ಜೈಪುರದಲ್ಲಿ ಐಪಿಎಲ್ ಪಂದ್ಯ: ಬಿಸಿಸಿಐ ನಿರ್ಧಾರಕ್ಕೆ ರಾಜಸ್ಥಾನ ಹೈಕೋರ್ಟ್ ತರಾಟೆ
ಹೊಸದಿಲ್ಲಿ, ಎ.21: ತೀವ್ರತರದ ನೀರಿನ ಅಭಾವ ಎದುರಿಸುತ್ತಿರುವ ರಾಜಸ್ಥಾನದ ಜೈಪುರದಲ್ಲಿ ಐಪಿಎಲ್ ಪಂದ್ಯಗಳನ್ನು ಆಯೋಜಿಸುತ್ತಿರುವ ನಿರ್ಧಾರವನ್ನು ಪ್ರಶ್ನಿಸಿ ಬಿಸಿಸಿಐ ಹಾಗೂ ರಾಜ್ಯ ಸರಕಾರಕ್ಕೆ ರಾಜಸ್ಥಾನ ಹೈಕೋರ್ಟ್ ಗುರುವಾರ ನೋಟಿಸ್‌ಗಳನ್ನು ಜಾರಿ ಮಾಡಿದೆ.
ಸ್ವತಹ ರಾಜಸ್ಥಾನ ನೀರಿನ ಬರ ಎದುರಿಸುತ್ತಿದ್ದು, ಬರಪೀಡಿತ ಮಹಾರಾಷ್ಟ್ರದಿಂದ ಐಪಿಎಲ್ ಪಂದ್ಯಗಳನ್ನು ರಾಜಸ್ಥಾನಕ್ಕೆ ವರ್ಗಾಯಿಸುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ರಾಜಸ್ಥಾನ ಹೈಕೋರ್ಟ್, ರಾಜ್ಯ ಸರಕಾರ ಹಾಗೂ ಬಿಸಿಸಿಐಗೆ ಅಲ್ಲದೆ, ಪಬ್ಲಿಕ್ ಹೆಲ್ತ್ ಇಂಜಿನಿಯರಿಂಗ್ ಡಿಪಾರ್ಟ್‌ಮೆಂಟ್, ವಾಟರ್ ರಿಸೋರ್ಸ್ ಡಿಪಾರ್ಟ್‌ಮೆಂಟ್, ಸ್ಪೋರ್ಟ್ಸ್ ಹಾಗೂ ಯುತ್ ಇಲಾಖೆ ಹಾಗೂ ರಾಜಸ್ಥಾನ ಕ್ರಿಕೆಟ್ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದೆ.
ಎ.27ರ ಒಳಗೆ ಉತ್ತರ ನೀಡುವಂತೆ ರಾಜಸ್ಥಾನ ಸರಕಾರಕ್ಕೆ ಹೈಕೋರ್ಟ್ ಸೂಚಿಸಿದೆ. ನೀರಿನ ಬಿಕ್ಕಟ್ಟು ಎದುರಿಸುತ್ತಿರುವ ಮಹಾರಾಷ್ಟ್ರದಿಂದ ಜೈಪುರಕ್ಕೆ ಐಪಿಎಲ್ ಪಂದ್ಯಗಳನ್ನು ವರ್ಗಾಹಿಸುತ್ತಿರುವುದನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಯನ್ನು ರಾಜಸ್ಥಾನ ಹೈಕೋರ್ಟ್‌ಗೆ ಬುಧವಾರ ಸಲ್ಲಿಸಲಾಗಿತ್ತು.





