ಜೂನಿಯರ್ ದ್ರಾವಿಡ್‌ರಿಂದ ಶತಕ
ತಂದೆಯ ಹಾದಿ ಹಿಡಿದ ಸಮಿತ್

ಬೆಂಗಳೂರು, ಎ.21: ಭಾರತದ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್‌ರ ಪುತ್ರ ಸಮಿತ್ ತಂದೆಯ ಹೆಜ್ಜೆ ಅನುಸರಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ನಡೆದ 14 ವರ್ಷದೊಳಗಿನವರ ಕ್ಲಬ್ ಕ್ರಿಕೆಟ್ ಪಂದ್ಯದಲ್ಲಿ ಸಮಿತ್ ಶತಕ ಸಿಡಿಸಿದ್ದಾನೆ.
ಬೆಂಗಳೂರು ಯುನೈಟೆಡ್ ಕ್ರಿಕೆಟ್ ಕ್ಲಬ್‌ನ್ನು(ಬಿಯುಸಿಸಿ) ಪ್ರತಿನಿಧಿಸುತ್ತಿರುವ ಜೂನಿಯರ್ ದ್ರಾವಿಡ್, ಟೈಗರ್ ಕ್ಲಬ್ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಫ್ರಾಂಕ್ ಅಂಥೋನಿ ಪಬ್ಲಿಕ್ ಸ್ಕೂಲ್ ವಿರುದ್ಧ 125 ರನ್ ಗಳಿಸಿದ್ದು, ಇದರಲ್ಲಿ 12 ಬೌಂಡರಿಗಳಿವೆ. ಸಮಿತ್ ಹಾಗೂ ಪ್ರತ್ಯುಷ್(ಔಟಾಗದೆ 143) ಸಾಹಸದಿಂದಾಗಿ ಬಿಯುಸಿಸಿ ತಂಡ ಪಬ್ಲಿಕ್ ಸ್ಕೂಲ್ ವಿರುದ್ಧ 246 ರನ್ ಅಂತರದಿಂದ ಗೆಲುವು ಸಾಧಿಸಿತು.
ಸಮಿತ್ ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ಅಂಡರ್-12 ಗೋಪಾಲನ್ ಕ್ರಿಕೆಟ್ ಚಾಲೆಂಜ್ ಟೂರ್ನಿಯಲ್ಲಿ ‘ಬೆಸ್ಟ್ ಬ್ಯಾಟ್ಸ್‌ಮನ್’ ಪ್ರಶಸ್ತಿ ಪಡೆದಿದ್ದರು. ಆ ಟೂರ್ನಿಯಲ್ಲಿ ತನ್ನ ಶಾಲೆ ಮಲ್ಯ ಅದಿತಿ ಇಂಟರ್‌ನ್ಯಾಶನಲ್ ಪರವಾಗಿ ಔಟಾಗದೆ 77, 93 ಹಾಗೂ 77 ರನ್ ಗಳಿಸಿದ್ದರು.
Next Story





