ಕೆಸಿಎಫ್ ದಮ್ಮಾಮ್ ವಲಯ ಕ್ವಿಝ್ ಕಾರ್ಯಕ್ರಮ

ದಮ್ಮಾಮ್ : ಅನಿವಾಸಿ ಕನ್ನಡಿಗರ ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ದಿ ಗೋಸ್ಕರ ಗಲ್ಫ್ ನಾಡಿನಲ್ಲಿ ಕಾರ್ಯಾಚರಿಸುತ್ತಿರುವ ಕೆಸಿಎಫ್, ಅನಿವಾಸಿಗರನ್ನು ಅದರಲ್ಲಿ ಪ್ರತ್ಯೇಕವಾಗಿ ವಿದ್ಯಾರ್ಥಿ ಯುವ ಜನರನ್ನು ಶೈಕ್ಷಣಿಕವಾಗಿ ಉತ್ತುಂಗಕ್ಕೆ ತರುವ ಉದ್ದೇಶದಿಂದ ಹಲವಾರು ಯೋಜನೆಗಳನ್ನು ಹಮ್ಮಿ ಕೊಂಡಿದ್ದು , ಅದರ ಅಂಗವಾಗಿ ಕೆಸಿಎಫ್ ದಮ್ಮಾಮ್ ವಲಯ ವತಿಯಿಂದ ಬ್ರಹತ್ ರಾಷ್ಟ್ರೀಯ ಕ್ವಿಜ್ ಸ್ಪರ್ದೆ ಯನ್ನು ಇತ್ತೀಚೆಗೆ ದಮ್ಮಾಮ್ ಪ್ರಾಂತ್ಯದ ಉಮ್ಮ್ ಅಲ್ ಸಾಹಿಕ್ ಎಂಬ ಪ್ರದೇಶದಲ್ಲಿ ನಡೆಸಲಾಯಿತು.ಆದೂರ್ ತಂಙಳ್ ರ ದುಆದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವಲಯ ಪ್ರದಾನ ಕಾರ್ಯದರ್ಶಿ ಫೈಝಲ್ ಕೃಷ್ಣಾಪುರ ಸ್ವಾಗತಿಸಿದರು. ಹಾಫಿಲ್ ಅಬ್ದುಲ್ ಮಜೀದ್ ಸಖಾಫಿ ಅಲ್ ಕಾಮಿಲಿ ಕಿರಾಅತ್ ಪಠಿಸಿದರು.
ಕೆಸಿಎಫ್ ಅಂತರಾಷ್ಟ್ರೀಯ ಸಾಂತ್ವನ ಲಾಂಛನ ಬಿಡುಗಡೆ
ಏನಿದು ಅಂತರಾಷ್ಟ್ರೀಯ ಸಾಂತ್ವನ ?
ಕೆಸಿಎಫ್ ಸದಸ್ಯತನ ಪಡೆದ ವ್ಯಕ್ತಿ ಯಾವುದೇ ಒಂದು ಸಂಧರ್ಬದಲ್ಲಿ ಜೀವನ ನಿರ್ವಹಿಸಲು ಸಾಧ್ಯವಾಗದ ರೀತಿಗೆ ತಲುಪಿದಾಗ (ಅಪಘಾತ ,ರೋಗ ,ಹಾಗೂ ಇನ್ನಿತರ ಕಾರಣಗಳಿಂದ ) ಅವನ ಜೀವನ ನಿರ್ವಹಣೆಗೆ ಇಪ್ಪತ್ತು ಲಕ್ಷ ದ ಸಾಂತ್ವನ ನಿಧಿ ನೀಡುವ ಬ್ರಹತ್ ಪದ್ದತಿ. ಈ ಪದ್ದತಿಯ ಲಾಂಛನವನ್ನು ಕೆಸಿಎಫ್ ಸೌದಿ ರಾಷ್ಟ್ರೀಯ ಅದ್ಯಕ್ಷ ಡಿಪಿ ಯೂಸುಫ್ ಸಖಾಫಿ ಬೈತಾರ್ ಮತ್ತು ಕೆಸಿಎಫ್ ÌNC ಸದಸ್ಯರಾದ ಎನ್ ಎಸ್ ಅಬ್ದುಲ್ಲಾ ಹಾಜಿ ,ಅಬೂಬಕರ್ ಪಡುಬಿದ್ರೆ ಮತ್ತು ಕೆಸಿಎಫ್ ರಾಷ್ಟ್ರೀಯ ಸೌದಿ ಪ್ರಧಾನ ಕಾರ್ಯದರ್ಶಿ ಉಮರ್ ಫಾರೂಕ್ ಕಾಟಿಪಲ್ಲ ರ ಸಮ್ಮುಖದಲ್ಲಿ ಕೆಸಿಎಫ್ ಸೌದಿ ಸಾಂತ್ವನ ವಿಭಾಗದ ಚೈರ್ಮಾನ್ ಸಲೀಂ ಕನ್ಯಾಡಿ ಗೆ ನೀಡುವ ಮೂಲಕ ಬಿಡುಗಡೆ ಮಾಡಿದರು.
