆಡಳಿತ ಸೇವೆಗೆ ಮೀಸಲಿರಿಸಿದ ಹುದ್ದೆಯಾಗಿದ್ದು, ಇದಕ್ಕೆ ಅನ್ಯ ಸೇವೆಯ ಅಧಿಕಾರಿಯನ್ನು ನೇಮಿಸುವ ಮುನ್ನ ಡಿಪಿಎಆರ್ ಇಲಾಖೆಯ ಸಹಮತಿಯು ಆವಶ್ಯಕವಾಗಿರುತ್ತದೆ.
ಈ ಅಧಿಕಾರಿಯು ಕೆಎಂಡಿಸಿಯಿಂದ ವರ್ಗವಾದ ಸಂದರ್ಭದಲ್ಲಿ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿ(ಕೆಎಟಿ) ತನ್ನ ಆದೇಶ ಸಂಖ್ಯೆ:5561/2012ನಲ್ಲಿ ಅಧಿಕಾರಿಯ ನಡತೆ ಬಗ್ಗೆ ಖಂಡನೆ ಮಾಡಿರುವುದನ್ನು ಗಮನಿಸಬಹುದು. ಈ ಅಧಿಕಾರಿಯು ಪದೇ ಪದೇ ಇದೇ ಹುದ್ದೆಗಾಗಿ ಭಗೀರಥ ಪ್ರಯತ್ನಗಳನ್ನು ಮಾಡುತ್ತಿರುವುದು ನೋಡಿದಾಗ ಇವರಿಗೆ ಆ ಹುದ್ದೆಯಲ್ಲಿ ಯಾವುದೋ ಪಟ್ಟಭದ್ರ ಹಿತಾಸಕ್ತಿ ಇರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಆದುದರಿಂದ, ಇಂತಹ ಅಧಿಕಾರಿಯನ್ನು ಈ ಹುದ್ದೆಗೆ ನೇಮಕ ಮಾಡಿದಲ್ಲಿ ಇದು ಆಡಳಿತ ಯಂತ್ರದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ. ಈ ವರ್ಗಾವಣೆ ಆದೇಶದ ಮುಖಾಂತರ ನೀಡಿರುವ ಅಧಿಕಾರಿಯ ಸೇವೆಯನ್ನು ಹಿಂದಕೆ ಪಡೆಯಲು ಆದೇಶಿಸಬಹುದು ಎಂದು ಅನಿಲ್‌ಕುಮಾರ್ ವರದಿಯಲ್ಲಿ ತಿಳಿಸಿದ್ದಾರೆ.
ಆರೋಪಗಳು:
2013ರ ಜು.5ರಿಂದ 2014ರ ಜ.23ರವರೆಗೆ ಜಾಹೀರಾತು ಗಳಿಗಾಗಿ 50,37,855 ರೂ., ಹಾಗೂ ವಿಐಪಿಗಳು ಖಾಸಗಿ ಹೊಟೇಲ್‌ನಲ್ಲಿ ತಂಗಲು ಲಕ್ಷಾಂತರ ರೂ. ಸಾರ್ವಜನಿಕ ಹಣವನ್ನು ಪೋಲು ಮಾಡಿದ್ದಾರೆ. 2013ರ ಎ.18 ರಿಂದ ಡಿ.31ರ ನಡುವೆ ಟಿಎಡಿಎ ಬಿಲ್‌ಗಳನ್ನು ದುರ್ಬಳಕೆ ಮಾಡಲಾಗಿದೆ.
ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೆ 2 ಕೋಟಿ ರೂ.ಗಳನ್ನು ಬಳಕೆ ಮಾಡಲಾಗಿದೆ. ಈ ಪೈಕಿ ಬೆಳಗಾವಿ ಜಿಲ್ಲೆ ಒಂದಕ್ಕೆ ಒಂದು ಕೋಟಿ ರೂ.ಗಳನ್ನು ನಿಗದಿ ಮಾಡಲಾಗಿದೆ. ತಮ್ಮ ಪುತ್ರ ಮುಹಮ್ಮದ್ ವಸೀಮ್ ನಡೆಸುತ್ತಿರುವ ಸರಕಾರದಿಂದ ಮಾನ್ಯತೆ ಪಡೆಯದೆ ಇರುವ ಎಂಡೂರೆನ್ಸ್ ಮ್ಯಾನೇಜ್‌ಮೆಂಟ್ ಸರ್ವೀಸಸ್ ಪ್ರೈ.ಲಿ.ಗೆ ರಾಷ್ಟ್ರೀಯ ಅಲ್ಪಸಂಖ್ಯಾತರ ಅಭಿವೃದ್ಧಿ ಮತ್ತು ಹಣಕಾಸು ನಿಗಮದಿಂದ ಶೇ.50ರಷ್ಟು ತರಬೇತಿ ಶುಲ್ಕವನ್ನು ಕೌಶಲ್ಯ ತರಬೇತಿ ಕಾರ್ಯಕ್ರಮದಡಿ 2013-14ರಲ್ಲಿ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದ್ದಾರೆ.
