ರಿಕ್ಷಾ ಢಿಕ್ಕಿ: ಸೈಕಲ್ ಸವಾರ ಮೃತ್ಯು
ಪಡುಬಿದ್ರೆ, ಎ.20: ಹೆಜಮಾಡಿ ಬಸ್ತಿಪಡ್ಪುವಿನ ಹಳೆ ಎಂಬಿಸಿ ರಸ್ತೆಯಲ್ಲಿ ರಿಕ್ಷಾವೊಂದು ಸೈಕಲ್ಗೆ ಹಿಂಬದಿಯಿಂದ ಢಿಕ್ಕಿ ಹೊಡೆದು ವೃದ್ಧರೋರ್ವರು ಸಾವನ್ನಪ್ಪಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಮೃತಪಟ್ಟವರನ್ನು ಹೆಜಮಾಡಿ ಗುಂಡಿಯಲ್ಲಿ ಹೊಟೇಲ್ ವ್ಯವಹಾರ ನಡೆಸುತ್ತಿದ್ದ ಕುಟ್ಟಿ ಪೂಜಾರಿ (74) ಎಂದು ಗುರುತಿಸಲಾಗಿದೆ. ಮೃತರು ತಮ್ಮ ದೈನಂದಿನ ವ್ಯವಹಾರವನ್ನು ಮುಗಿಸಿ ಕನ್ನಂಗಾರ್ ಬೈಪಾಸ್ನ ತನ್ನ ಮನೆಗೆ ಸೈಕಲನ್ನೇರಿ ಬರುತ್ತಿದ್ದಾಗ ಹಳೆ ಎಂಬಿಸಿ ರಸ್ತೆಯ ಅಬ್ಬಗದಾರಗ ಆಲಡೆ ಎದುರು ರಿಕ್ಷಾವೊಂದು ಸೈಕಲ್ಗೆ ಹಿಂಬದಿಯಿಂದ ಢಿಕ್ಕಿಯಾಗಿತ್ತು.
ರಸ್ತೆಗೆ ಅಪ್ಪಳಿಸಲ್ಪಟ್ಟ ಪರಿಣಾಮ ಕುಟ್ಟಿ ಪೂಜಾರಿಯವರ ತಲೆಗೆ ತೀವ್ರ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪಡುಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story