ಒಂದು ಪೇರಳೆ ಹಣ್ಣು : 10 ಅಸಾಧಾರಣ ಆರೋಗ್ಯ ಲಾಭಗಳು

ಪೇರಳೆ ಹಣ್ಣಿನಲ್ಲಿ ವಿಶಿಷ್ಟ ರುಚಿ ಮತ್ತು ಪರಿಮಳವಿದೆ. ಚಾಟ್ ಮಸಾಲಗೆ ಹಾಕಿ ತಿನ್ನುವಾಗ ನಾವೆಲ್ಲರೂ ಅದರ ಸವಿಯನ್ನು ತಿಳಿದಿದ್ದೇವೆ. ಉಪ್ಪಿನಕಾಯಿ, ಜಾಮ್ ಮತ್ತು ಜೆಲ್ಲಿಗಳಲ್ಲೂ ಸವಿದಿದ್ದೇವೆ. ಪೇರಳೆಗಳು ಆರೋಗ್ಯಕ್ಕೂ ಬಹಳ ಉತ್ತಮ. ಪೇರಳೆ ಹಣ್ಣಿನ ಹತ್ತು ಅದ್ಭುತ ಲಾಭಗಳ ವಿವರ ಇಲ್ಲಿದೆ.
ತೂಕ ಇಳಿಸುವುದರಲ್ಲಿ ನೆರವು

ಪೇರಳೆಯಲ್ಲಿ ಕೊಲೆಸ್ಟರಾಲ್ ಇಲ್ಲ ಮತ್ತು ಸ್ವಲ್ಪವೇ ಜೀರ್ಣವಾಗುವ ಕಾರ್ಬೋಹೈಡ್ರೇಟುಗಳಿವೆ. ನಿಮ್ಮ ಪ್ರೊಟೀನ್, ವಿಟಮಿನ್ ಮತ್ತು ಫೈಬರುಗಳನ್ನು ಕಡಿಮೆ ಮಾಡದೆ ಪೇರಳೆ ಚಯಾಪಚಯ ನಿಯಂತ್ರಿಸಿ ತೂಕ ಕಳೆದುಕೊಳ್ಳಲು ನೆರವಾಗುತ್ತದೆ.
ನಿರೋಧಕ ಶಕ್ತಿ ಹೆಚ್ಚಳ

ಪೇರಳೆಯಲ್ಲಿ ವಿಟಮಿನ್ ಸಿ ಮತ್ತು ಕಬ್ಬಿಣದ ಅಂಶ ಅಧಿಕವಾಗಿರುವ ಕಾರಣ ಇವೆರಡೂ ಶೀತ ಮತ್ತು ವೈರಲ್ ಸೋಂಕುಗಳಿಂದ ರಕ್ಷಣೆ ನೀಡುತ್ತವೆ. ಶ್ವಾಸಕೋಶ ಮತ್ತು ಗಂಟಲುಗಳ ಸೋಂಕುನಿವಾರಕವಾಗಿರುವುದರಿಂದ ಹಸಿ ಪೇರಳೆಯ ಪಾನೀಯವು ಕೆಮ್ಮು ಮತ್ತು ಶೀತ ನಿವಾರಿಸಲು ಉತ್ತಮ.
ಉತ್ತಮ ದೃಷ್ಟಿ

ದೃಷ್ಟಿ ಶಕ್ತಿಯನ್ನು ಹೆಚ್ಚಿಸುವ ವಿಟಮಿನ್ ಎ ಶಕ್ತಿಯನ್ನು ಇದು ಹೊಂದಿದೆ. ಕ್ಯಾಟರಾಕ್ಟ್ ಮತ್ತು ಮ್ಯಾಕ್ಯುಲರ್ ನಾಶದ ಸಮಸ್ಯೆಯನ್ನು ಕಡಿಮೆಗೊಳಿಸುತ್ತದೆ.
ಮಲಬದ್ಧತೆಗೆ ಚಿಕಿತ್ಸೆ

ಒಂದು ಪೇರಳೆಯಿಂದ ನಿತ್ಯದ ಅಗತ್ಯವಿರುವ ಶೇ 12ರಷ್ಟು ಫೈಬರ್ ಅಂಶ ಸಿಗುತ್ತದೆ. ಪೇರಳೆಯು ಆರೋಗ್ಯಕರ ಕರುಳಿನ ಚಲನೆಗೆ ನೆರವಾಗುತ್ತದೆ.
ಅಧಿಕ ರಕ್ತದೊತ್ತಡವನ್ನು ಕಡಿತಗೊಳಿಸುತ್ತದೆ