ಸ್ವಾವಲಂಬನ ಯೋಜನೆಯಡಿಯಲ್ಲಿ ಕಾಳಿದಾಸ ಸಹಕಾರಿ ಸಂಘದ 500 ಫಲಾನುಭವಿಗಳಿಗೆ ಎರಡು ಕಂತುಗಳಲ್ಲಿ ಒಂದು ಕೋಟಿ ರೂ.ಮಂಜೂರು ಮಾಡಿದ್ದಾರೆ. ಮೊದಲ ಕಂತನ್ನು 2014ರ ಮಾ.8ರಂದು 50 ಲಕ್ಷ ರೂ.(12.50 ಲಕ್ಷ ರೂ.ಸಹಾಯಧನ ಒಳಗೊಂಡಂತೆ).
ಎರಡನೆ ಕಂತು ಮೇ 21ರಂದು 50 ಲಕ್ಷ ರೂ.(12.50 ಲಕ್ಷ ರೂ. ಸಹಾಯಧನ ಒಳಗೊಂಡಂತೆ) ಬಿಡುಗಡೆ ಮಾಡಿದ್ದಾರೆ. ಆದರೆ, ಹಣ ಬಿಡುಗಡೆ ಸಂದರ್ಭದಲ್ಲಿ ಸಂಬಧಪಟ್ಟ ಬ್ಯಾಂಕುಗಳು ಅಥವಾ ಸಹಕಾರಿ ಸಂಘಗಳ ಸಾಮರ್ಥ್ಯ, ವಿಶ್ವಾಸಾರ್ಹತೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಿಲ್ಲ. ಈ ಸಂದರ್ಭದಲ್ಲಿಯೂ ಬೆಳಗಾವಿ ಜಿಲ್ಲೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಹಣವನ್ನು ಚುನಾವಣಾ ನೀತಿ ಸಂಹಿತೆ ಜಾರಿಯಿರುವ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗಿದೆ.
ಎನ್‌ಎಂಡಿಸಿ ಯೋಜನೆಯಡಿಯಲ್ಲಿ ನೇರ ಸಾಲ ಯೋಜನೆಯೂ ಶ್ರೀಮಂತರಿಗೆ ಮಾತ್ರ ಸಹಕಾರಿಯಾಗಿದೆ. 18.5 ಕೋಟಿ ರೂ.ಗಳನ್ನು ಬಳಕೆ ಮಾಡದೆ ಬ್ಯಾಂಕ್‌ನಲ್ಲಿ ಇಟ್ಟ ಕಾರಣಕ್ಕಾಗಿ ಎನ್‌ಎಚ್‌ಡಿಸಿ 1.95 ಕೋಟಿ ರೂ.ದಂಡವನ್ನು ಹಾಕಲಾಗಿದೆ.
ತನಿಖೆಯ ನಿರ್ಣಯಗಳು:


ಜಾಹೀರಾತುಗಳಿಗಾಗಿ 50.37 ಲಕ್ಷ ರೂ. ಡ್ರಾ ಮಾಡಿರುವುದು ಸತ್ಯವಾಗಿದೆ. ಆರ್ಥಿಕ ವ್ಯವಹಾರದಲ್ಲಿ ಪಾರದರ್ಶಕತೆ ಪಾಲ್ಗೊಂಡಿಲ್ಲ. ಖಾಸಗಿ ಹೊಟೇಲ್‌ನಲ್ಲಿ ಗಣ್ಯ ವಕ್ತಿಗಳ ವಾಸ್ತವ್ಯದ ವ್ಯವಸ್ಥೆಗೆ ಹಣ ಪಾವತಿಸುವಾಗ ಟಿಡಿಎಸ್ ಅನ್ನು ಸಮರ್ಪಕವಾಗಿ ಮಾಡಿಲ್ಲ. ಕೇಂದ್ರ ಸರಕಾರದ ಎನ್‌ಎಂಡಿಸಿ ಸಂಸ್ಥೆಯ ಕಾರ್ಯಕ್ರಮಗಳಿಗಾಗಿ ಎನ್‌ಎಂಡಿ ಎಫ್‌ಸಿ ವತಿಯಿಂದ 28.05 ಲಕ್ಷ ರೂ. ಹಂಚಿಕೆಯಾಗಿ ದ್ದರೂ, ಮುಹಮ್ಮದ್ ಸಲೀಮ್ ರಾಜ್ಯ ಸರಕಾರದ 50.37 ಲಕ್ಷ ರೂ. ಖರ್ಚು ಮಾಡಿದ್ದಾರೆ. ರಾಜ್ಯ ಸರಕಾರದ ನಿಧಿಯನ್ನು ಬಳಕೆ ಮಾಡು ವಾಗ ತಮ್ಮ ಅಧಿಕಾರದ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡು ರಾಜ್ಯದ ಆರ್ಥಿಕ ನಿಯಮಾವಳಿಗಳನ್ನು ಗಾಳಿ ತೂರಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.
