‘ತಬಾಸ್ಕೋ ಹಿಂದುಸ್ಥಾನ್’ ವಸತಿ-ವಾಣಿಜ್ಯ ಸಂಕೀರ್ಣದ ಬ್ರೋಶರ್ ಬಿಡುಗಡೆ
ಮಂಜೇಶ್ವರ, ಎ.20: ತಬಾಸ್ಕೋ ಹಿಂದುಸ್ಥಾನ್ ವಾಣಿಜ್ಯ ಮಳಿಗೆ ಹಾಗೂ ಅಪಾರ್ಟ್ಮೆಂಟ್ನ ಬ್ರೋಶರ್ ಬಿಡುಗಡೆ ಕಾರ್ಯಕ್ರಮ ಕಾಞಂಗಾಡಿನಲ್ಲಿ ನಡೆಯಿತು.
ಪಾಣಕ್ಕಾಡ್ ಸೈಯದ್ ಬಶೀರಲಿ ಶಿಹಾಬ್ ತಂಙಳ್ ಕಾರ್ಯಕ್ರಮ ಉದ್ಘಾಟಿಸಿದರು. ತಬಾಸ್ಕೋ ಹಿಂದುಸ್ಥಾನ್ನ ಎಂ.ಡಿ. ಡಾ.ಪಾವೂರು ಮುಹಮ್ಮದ್ ಅಧ್ಯಕ್ಷತೆ ವಹಿಸಿದ್ದರು.
ಬದ್ರುದ್ದೀನ್ ತಂಙಳ್ ದುಆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಸಂಸದ ಪಿ.ಕರುಣಾಕರನ್, ಕಾಞಂಗಾಡ್ ಮುನ್ಸಿಪಾಲಿಟಿ ಅಧ್ಯಕ್ಷ ವಿ.ವಿ. ರಮೇಶನ್, ಮಾಜಿ ಸಚಿವ ಚೆರ್ಕಳಂ ಅಬ್ದುಲ್ಲಾ, ತಬಾಸ್ಕೋ ನಿರ್ದೇಶಕ ಮುಹಮ್ಮದ್ ಪಳ್ಳಿಪ್ಪುಝ, ತಬಾಸ್ಕೋ ಅಧ್ಯಕ್ಷ ಬಶೀರ್ ಮಲ್ಕಯಿಲ್ ಮೊದಲಾದವರು ಉಪಸ್ಥಿತರಿದ್ದರು.
Next Story