ಸಾಗರದಾಳದಲ್ಲೂ ಸಂಚರಿಸಲಿದೆ ಬುಲೆಟ್ ಟ್ರೈನ್!
ಹೊಸದಿಲ್ಲಿ, ಎ.20: ಮುಂಬೈ ಹಾಗೂ ಅಹ್ಮದಾಬಾದ್ ನಡುವೆ ಸಂಚರಿಸಲಿರುವ ದೇಶದ ಪ್ರಪ್ರಥಮ ಬುಲೆಟ್ ರೈಲಿನಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರು ಸಮುದ್ರದಾಳದಲ್ಲಿ ವಿಹರಿಸುವ ರೋಮಾಂಚನವನ್ನು ಅನುಭವಿಸಲಿದ್ದಾರೆ. 508 ಕಿ.ಮೀ. ವಿಸ್ತೀರ್ಣದ ಮುಂಬೈ-ಅಹ್ಮದಾಬಾದ್ ಹೈಸ್ಪೀಡ್ ರೈಲ್ ಕಾರಿಡಾರ್, ಸಮುದ್ರದಡಿಯಲ್ಲಿ 21 ಕಿ.ಮೀ. ವಿಸ್ತೀರ್ಣದ ಕೊಳವೆಮಾರ್ಗವನ್ನು ಸಹ ಹೊಂದಿರುವುದಾಗಿ ಮಹತ್ವಾಕಾಂಕ್ಷಿ ಬುಲೆಟ್ ಟ್ರೈನ್ ಯೋಜನೆಯಲ್ಲಿ ಒಳಗೊಂಡಿರುವ ರೈಲ್ವೆ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ರೈಲ್ವೆ ಕಾರಿಡಾರ್‌ನ ಬಹುತೇಕ ಭಾಗವು ಎತ್ತರಿಸಲ್ಪಟ್ಟ (ಇಲವೇಟೆಡ್) ರೈಲ್ವೆ ಮಾರ್ಗವನ್ನು ನಿರ್ಮಿಸುವ ಪ್ರಸ್ತಾಪ ಹೊಂದಿದೆ. ಆದರೆ ಥಾಣೆ ಕ್ರೀಕ್‌ನಿಂದ ವಿರಾರ್‌ವರೆಗಿನ ರೈಲು ಮಾರ್ಗವು ಸಮುದ್ರದಡಿಯಲ್ಲಿ ಸಾಗುವುದೆಂದು ಜೆಐಸಿಎನ ಪ್ರಾಜೆಕ್ಟ್ ವರದಿ ತಿಳಿಸಿದೆ. ಬುಲೆಟ್ ಟ್ರೈನ್ ಯೋಜನೆಯ ಅಂದಾಜು ವೆಚ್ಚ 97,636 ಕೋಟಿ ರೂ. ಆಗಿದ್ದು,ಅದರ ಶೇ.81ರಷ್ಟು ಧನಸಹಾಯವು ಜಪಾನ್‌ನಿಂದ ಸಾಲದ ರೂಪದಲ್ಲಿ ದೊರೆಯಲಿದೆ. 50 ವರ್ಷಗಳ ಅವಧಿಯ ಶೇ.0.1 ವಾರ್ಷಿಕ ಬಡ್ಡಿದರದ ಲಘುಸಾಲ ಇದಾಗಿದ್ದು, 15 ವರ್ಷಗಳ ಪಾವತಿ ರಿಯಾಯಿತಿರುವುದು.
ಈ ವರ್ಷದ ಅಂತ್ಯದೊಳಗೆ ಕೇಂದ್ರ ಸರಕಾರವು ಜಪಾನ್ ಜೊತೆಗೆ ಸಾಲ ಒಡಂಬಡಿಕೆಗೆ ಸಹಿಹಾಕಲಿದೆ. 2018ನೆ ಇಸವಿಯ ಅಂತ್ಯದೊಳಗೆ ನಿರ್ಮಾಣ ಕಾಮಗಾರಿ ಆರಂಭಗೊಳ್ಳುವ ನಿರೀಕ್ಷೆಯಿದೆ.
‘‘ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಮಾನವಹಕ್ಕುಗಳು ಮೂಲಭೂತ ವೌಲ್ಯವಾಗಿದೆ ಹಾಗೂ ಅದು ಭಯೋತ್ಪಾದಕರು ಮತ್ತು ಹಂತಕರಿಗೂ ಅನ್ವಯಿಸುತ್ತದೆ’’ ಎಂದು ನ್ಯಾಯಾಧೀಶೆ ಹೆಲನ್ ಆ್ಯಂಡಿನೇಸ್ ಸೆಕುಲಿಕ್ ಅಭಿಪ್ರಾಯಪಟ್ಟರು.
ಬಲಪಂಥೀಯ ತೀವ್ರಗಾಮಿಯಾಗಿರುವ ಬ್ರೇವಿಕ್ 2011ರ ಜುಲೈನಲ್ಲಿ ಕಾರ್‌ಬಾಂಬ್ ಸ್ಫೋಟಿಸಿ ಡಝನ್‌ಗಟ್ಟಳೆ ಎಡಪಂಥೀಯ ಯುವ ರಾಜಕೀಯ ಕಾರ್ಯಕರ್ತರನ್ನು ಕೊಲೆಗೈದಿದ್ದನು.
ತನ್ನನ್ನು ಜೈಲಿನಲ್ಲಿ ಒಂಟಿಯಾಗಿರಿಸಿರುವುದು, ಅತಿರೇಕವೆಂಬಂತೆ ಕೈಕೋಳಗಳನ್ನು ಬಳಸುವುದು, ಪದೇ ಪದೇ ಬಟ್ಟೆ ಬಿಚ್ಚಿ ತಪಾಸಣೆ ನಡೆಸುವುದು ಹಾಗೂ ರಾತ್ರಿ ವೇಳೆ ಎಚ್ಚರಿಸುವುದನ್ನು ಪ್ರಶ್ನಿಸಿ ಆತ ನ್ಯಾಯಾಲಯಕ್ಕೆ ಹೋಗಿದ್ದನು.
ಆತನ ವ್ಯಾಜ್ಯದ ವೆಚ್ಚ 40,000 ಡಾಲರ್ (ಸುಮಾರು 27 ಲಕ್ಷ ರೂಪಾಯಿ) ಪಾವತಿಸುವಂತೆಯೂ ನ್ಯಾಯಾಧೀಶರು ನಾರ್ವೆ ಸರಕಾರಕ್ಕೆ ಆದೇಶ ನೀಡಿದ್ದಾರೆ.