ಅಕ್ರಮ ಬಹಿರಂಗ:
ಕೆಎಂಡಿಸಿಯಲ್ಲಿ ನೀಡುತ್ತಿರುವ ವಿವಿಧ ಸಾಲಗಳಿಗೆ ಸಂಬಂಧಿಸಿದಂತೆ ಸಂಸ್ಥೆಯಲ್ಲಿ ಯಾವುದೇ ರಶೀದಿ ಮತ್ತು ಲೆಡ್ಜರ್‌ಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲಾಗಿಲ್ಲ. ಜಿಲ್ಲಾ ಶಾಖೆಗಳಿಂದ ಕಂಪೆನಿ ಕಾಯ್ದೆ ಸೆಕ್ಷನ್ 209(2) ಪ್ರಕಾರ ವಾರ್ಷಿಕ ವರದಿಯನ್ನು ಸಂಸ್ಥೆ ತರಿಸಿಕೊಂಡಿಲ್ಲ.
ಸಾಲ ಪಡೆದವರ ಬಗ್ಗೆ ಮಾಹಿತಿ ನೀಡೋದಕ್ಕೂ ಸಂಸ್ಥೆಗೆ ಸಾಧ್ಯವಾಗಿಲ್ಲ. ಸಾಲ ಪಡೆದವರಿಗೆ ಸಂಬಂಧಿಸಿದ ದಾಖಲೆಗಳೇ ನಾಪತ್ತೆಯಾಗಿವೆ ಎನ್ನಲಾಗಿದೆ. ಲೆಕ್ಕಪರಿಶೋಧಕರ ವರದಿಯ ಪ್ರಕಾರ ಸಂಸ್ಥೆಯು ಕಾನೂನು ರೀತಿಯಲ್ಲಿ ಯಾವುದೇ ಖಾತೆಗಳನ್ನು ಸರಿಯಾಗಿ ನಿರ್ವಹಣೆ ಮಾಡದೆ ಇರುವುದು ಕಂಡು ಬಂದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಶ್ರಮ ಶಕ್ತಿ ಯೋಜನೆಯ ಫಲಾನುಭವಿಗಳಿಗೆ ಹಣ ನೀಡಲು 2.76 ಕೋಟಿ ರೂ. ಆವಶ್ಯಕತೆಯಿದೆ ಎಂದು ಕೆಎಂಡಿಸಿ ಕೇಳುತ್ತದೆ. ಆದರೆ, ಈ ಯೋಜನೆಯಡಿ ಖರ್ಚು ಮಾಡಿರುವ ಹಣದ ಲೆಕ್ಕ ಮಾತ್ರ ನೀಡಲು ಮುಂದಾಗಿಲ್ಲ. ರಾಜ್ಯ ಸರಕಾರವು ಸಾಲ ಮನ್ನಾ ಯೋಜನೆ ಘೋಷಣೆ ಮಾಡುವ ನಾಲ್ಕು ದಿನಗಳ ಮುಂಚಿತವಾಗಿ ಶ್ರಮ ಶಕ್ತಿ ಯೋಜನೆಯ ಫಲಾನುಭವಿಗಳ ಸಾಲ ಮನ್ನಾ ಮಾಡಿ ಕೆಎಂಡಿಸಿ ಆದೇಶ ಹೊರಡಿಸಿರುವುದು ಲೆಕ್ಕಪರಿಶೋಧನೆ ವೇಳೆ ಗಮನಕ್ಕೆ ಬಂದಿದೆ ಎಂದು ವರದಿ ತಿಳಿಸಿದೆ.
ಮಾತೃ ಇಲಾಖೆಗೆ ವಾಪಸ್
ಕೆಎಂಡಿಸಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಮುಹಮ್ಮದ್ ಸಲೀಮ್ ವಿರುದ್ಧ ನೂರಾರು ಮಂದಿ ನೇರವಾಗಿ ದಾಖಲೆ ಸಮೇತ ನೀಡಿದ ದೂರನ್ನು ಆಧಾರವಾಗಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ಅವರನ್ನು ಮಾತೃ ಇಲಾಖೆಗೆ ವರ್ಗಾವಣೆ ಮಾಡಿದರು.


