ಪೋಷಕರೇ ಎಚ್ಚರ, ಮಕ್ಕಳಿಂದ ಕಾರು ಚಾಲನೆ ತಮಾಷೆಯಲ್ಲ !
ಡ್ರೈವಿಂಗ್ ಕಲಿಯಲು ಹೋದ 14 ರ ಬಾಲಕ, ಕಲಿಸುತ್ತಿದ್ದ ಡ್ರೈವರ್ ಅಪಘಾತಕ್ಕೆ ಬಲಿ

ಮುಂಬೈ: ತನ್ನ ತಂದೆಯ ಟೊಯೊಟಾ ಈಟಿಯೋಸ್ಕಾರನ್ನು ಚಲಾಯಿಸುತ್ತಿದ್ದ ಹದಿನಾಲ್ಕು ವರ್ಷದ ಬಾಲಕ ಹಾಗೂ ಆತನಿಗೆ ಡ್ರೈವಿಂಗ್ ಕಲಿಸುತ್ತಿದ್ದ ಕಾರು ಚಾಲಕ ಇಬ್ಬರೂನಾಗ್ ಪಾಡದಲ್ಲಿ ಬುಧವಾರ ನಡೆದ ದಾರುಣ ಅಪಘಾತವೊಂದರಲ್ಲಿ ಮೃತಪಟ್ಟಿದ್ದಾರೆ.
ಮೂಲಗಳ ಪ್ರಕಾರ ಬಾಲಕ ಮುಹಮ್ಮದ್ ಹಫೀಝ್ ಪಟೇಲ್ ಕಾರಿನ ಎಕ್ಸಿಲರೇಟರನ್ನು ಒಮ್ಮೆಗೇ ಒತ್ತಿದ ಪರಿಣಾಮ ಕಾರು ಮದನ್ ಪುರದ ಇಖ್ಬಾಲ್ ಹೈಟ್ ಕಟ್ಟಡದ ಲಿಫ್ಟಿನ ಶಾಫ್ಟ್ ಪ್ರವೇಶಿಸಿ ಕಟಡದ ಎಡನೇ ಮಹಡಿಯಲ್ಲಿದ್ದ ವಾಹನ ಪಾರ್ಕಿಂಗ್ ಸ್ಥಳದಿಂದ ಕೆಳಕ್ಕೆ ಬಿದ್ದ ಪರಿಣಾಮ ಬಾಲಕ ಹಾಗೂ ಚಾಲಕ ಮುಹಮ್ಮದ್ ಜಾವೇದ್ (32) ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದರು. ಅವರು ಬದುಕಿರಬಹುದೆಂದು ಊಹಿಸಿ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ವೈದ್ಯರು ಅವರು ಮೃತಪಟ್ಟಿದ್ದಾರೆಂದು ಘೋಷಿಸಿದರು..
ಪೊಲೀಸರು ಆಕಸ್ಮಿಕ ಸಾವು ಪ್ರಕರಣ ದಾಖಲಿಸಿದ್ದಾರೆ.
Next Story





