Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಸಾಕ್ಷಿ ಮಹಾರಾಜ್‌ರ ಹರಕು ಬಾಯಿಗೆ ಬೀಗ...

ಸಾಕ್ಷಿ ಮಹಾರಾಜ್‌ರ ಹರಕು ಬಾಯಿಗೆ ಬೀಗ ಬೀಳಲಿ

ಶಬೀನಾ ಬಾನು ವೈ.ಕೆ., ಹೊಸಂಗಡಿಶಬೀನಾ ಬಾನು ವೈ.ಕೆ., ಹೊಸಂಗಡಿ21 April 2016 5:16 PM IST
share

‘‘ಮುಸ್ಲಿಂ ಮಹಿಳೆಯರು ಚಪ್ಪಲಿ ಇದ್ದಂತೆ. ಚಪ್ಪಲಿಯ ಅಗತ್ಯವಿದ್ದಾಗ ಧರಿಸಿ, ಬೇಡವಾದಾಗ ಹೊರಗೆ ಎಸೆಯುವಂತೆ!’’ ಎಂದು ಹೊಸ ವಿವಾದಿತ ಹೇಳಿಕೆಯನ್ನು ನೀಡಿದ ಸಂಸದ ಸಾಕ್ಷಿ ಮಹಾರಾಜ್ ರವರು, ಹಲವು ಬಾರಿ ಮುಸ್ಲಿಮರ ವಿರುದ್ಧ ಇಂತಹ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದಾರೆ. ಸಂವಿಧಾನಾತ್ಮಕವಾಗಿ ದೇಶದಲ್ಲಿರುವ ಎಲ್ಲಾ ಪ್ರಜೆಗಳಿಗೂ ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿದೆ. ಹಾಗಿರುವಾಗ ಇಡೀ ಮುಸ್ಲಿಂ ಸಮುದಾಯದಲ್ಲಿರುವ ಮಹಿಳೆಯರ ಬಗ್ಗೆ ಈ ರೀತಿಯ ತುಚ್ಛವಾದ ಹೇಳಿಕೆಗಳನ್ನು ನೀಡಿದ ಸಾಕ್ಷಿ ಮಹಾರಾಜ್ ರವರು, ಗಮನಿಸಬೇಕಾದ ಸತ್ಯಾಂಶಗಳು ಇಸ್ಲಾಂ ಧರ್ಮದಲ್ಲಿದೆ ಎಂದು ಅರಿತುಕೊಳ್ಳಬೇಕಾದ ಅವಶ್ಯಕತೆ ಇದೆ. ಮಹಿಳೆಯರಿಗೆ ಜೀವಿಸುವ ಹಕ್ಕು, ಆಸ್ತಿಯ ಹಕ್ಕು, ಸ್ವಯಂವರದ ಹಕ್ಕು, ವರದಕ್ಷಿಣೆಗೆ ಬದಲಾಗಿ ಮಹರ್ ಪಡೆಯುವ ಹಕ್ಕು, ಪುರುಷರಿಗೆ ನೀಡಿರುವ ತಲಾಕ್ನ ಹಕ್ಕಿನಂತೆ ಖುಲಾ(ವಿಚ್ಛೇದನೆ)ದ ಹಕ್ಕು, ಪತಿಯ ಹಸ್ತಕ್ಷೇಪವಿಲ್ಲದೇ ಸ್ವಂತ ವ್ಯಾಪಾರ-ವ್ಯವಹಾರಗಳಲ್ಲಿ ತೊಡಗುವ ಹಕ್ಕು, ಒಂದು ವೇಳೆ ಸ್ತ್ರೀಯರು ಇಷ್ಟಪಡುವುದಾದರೆ ಮಸೀದಿಯಲ್ಲಿ ನಮಾರ್ ನಿರ್ವಹಿಸುವ ಹಕ್ಕನ್ನು ನೀಡಿದ್ದು ಇಸ್ಲಾಂ ಧರ್ಮವಾಗಿದೆ. ಇದನ್ನು ಸಾಕ್ಷಿ ಮಹಾರಾಜ್ ತಿಳಿದಿದ್ದಿದ್ದರೆ ಈ ಬಾಲಿಶಃತನದ ಹೇಳಿಕೆಯನ್ನು ನೀಡುತ್ತಿರಲಿಲ್ಲ. ಮಹಿಳೆಯರಿಗೆ ಇಷ್ಟೆಲ್ಲಾ ಹಕ್ಕುಗಳನ್ನು ನೀಡಿದ್ದು ಪ್ರವಾದಿ ಮುಹಮ್ಮದ್(ಸ.