ಕರ್ನಾಟಕದ ಮಾಜಿ ಸಚಿವ ಗುರುನಾಥ್ ಆತ್ಯಹತ್ಯೆ
ಬೆಂಗಳೂರು, ಎ.21: ಕರ್ನಾಟಕದ ಮಾಜಿ ಸಚಿವ ಸಿ. ಗುರುನಾಥ್(70) ಬನ್ನೇರುಘಟ್ಟ ರಸ್ತೆಯ ಸಾಗರ್ ಆಸ್ಪತ್ರೆಯ 2ನೆ ಮಹಡಿಯ ಕಿಟಕಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಧುಮೇಹದಿಂದ ಬಳಲುತ್ತಿದ್ದ ಗುರುನಾಥ್ ಎ.18 ರಂದು ಆಸ್ಪತ್ರೆಗೆ ದಾಖಲಾಗಿದ್ದು, 19 ರಂದು ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಗುರುವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಬೇಕಾಗಿತ್ತು. ಆದರೆ, ವೈದ್ಯರ ಬಳಿ ಹೊಟ್ಟೆನೋವು ಎಂದು ತಿಳಿಸಿದ್ದ ಗುರುನಾಥ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ತಿಲಕ್‌ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರೆ.
Next Story