ಪೇರಳೆಯಲ್ಲಿರುವ ಪೊಟಾಶಿಯಂ ರಕ್ತದ ಒತ್ತಡದ ಮಟ್ಟವನ್ನು ಸಮಗೊಳಿಸಲು ನೆರವಾಗುತ್ತದೆ. ಬಾಳೆಹಣ್ಣು ಮತ್ತು ಪೇರಳೆ ಒಂದೇ ಪ್ರಮಾಣದ ಪೊಟಾಶಿಯಂ ಅಂಶವನ್ನು ಹೊಂದಿದೆ.
ಮಧುಮೇಹ ತಡೆಯುತ್ತದೆ

ಫೈಬರ್ ಅಂಶ ಭರಪೂರ ತುಂಬಿರುವ ಕಾರಣ ಮತ್ತು ಕಡಿಮೆ ಗ್ಲಿಸಮಿಕ್ ಇಂಡೆಕ್ಸ್ ಇರುವ ಕಾರಣ ಪೇರಳೆಗಳು ಮಧುಮೇಹದಿಂದ ರಕ್ಷಣೆ ಒದಗಿಸುತ್ತವೆ.
ಹೃದಯ ಆರೋಗ್ಯ

ಪೇರಳೆಗಳು ದೇಹದಲ್ಲಿ ಸೋಡಿಯಂ ಮತ್ತು ಪೊಟಾಶಿಯಂ ಸಮತೋಲನ ಕಾಪಾಡುತ್ತವೆ. ಆ ಮೂಲಕ ಅಧಿಕ ರಕ್ತದೊತ್ತಡವಿರುವ ರೋಗಿಗಳಲ್ಲಿ ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ.
ಚರ್ಮದ ಆರೈಕೆ

ಪೇರಳೆಗಳಲ್ಲಿ ವಿಟಮಿನ್ ಎ, ವಿಟಮಿನ್ ಸಿ ಮತ್ತು ಇತರ ಆಂಟಿ ಆಕ್ಸಿಡಂಟುಗಳಾದ ಕ್ಯಾರೋಟಿನ್ ಮತ್ತು ಲೈಕೊಪಿನ್ ಹೆಚ್ಚಾಗಿದ್ದು, ಚರ್ಮವು ಸುಕ್ಕುಗಟ್ಟುವುದರಿಂದ ರಕ್ಷಿಸುತ್ತದೆ.
ಒತ್ತಡ ನಿವಾರಕ

ಪೇರಳೆಗಳಲ್ಲಿರುವ ಮೆಗ್ನೇಶಿಯಂ ಮೂಳೆಗಳು ಮತ್ತು ನರವ್ಯೆಹಗಳ ರಿಲ್ಯಾಕ್ಸ್‌ಗೆ ನೆರವಾಗುತ್ತವೆ. ಹೀಗಾಗಿ ಕೆಲಸದ ಒತ್ತಡದಿಂದ ಮೂಳೆಗಳು ರಿಲ್ಯಾಕ್ಸ್ ಆಗಲು ಮತ್ತು ಒತ್ತಡ ನಿವಾರಿಸಲು ಮತ್ತು ದೇಹದ ವ್ಯವಸ್ಥೆಗೆ ಶಕ್ತಿಯನ್ನು ನೀಡಲು ನೆರವಾಗುತ್ತದೆ.
ಹಲ್ಲು ನೋವು ನಿವಾರಕ

ಪೇರಳೆಗಳು ಪ್ರಭಾವೀ ಉರಿಯೂತ ವಿರೋಧಿ ಶಕ್ರಿ ಹೊಂದಿದೆ. ಬ್ಯಾಕ್ಟೀರಿಯ ವಿರೋಧಿ ಶಕ್ತಿ ಹೊಂದಿದೆ. ಇವುಗಳು ಸೋಂಕು ಮತ್ತು ಹುಳುಗಳ ವಿರುದ್ಧ ಹೋರಾಡಲು ನೆರವಾಗುತ್ತವೆ. ಒಸಡುಗಳು ದಪ್ಪವಾದಾಗ ಅಥವಾ ಬಾಯಿ ಹುಣ್ಣು ಬಂದಾಗಲೂ ಉತ್ತಮ ಚಿಕಿತ್ಸೆ ನೀಡುವ ಪೇರಳೆ ಎಲೆಗಳು ಹಲ್ಲು ನೋವಿಗೆ ಉತ್ತಮ ಮನೆ ಔಷಧಿ.
ಕೃಪೆ: www.indiatimes.com







