ಇಬ್ರ: ಅಪಘಾತದಲ್ಲಿ ಭಾರತೀಯ ವೈದ್ಯೆ ಮೃತ್ಯು

ಇಬ್ರ, ಎಪ್ರಿಲ್ 21: ಸಫಾಲದಲ್ಲಿ ಸಂಭವಿಸಿದ ವಾಹನ ಅಪಘಾತದಲ್ಲಿ ಭಾರತೀಯ ವೈದ್ಯೆ ಮೃತ ಪಟ್ಟಿರುವುದಾಗಿ ವರದಿಯಾಗಿದೆ. ಮಧ್ಯಪ್ರದೇಶದ ನಿವಾಸಿ ಸುನೀತಾ ಪೋತೆದಾರ್(47) ಮೃತ ವೈದ್ಯೆ ಎಂದು ಗುರುತಿಸಲಾಗಿದೆ. ಸಫಾಲದ ಒಳಗಿನ ರಸ್ತೆಯಲ್ಲಿ ಈ ಅಪಘಾತ ನಡೆದಿದೆ ಎಂದು ವರದಿಗಳು ತಿಳಿಸಿವೆ.
ವೈದ್ಯೆ ಸಂಚರಿಸುತ್ತಿದ್ದ ಪಜೀರೊ ವಾಹನ ಸೂರಿ ಎಂಬಲ್ಲಿಗೆ ಹೋಗುತ್ತಿದ್ದ ಒಎನ್‌ಟಿಸಿ ಬಕ್‌ಗೆ ಢಿಕ್ಕಿಯಾಗಿತ್ತು. ವೈದ್ಯೆ ಘಟನಾ ಸ್ಥಳದಲ್ಲಿಯೇ ಮೃತರಾದರು. ಇಪ್ಪತ್ತೈದು ವರ್ಷಗಳಿಂದ ಇವರು ಒಮನ್‌ನಲ್ಲಿ ಉದ್ಯೋಗಿಯಾಗಿದ್ದಾರೆ. ಇಬ್ರದಲ್ಲಿ ಆರೋಗ್ಯ ಸಚಿವಾಲಯದ ಅಧೀನದಲ್ಲಿ ರೀಜನಲ್ ಆಸ್ಪತ್ರೆಯಲ್ಲಿ ಗೈನಾಲಜಿಸ್ಟ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಈಜಿಪ್ಟ್‌ನ ಹಿಶಾಮ್ ಅವರ ಪತಿಯಾಗಿದ್ದಾರೆ. ಬಿಸ್ಮಾ, ಅಹ್ಮದ್ ಎಂಬಿಬ್ಬರು ಮಕ್ಕಳಿದ್ದಾರೆ. ಸ್ವದೇಶಿಗಳು ಮತ್ತು ವಿದೇಶಿಗಳ ನಡುವೆ ಜನಪ್ರಿಯ ವೈದ್ಯೆಯಾಗಿದ್ದ ಅವರ ಅಪಮೃತ್ಯವಿನಿಂದಾಗಿ ಎಲ್ಲರೂ ಆಘಾತಗೊಂಡಿದ್ದಾರೆಂದು ವರದಿಗಳು ತಿಳಿಸಿವೆ.
Next Story