ಇಶಾರ ಅಭಿಯಾನ ಪ್ರಯುಕ್ತ ಅತೀ ಹೆಚ್ಚು ಗೋಲ್ಡನ್ ಮತ್ತು ಸಿಲ್ವರ್ ಸದಸ್ಯರನ್ನು ಮಾಡಿದ ರಿಯಾದ್ ವಲಯಯವನ್ನು ಈ ಸಂಧರ್ಭ ಸಮ್ಮಾನಿಸಲಾಯಿತು .ರಾಷ್ಟ್ರೀಯ ಕೆಸಿಎಫ್ ಪಬ್ಲಿಕ್ ವಿಭಾಗ ದ ಚೈರ್ಮಾನ್ ಆಸೀಫ್ ಗೂಡಿನಬಳಿ ರಿಯಾದ್ ವಲಯಕ್ಕೆ ಪ್ರಶಸ್ತಿ ನೀಡಿ ಸಮ್ಮಾನಿಸಿದರು. ಬಷೀರ್ ಉಸ್ತಾದ್ ಕಾಪು ನೇತ್ರತ್ವದಲ್ಲಿ ಕೆಸಿಎಫ್ ತಂಡದಿಂದ ದಫ್ ಕಾರ್ಯಕ್ರಮ ನಡೆಯಿತು .
ಮಗ್ರಿಬ್ ನಮಾಜಿನ ಬಳಿಕ ವಯಸ್ಕರ ಕ್ವಿಝ್ ಸ್ಪರ್ದೆ ನಡೆಯಿತು. ಕ್ವಿಝ್ ಕಾರ್ಯಕ್ರಮವನ್ನು ಕ್ವಿಝ್ ಮಾಸ್ಟರ್ ಕಮರುದ್ದೀನ್ ಗೂಡಿನಬಳಿ (ಚೈರ್ಮಾನ್ ಕೆಸಿಎಫ್ ಶಿಕ್ಷಣ ವಿಭಾಗ ದಮ್ಮಮ್ ವಲಯ ) ನಡೆಸಿಕೊಟ್ಟರು. ಪ್ರಥಮ ಸ್ಥಾನವನ್ನು ರೆಡ್ ಸೀ ಮತ್ತು ದ್ವಿತೀಯ ಸ್ಥಾನವನ್ನು ಸ್ಪೆಕ್ಟ್ರಮ್ ಇಂಡಸ್ ಗಳಿಸಿದವು.
ಭಾಗವಹಿಸಿದ ತಂಡಗಳು
ಟೆಕ್ಸ್ಕಾನ್ ,ಅಮಕಾನ್ ,ಸುಹಾನ ಟ್ರಾವೆಲ್ಸ್ ,ಅರೇಬಿಯನ್ ಕ್ಲೌಡ್ಸ್ ,ಸ್ಪೆಕ್ಟ್ರಮ್ ಇಂಡಸ್ ,ರೆಡ್ ಸೀ, ವಿದ್ಯಾರ್ಥಿಗಳ ಕ್ವಿಜ್ ಸ್ಪರ್ದೆ ಯಲ್ಕಿ ಆರು ತಂಡಗಳು ಭಾಗವಹಿಸಿದ್ದವು ರೈಸ್ಕೋ ,ರಿಯಲ್ ಟೆಕ್ , ಎಕ್ಷಪರ್ಟೈಸ್ ,ಅಲ್ ಮುಝೈನ್ ,ಅಲ್ ಫ಼ಲಾಹ್ ಪ್ರಥಮ ಸ್ಥಾನವನ್ನು ಅಲ್ ಫ಼ಲಾಹ್ ಮತ್ತು ದ್ವಿತೀಯ ಸ್ಥಾನವನ್ನು ಅಲ್ ಮುಝೈನ್ ಗಳಿಸಿದವು. ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ತಂಡಗಳಿಗೆ ಬಹುಮಾನ ವಿತರಣೆ ಮಾಡಲಾಯಿತು . ಕೊನೆಯಲ್ಲಿ ಕೆಸಿಎಫ್ ದಮ್ಮಾಮ್ ಝೋನ್ ಸಂಘಟನಾ ವಿಭಾಗ ಚೈರ್ಮಾನ್ ಉಮರ್ ಫಾರೂಕ್ ಕುಪ್ಪೆಟ್ಟಿ ಧನ್ಯವಾದ ಮಾಡಿದರು.