ಕೆಎಂಡಿಸಿಯ ಎಲ್ಲ ಯೋಜನೆಗಳ ದುರ್ಬಳಕೆ
ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಲ್ಲಿರುವ ಸ್ವಾವಲಂಬನೆ, ಶ್ರಮಶಕ್ತಿ, ನೇರಸಾಲ, ಗಂಗಾಕಲ್ಯಾಣ ಸೇರಿದಂತೆ ಎಲ್ಲ ಯೋಜನೆಗಳಲ್ಲೂ ಹಣಕಾಸಿನ ದುರ್ಬಳಕೆಯಾಗಿರುವುದು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದಿರುವ ದಾಖಲೆಗಳಲ್ಲಿ ಸ್ಪಷ್ಟವಾಗಿದೆ.
2013ರಲ್ಲಿ ಬೆಂಗಳೂರು ಉತ್ತರ ಭಾಗದ ಡೆಲ್ಲಿ ಪಬ್ಲಿಕ್ ಶಾಲೆಯಲ್ಲಿ ಸಂಘ ಸಂಸ್ಥೆಗಳ ಜಾಗೃತಿ ಸಮಾವೇಶವನ್ನು ಕೆಎಂಡಿಸಿ ವತಿಯಿಂದ ಆಯೋಜಿ ಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಪ್ರಿಂಟಿಂಗ್ ಮತ್ತು ಸ್ಟೇಷನರಿಗೆ 6.58 ಲಕ್ಷ ರೂ., ಹೊಟೇಲ್- 7.38 ಲಕ್ಷ ರೂ., ಸಾರಿಗೆ ವೆಚ್ಚ-6.26 ಲಕ್ಷ ರೂ., ಫೋಟೋಗ್ರಫಿ-69 ಸಾವಿರ ರೂ., ಸಿಬ್ಬಂದಿ ಭತ್ತೆ-41 ಸಾವಿರ, ಟಿಎಡಿಎ-14.66 ಲಕ್ಷ ರೂ.ಸೇರಿದಂತೆ ಒಟ್ಟು 35.99 ಲಕ್ಷರೂ.ಗಳನ್ನು ಖರ್ಚು ಮಾಡಲಾಗಿದೆ.
ಎನ್‌ಎಂಡಿಎಫ್‌ಸಿಯಿಂದ 16 ಲಕ್ಷ ರೂ.ಗಳ ನೆರವು ಬಂದಿದೆ. 500-600 ಮಂದಿ ಪಾಲ್ಗೊಂಡಿದ್ದ ಈ ಸಮಾವೇಶದಲ್ಲಿ ಇಷ್ಟೊಂದು ಖರ್ಚು ಮಾಡಲಾಗಿದೆ. ಆದರೆ, ಟಿಎಡಿಎ ಯಾರಿಗೆಲ್ಲ ನೀಡಲಾಗಿದೆ ಎಂಬವರ ಹೆಸರು, ಮೊಬೈಲ್ ಸಂಖ್ಯೆ, ವಿಳಾಸ ಸೇರಿದಂತೆ ಯಾವುದನ್ನು ದಾಖಲು ಮಾಡಲಾಗಿಲ್ಲ.
ಗಂಗಾಕಲ್ಯಾಣ ಯೋಜನೆಯಡಿಯಲ್ಲಿ ಬೆಳಗಾವಿಗೆ 50 ಲಕ್ಷ ರೂ.ಮಂಜೂರು ಮಾಡಲು ಕೆಎಂಡಿಸಿ ಬೋರ್ಡ್ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದ್ದರೂ ಶೇ.20ರಷ್ಟು ಕಮಿಷನ್ ಆಧಾರದಲ್ಲಿ 5.50 ಕೋಟಿ ರೂ.ಗಳನ್ನು ಒದಗಿಸಲಾಗಿದೆ.
1997ರಲ್ಲಿ ಜನತಾ ಬಜಾರ್‌ನಲ್ಲಿ ಕರ್ತವ್ಯ ನಿರ್ವಹಿ ಸುತ್ತಿದ್ದ ವೇಳೆ ಸೈಕಲ್ ಸ್ಟಾಂಡ್‌ನಲ್ಲಿ ವ್ಯಕ್ತಿಯೊಬ್ಬರಿಂದ ಹಣ ಪಡೆಯುವಾಗ ಮುಹಮ್ಮದ್ ಸಲೀಮ್ ಲೋಕಾಯುಕ್ತ ದಾಳಿಗೂ ಒಳಗಾಗಿದ್ದರು.
-ಅಮೀರ್‌ಖಾನ್, ಸಾಮಾಜಿಕ ಕಾರ್ಯಕರ್ತ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X