ಮುಖ್ಯಮಂತ್ರಿಗೆ ಕರಿಪತಾಕೆ ಪ್ರದರ್ಶಿಸಲು ಯತ್ನಿಸಿದ 20 ಮಂದಿ ಪೊಲೀಸ್ ವಶಕ್ಕೆ

ಸುರತ್ಕಲ್, ಎ.21: ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮನದ ವೇಳೆ ಕಪ್ಪುಬಾವುಟ ಪ್ರದರ್ಶಿಸಿ ಪ್ರತಿಭಟನೆಗೆ ಯತ್ನಿಸಿದ ನೇತ್ರಾವತಿ ರಕ್ಷಣಾ ಸಮಿತಿಗೆ ಸೇರಿದ 20 ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡ ಘಟನೆ ಸುರತ್ಕಲ್‌ನಲ್ಲಿ ಇಂದು ಸಂಜೆ ನಡೆದಿದೆ.
ಇಲ್ಲಿನ ಜೀವನ್ ತಾರಾ ಸಮುಚ್ಚಯದಲ್ಲಿ ಬಚ್ಚಿಟ್ಟುಕೊಂಡಿದ್ದ ನೇತ್ರಾವತಿ ಪರ ಹೋರಾಟಗಾರರು ಮುಖ್ಯಮಂತ್ರಿ ತಲುಪುತ್ತಿದ್ದಂತೆ ಪ್ರತಿಭಟನೆಗೆ ಮುಂದಾದರು. ಆದರೆ ಅಷ್ಟರಲ್ಲಿ ಮಧ್ಯಪ್ರವೇಶಿಸಿದ ಪೊಲೀಸರು ಯೋಗೀಶ್ ಶೆಟ್ಟಿ ಜೆಪ್ಪು ಸಹಿತ ಸುಮಾರು 20 ಮಂದಿಯನ್ನು ವಶಕ್ಕೆ ತೆಗುಕೊಂಡರು .
Next Story