ಅ)ರವರ ವಚನಗಳೇ ಸಾಕ್ಷಿ. ಅಲ್ಲದೆ ಅದು ಇಂದು, ನಿನ್ನೆಯ ವಚನಗಳಲ್ಲ. ಬದಲಾಗಿ 14 ಶತಮಾನಗಳ ಹಿಂದೆಯೇ ಜಗತ್ತಿಗೆ ತಿಳಿಸಿಕೊಟ್ಟವರು ಪ್ರವಾದಿಗಳು. ಇಸ್ಲಾಂನಲ್ಲಿ ತಾಯಿಗೆ ತಂದೆಗಿಂತ ಉನ್ನತ ಸ್ಥಾನವನ್ನು ಕಲ್ಪಿಸಿಕೊಟ್ಟದ್ದು, ತಾಯಿಯ ಪಾದದಡಿಯಲ್ಲಿ ಸ್ವರ್ಗವಿದೆ ಎಂದು ಇಡೀ ಜಗತ್ತಿಗೆ ಕಲಿಸಿಕೊಟ್ಟದ್ದು ಇಸ್ಲಾಂ ಧರ್ಮವಾಗಿದೆ ಎಂಬುವುದನ್ನು ದೇವಮಾನವ ಎನಿಸಿಕೊಂಡಿರುವ ಸಾಕ್ಷಿ ಮಹಾರಾಜ್ ತಿಳಿದುಕೊಳ್ಳುವ ಅಗತ್ಯತೆ ಇದೆ. ವೃದ್ಧ ತಾಯಿಯ ಸೇವೆ ಮಾಡುವ ಕುರಿತು ಮಕ್ಕಳಿಗೆ, ಮಗಳ ಪಾಲನೆ-ಪೋಷಣೆ, ಶಿಕ್ಷಣ-ತರಬೇತಿ ನೀಡುವಂತೆ ತಂದೆಗೆ, ಹೆಣ್ಣು-ಗಂಡನ್ನು ಪರಸ್ಪರ ಜೆಡಿಗಳ ರೂಪದಲ್ಲಿ ಸೃಷ್ಟಿಸಲಾಗಿದೆ......ಗುಲಾಮಳಾಗಿ ಅಲ್ಲ ಎಂದು ಪವಿತ್ರ ಕುರ್‌ಆನಿನಲ್ಲಿಯೇ ಸೃಷ್ಟಿಕರ್ತನು ಸ್ಪಷ್ಟವಾಗಿ ಆದೇಶ ನೀಡಿರುವಾಗ ಇಸ್ಲಾಂನಲ್ಲಿ ಮಹಿಳೆಯರು ಚಪ್ಪಲಿ ಇದ್ದಂತೆ ಎಂದು ಹೇಳುವ ಮೂಲಕ ತಮ್ಮ ಅಜ್ಞಾನವನ್ನು ಜಗಜ್ಜಾಹೀರುಗೊಳಿಸಿದ್ದಾರೆ. ತಮ್ಮದೇ ಆಶ್ರಮದಲ್ಲಿ ಮಹಿಳೆಯೋರ್ವಳ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಕುರಿತು ಜೈಲುಪಾಲಾಗಿ ಬಂದ ದೇವ ಮಾನವರು ಯಾವ ರೀತಿಯ ಶೋಷಣೆ ಇಸ್ಲಾಮಿನಲ್ಲಿ ನಡೆಸಲಾಗುತ್ತಿದೆ ಎಂಬುವುದನ್ನು ಪ್ರತಿಪಾದಿಸಲು ಹೊರಟಿದ್ದಾರೋ ತಿಳಿಯುತ್ತಿಲ್ಲ. ನ್ಯಾಯಾಂಗ ಹಸ್ತಕ್ಷೇಪದಿಂದ ಮುಸ್ಲಿಂ ಮಹಿಳೆಯರಿಗೆ ನೀಡಿದ ಧಾರ್ಮಿಕ ಸ್ವಾತಂತ್ರ್ಯವನ್ನು ಕಸಿಯಲು ಹೊರಟಿರುವ ಇಂತಹ ಹೇಳಿಕೆಗಳಿಗೆ ಹೊರತಾಗಿ ಸಂಸದ ಸಾಕ್ಷಿ ಮಹಾರಾಜ್‌ರವರು ಒಮ್ಮೆ ಸಂಪೂರ್ಣ ಇಸ್ಲಾಮಿನ ಕುರಿತಾದ ಅಧ್ಯಯನ ಕೈಗೊಂಡು ಹೇಳಿಕೆಗಳನ್ನು ನೀಡಿದರೆ ಉತ್ತಮ ಎಂದೆನಿಸುತ್ತಿದ್ದು, ಇಂತಹ ಅಸಂಬದ್ಧ ಹೇಳಿಕೆಗಳನ್ನು ನೀಡಿ ಪ್ರಚಾರ ಗಿಟ್ಟಿಸಿಕೊಳ್ಳುವ ಬದಲು ಸರಿಯಾದ ಅಧ್ಯಯನದ ಬಳಿಕ ಉತ್ತಮ ಹೇಳಿಕೆಯನ್ನು ನೀಡಿದರೆ ನಿಮ್ಮನ್ನು ತೆಗಳುವವರಿಗಿಂತ ಹೊಗಳುವವರು ಹೆಚ್ಚಿರುತ್ತಾರೆ ಎಂಬುದನ್ನು ಅರಿತುಕೊಳ್ಳುವ ಅವಶ್ಯಕತೆ ಇದೆ,

share
ಶಬೀನಾ ಬಾನು ವೈ.ಕೆ., ಹೊಸಂಗಡಿ
ಶಬೀನಾ ಬಾನು ವೈ.ಕೆ., ಹೊಸಂಗಡಿ
Next Story
X