ಬಂಟ್ವಾಳಕ್ಕೆ ಮೊದಲಬಾರಿಗೆ ಆಗಮಿಸಿದ ಮುಖ್ಯಮಂತ್ರಿ ಸವಿದ ಖ್ಯಾದ್ಯಗಳು

ಬಂಟ್ವಾಳ: ವಿಮಾನ ನಿಲ್ದಾಣದಿಂದ ರಸ್ತೆಯೊಂದನ್ನು ಲೋಕಾರ್ಪಣೆಗೈದು ನೇರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈರವರ ಮನೆಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಜೈನ್ಸ್ ಹಾಗೂ ಕರಾವಳಿ ಸಂಪ್ರದಾಯದಲ್ಲಿ ತಯಾರಿಸಿದ ವಿವಿಧ ಖಾದ್ಯಗಳನ್ನು ಸವಿದರು.
ನೀರು ದೋಸೆ, ಹುನಸೆ ಉಳಿ ಉಪ್ಪಿನ ಕಾಯಿ, ಗೇರು ಬೀಜದ ಉಪ್ಪುಕರಿ, ಉಪ್ಪಿಟ್ಟು ಅವಲಕ್ಕಿ, ಪತ್ರೋಡೆ, ಮಸಾಲೆ ಪುಂಡಿ, ಪಕಲ ಬಾತ್, ಸ್ವೀಟ್ಸ್, ಕಟ್ ಮಂಡಿಗೆ, ತೀರ್ಥಹಳ್ಳಿಯ ಮಲ್ಲಿಗೆ ಇಡ್ಲಿ, ಸಾಂಬರ್, ಚಟ್ನಿ ಹಾಗೂ ನಾಟಿ ಕೋಳಿ, ಮಾಂಜಿ, ಅಂಜಲ್, ಸಿಗಡಿ ಖಾದ್ಯಗಳನ್ನು ಸವಿದರು. ಜಿಪಂ ಸದಸ್ಯರುಗಳಾದ ಪದ್ಮಶೇಖರ್ ಜೈನ್, ಚಂದ್ರಪ್ರಕಾಶ್ ಶೆಟ್ಟಿ ಅವರ ನೇತೃತ್ವದಲ್ಲಿ ಈ ಖಾದ್ಯಗಳನ್ನು ವ್ಯವಸ್ಥೆಗೊಳಿಸಲಾಯಿತು.
ಸ್ವಾಗತ: ಸಿದ್ದರಾಮಯ್ಯರವರನ್ನು ಬಿ.ಸಿ.ರೋಡಿನ ಪೊಳಲಿ ದ್ವಾರದ ಬಳಿ ಬಂಟ್ವಾಳ ಪುರಸಭೆ ಹಾಗೂ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬರಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ಸದಸ್ಯರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಅಬ್ಬಾಸ್ ಅಲಿ, ಮಾಯಿಲಪ್ಪ ಸಾಲ್ಯಾನ್ ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು.
ಸಜಿಪಮೂಡದಲ್ಲಿ ಕಾರ್ಯಕ್ರಮ ಮುಗಿಸಿ ವಾಪಸ್ ಮಂಗಳೂರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿಯವರನ್ನು ಫರಂಗಿಪೇಟೆಯಲ್ಲಿ ಮಾಜಿ ಜಿಪಂ ಸದಸ್ಯ ಉಮರ್ ಫಾರೂಕ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹೂಹಾರ ಹಾಕಿ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಚಿವರುಗಳಾದ ರಮಾನಾಥ ರೈ, ಯು.ಟಿ.ಖಾದರ್, ವಿನಯಕುಮಾರ್ ಸೊರಕೆ, ಅಭಯಚಂದ್ರ ಜೈನ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.







