ಉಗ್ರ ಬ್ರಸೆಲ್ಸ್ ವಿಮಾನ ನಿಲ್ದಾಣದಲ್ಲಿ 5 ವರ್ಷ ಕೆಲಸ ಮಾಡಿದ್ದನು

ಬ್ರಸೆಲ್ಸ್, ಎ. 21: ಬ್ರಸೆಲ್ಸ್ ವಿಮಾನ ನಿಲ್ದಾಣದಲ್ಲಿ ಕಳೆದ ತಿಂಗಳು ತಮ್ಮನ್ನು ತಾವು ಸ್ಫೋಟಿಸಿಕೊಂಡ ಭಯೋತ್ಪಾದಕರ ಪೈಕಿ ಓರ್ವ ಅದೇ ವಿಮಾನ ನಿಲ್ದಾಣದಲ್ಲಿ ಐದು ವರ್ಷಗಳ ಕಾಲ 2012ರವರೆಗೆ ಕೆಲಸ ಮಾಡುತ್ತಿದ್ದನು ಎಂದು ಬೆಲ್ಜಿಯಂನ ವಿಟಿಎಂ ಟೆಲಿವಿಶನ್ ಬುಧವಾರ ವರದಿ ಮಾಡಿದೆ.
ನಜೀಮ್ ಲಾಖ್ರೌಲಿ ಹಲವಾರು ವರ್ಷಗಳ ಹಿಂದೆ ಯುರೋಪಿಯನ್ ಪಾರ್ಲಿಮೆಂಟ್‌ನಲ್ಲಿ ಸ್ವಚ್ಛತಾ ಕೆಲಸಗಾರನಾಗಿ ಕೆಲಸ ಮಾಡಿದ್ದನು ಎಂಬ ವಿಷಯ ಈಗಾಗಲೇ ವರದಿಯಾಗಿರುವುದನ್ನು ಸ್ಮರಿಸಬಹುದಾಗಿದೆ.
ಕಳೆದ ವರ್ಷ ಪ್ಯಾರಿಸ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಬಳಸಲಾದ ಬಾಂಬ್‌ಗಳನ್ನು ಆತನೇ ತಯಾರಿಸಿದ್ದನು ಎಂಬುದಾಗಿ ಆರೋಪಿಸಲಾಗಿದೆ.
Next Story





