ಯುವಕನನ್ನು ಬಲಿಪಡೆದ ಗೇರುಕಟ್ಟೆ ಬಸ್ ನಿಲ್ದಾಣದ ಸಿಸಿಟಿವಿ ಕ್ಯಾಮೆರಾ
ಸಿಸಿ ಕ್ಯಾಮರಾ ಅಳವಡಿಸಿದ್ದ ಕಂಬ ಸ್ಪರ್ಶಿಸಿದಾಗ ವಿದ್ಯುತ್ ಆಘಾತ

ಬೆಳ್ತಂಗಡಿ, ಎ.20: ಗೇರುಕಟ್ಟೆ ಬಸ್ ನಿಲ್ದಾಣದ ಬಳಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದ ದೂರವಾಣಿ ಕಂಬದಲ್ಲಿ ವಿದ್ಯುತ್ ಪ್ರವಹಿಸಿದ ಪರಿಣಾಮ ಯುವಕನೋರ್ವ ಮೃತಪಟ್ಟ ಘಟನೆ ಇಂದು ಬೆಳಗ್ಗೆ ನಡೆದಿದೆ.
ಕಳಿಯ ಗ್ರಾಮ ಬೆರ್ಕೆತ್ತೋಡಿ ನಿವಾಸಿ ಮನೋಹರ್(28) ಮೃತಪಟ್ಟವರು. ಅವರು ಇಂದು ಬೆಳಗ್ಗೆ ಗೇರುಕಟ್ಟೆ ಬಸ್ ನಿಲ್ದಾಣದ ಬಳಿ ಸಿಸಿಟಿವಿ ಕ್ಯಾಮರಾ ಅಳವಡಿಸಿರುವ ಕಂಬಕ್ಕೆ ಒರಗಿ ನಿಂತಾಗ ಈ ಅವಘಡ ಸಂಭವಿಸಿದೆ.
ಗೇರುಕಟ್ಟೆ ಬಸ್ ನಿಲ್ದಾಣದಲ್ಲಿ ಸಿಸಿಟಿವಿ ಕ್ಯಾಮೆರಾವನ್ನು ದೂರವಾಣಿ ತಂತಿ ಅಳವಡಿಸಿದದ ಕಬ್ಬಿಣದ ಕಂಬಕ್ಕೆ ಜೋಡಿಸಲಾಗಿದೆ. ಇಂದು ಈ ಕಂಬದಲ್ಲಿ ಸಿಸಿಟಿವಿಗೆ ಸಂಪರ್ಕ ಕಲ್ಪಿಸಿದ್ದ ವಿದ್ಯುತ್ ಪ್ರವಹಿಸಿ ಈ ದುರ್ಘಟನೆ ಸಂಭವಿಸಿದೆ. ಕಂಬದಲ್ಲಿ ಆಕಸ್ಮಿಕವಾಗಿ ಪ್ರವಹಿಸುತ್ತಿದ್ದ ವಿದ್ಯುತ್ ಸ್ಪರ್ಶಕ್ಕೊಳಗಾದ ಮನೋಹರ್ ತೀವ್ರ ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತೆ್ಸ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





