ನಾಳೆ ಕೆರೆ ಒತ್ತುವರಿ ಪರಿಶೀಲನೆ
ಬೆಂಗಳೂರು, ಎ. 20: ವಿಧಾನಸಭೆಯ ಕೆರೆಗಳ ಒತ್ತುವರಿ ಬಗೆಗಿನ ಸದನ ಸಮಿತಿಯು ಎ.22ರ ಶುಕ್ರವಾರ ಮಧ್ಯಾಹ್ನ 12ಗಂಟೆಯಿಂದ ಬೆಂಗಳೂರಿನ ವಿವಿಧ ಕೆರೆ ಒತ್ತುವರಿಗಳ ಬಗ್ಗೆ ಸ್ಥಳ ವೀಕ್ಷಣೆ ಮಾಡಲಿದೆ. ಶಾಸಕರ ಭವನದ ಸಮ್ಮೇಳನ ಸಭಾಂಗಣದಲ್ಲಿ ಸದನ ಸಮಿತಿಯು ಸಭೆ ನಡೆಸಿ ಮಧ್ಯಾಹ್ನ 12:30ಕ್ಕೆ ಸದಾಶಿವನಗರದ ಸ್ಯಾಂಕಿ ಕೆರೆ, 1:30ಕ್ಕೆ ಕಾಚರಕನಹಳ್ಳಿ ಕೆರೆ, 3:30ಕ್ಕೆ ಆವಲಹಳ್ಳಿ -ಸಿಂಗನಾಯಕಹಳ್ಳಿ ಕೆರೆ, ಸಂಜೆ 4:30ಕ್ಕೆ ಸಿಂಗನಾಯಕನಹಳ್ಳಿ ಕೆರೆ ಹಾಗೂ 6ಕ್ಕೆ ಬೆಳ್ಳಂದೂರು ಕೆರೆಗಳ ಪರಿವೀಕ್ಷಣೆ ನಡೆಸಲಿದೆ ಎಂದು ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ತಿಳಿಸಿದ್ದಾರೆ.
Next Story





