ಉಡುಪಿ: ಸಹೋದರಿಯರು ನಾಪತ್ತೆ

ಉಡುಪಿ, ಎ.21: ದೊಡ್ಡಣಗುಡ್ಡೆಯ ಎಚ್.ಎಸ್.ಯೋಗೀಶ್ ಆಚಾರ್ಯ ಎಂಬವರ ಪುತ್ರಿಯರಾದ ಪೂಜಾ ವೈ. (20) ಹಾಗೂ ಸೌಜನ್ಯಾ ಎಚ್.ವೈ. (16) ಬುಧವಾರ ಸಂಜೆ 7 ಗಂಟೆ ಸುಮಾರಿಗೆ ಮನೆಯಿಂದ ಹೊರಹೋದವರು ನಾಪತ್ತೆಯಾಗಿದ್ದಾರೆ ಎಂದು ಮಣಿಪಾಲ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಕೆಲಸದ ನಿಮಿತ್ತ ಯೋಗೀಶ್ ಆಚಾರ್ಯ ಹಾಗೂ ಅವರ ಪತ್ನಿ ಸವಿತಾ ಸಂಜೆ 6:30ರ ಸುಮಾರಿಗೆ ಹೊರಹೋಗುವಾಗ ಹೆಣ್ಣು ಮಕ್ಕಳಿಬ್ಬರೂ ಮನೆಯಲ್ಲಿದ್ದರು. ಆದರೆ 7 ಗಂಟೆಗೆ ಅವರ ಮಗ ಮಿಥುನ್ ಮನೆಗೆ ಬಂದಾಗ ಸಹೋದರಿಯರಿಬ್ಬರೂ ಮನೆಯಲ್ಲಿರಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇಬ್ಬರೂ ಕೋಲು ಮುಖ, ಗೋಧಿ ಮೈಬಣ್ಣ, ಕಪ್ಪು ಕೂದಲನ್ನು ಹೊಂದಿದ್ದು, ಪೂಜಾ ನೀಲಿ ಮತ್ತು ಬಿಳಿ ಬಣ್ಣದ ಚೂಡಿದಾರ ಧರಿಸಿದ್ದರೆ, ಸೌಜನ್ಯ ಹಳದಿ ಬಣ್ಣದ ಚೂಡಿದಾರ ಧರಿಸಿದ್ದಾರೆ. ಇಬ್ಬರೂ ಕನ್ನಡ, ಹಿಂದಿ, ಇಂಗ್ಲಿಷ್, ತುಳು ಭಾಷೆ ಮಾತನಾಡುತ್ತಾರೆ. ಇವರಿಬ್ಬರ ಕುರಿತು ಯಾವುದೇ ಮಾಹಿತಿ ಸಿಕ್ಕಲ್ಲಿ ಮಣಿಪಾಲ ಠಾಣೆಯನ್ನು (0820-2570328, 94480805448, 9480805475) ಸಂಪರ್ಕಿಸುವಂತೆ ತಿಳಿಸಲಾಗಿದೆ.
Next Story





