ಚೆಕ್ ರಿಪಬ್ಲಿಕ್‌ಗೆ ಹೊಸ ಹೆಸರು: ಇನ್ನುಮುಂದೆ ಚೆಕಿಯಾ ಆಗಲಿದೆ

ಪ್ರಾಗ್, ಎಪ್ರಿಲ್ 21: ಚೆಕ್ ರಿಪಬ್ಲಿಕ್‌ಗೆ ಹೊಸ ಹೆಸರು ಇರಿಸಿ ಚೆಕಿಯಾ ಎಂದು ಕರೆಯಲು ನಿರ್ಧರಿಸಲಾಗಿದೆ. ಅಧ್ಯಕ್ಷರು, ಪ್ರಧಾನ ಮಂತ್ರಿ, ವಿದೇಶ ಹಾಗೂ ಗೃಹ ಸಚಿವರು ಹೆಸರು ಬದಲಾವಣೆಗೆ ಸಿದ್ಧರಾಗಿದ್ದಾರೆ. ಕ್ಯಾಬಿನೆಟ್ ಅಂತಿಮ ನಿರ್ಧಾರ ಅನುಕೂಲವಾದರೆ ವಿಶ್ವಸಂಸ್ಥೆಗೆ ಅಧಿಕೃತವಾಗಿ ತಿಳಿಸಲಾಗುವುದು ಎಂದು ವರದಿಯಾಗಿದೆ.
ಹೊಸ ಹೆಸರನ್ನು ರಷ್ಯದಿಂದ ಬೇರ್ಪಟ್ಟ ರಿಪಬ್ಲಿಕ್ ಆದ ಚೆಚ್ನಿಯಾದೊಂದಿಗೆ ಸಾಮ್ಯತೆ ಇದೆ ಎಂಬ ಆಕ್ಷೇಪ ಕೇಳಿಬಂದಿದೆ. 1933ರಲ್ಲಿ ಚೆಕೊಸ್ಲೊವಾಕಿಯಾ ವಿಭಜನೆಗೊಂಡು ಚೆಕ್ ರಿಪಬ್ಲಿಕ್ ಸ್ಲೋವಾಕಿಯಾ ರೂಪೀಕರಿಸಲಾಗಿತ್ತು.ದೇಶದ ಹೆಚ್ಚಿನಭಾಗವನ್ನು ಬೊಹೇಮಿಂ ಎಂದು ಕರೆಯಲಾಗುತ್ತಿದೆ. ಬೊಹೇಮಿಯ, ಮೊರೊವಿಯ ಎಂಬ ಎರಡು ಭೂಭಾಗಗಳು ಸೇರಿ ಚೆಕ್ ರಿಪಬ್ಲಿಕ್ ಆಗಿದೆ. ಆದರೆ ಮೊರಾವ್ಯ, ಸೈಲೇಷ್ಯ ಎಂಬ ಪ್ರದೇಶಗಳನ್ನು ಹೊಸ ಹೆಸರು ಪರಿಗಣಿಸಿದಾಗ ಕಡೆಗಣಿಸಲಾಗಿದೆ ಎಂಬ ಆಕ್ಷೇಪ ಕೇಳಿಬಂದಿದೆ . ಅಲ್ಲಿ ಹೆಸರು ಬದಲಾವಣೆಯನ್ನು ವಿರೋಧಿಸುವ ಬಹುದೊಡ್ಡ ಜನವಿಭಾಗ ಇದೆ ಎಂದು ವರದಿಗಳು ತಿಳಿಸಿವೆ.
Next Story





