ರೈಲು ಪ್ರಯಾಣಿಕರ ದರೋಡೆ
ಲಕ್ನೋ,ಎ.21: ಗುರುವಾರ ಬೆಳಗಿನ ಜಾವ ಸುಲ್ತಾನಪುರ ಎಕ್ಸಪ್ರೆಸ್ ರೈಲಿನಲ್ಲಿ ಅಟ್ಟಹಾಸ ಮೆರೆದ ದರೋಡೆಕೋರ ಗುಂಪೊಂದು 100ಕ್ಕೂ ಅಧಿಕ ಪ್ರಯಾಣಿಕರ ಬಳಿಯಿದ್ದ ನಗದು ಹಣ ಮತ್ತು ಇತರ ಸೊತ್ತುಗಳನ್ನು ದೋಚಿಕೊಂಡು ಪರಾರಿಯಾಗಿದೆ.
ಸುಲ್ತಾನಪುರದಿಂದ ಅಹ್ಮದಾಬಾದ್‌ಗೆ ಚಲಿಸುತ್ತಿದ್ದ ರೈಲಿನ ಜನರಲ್ ಬೋಗಿಗಳಿಗೆ ನುಗ್ಗಿದ ಡಝನ್ನಿಗೂ ಅಧಿಕ ಶಸ್ತ್ರಸಜ್ಜಿತ ದರೋಡೆಕೋರರು ಪಿಸ್ತೂಲುಗಳನ್ನು ತೋರಿಸಿ ಪ್ರಯಾಣಿಕರನ್ನು ದೋಚಿರುವುದಾಗಿ ಅಧಿಕಾರಿಯೋರ್ವರು ತಿಳಿಸಿದರು.
Next Story





