Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ರಾಷ್ಟ್ರೀಯ ಭದ್ರತೆ: ಒಂದೇ ಪಕ್ಷದ...

ರಾಷ್ಟ್ರೀಯ ಭದ್ರತೆ: ಒಂದೇ ಪಕ್ಷದ ಧೋರಣೆಗೆ ಸೀಮಿತವೇ

- ಗಿರೀಶ್ ಪಟೇಲ್- ಗಿರೀಶ್ ಪಟೇಲ್21 April 2016 11:27 PM IST
share
ರಾಷ್ಟ್ರೀಯ ಭದ್ರತೆ: ಒಂದೇ ಪಕ್ಷದ ಧೋರಣೆಗೆ ಸೀಮಿತವೇ

ರಾಷ್ಟ್ರೀಯ ಭದ್ರತೆಯ ಕುರಿತಂತೆ ಎನ್‌ಎಸ್‌ಎ ಅಧಿಕಾರಿ ಅಜಿತ್ ಧೋವಲ್ ಇತ್ತೀಚೆಗೆ ಸುಪ್ರೀಂಕೋರ್ಟ್ ನ್ಯಾಯಾಧೀಶರಿಗೆ ನೀಡಿರುವ ಸಲಹೆ ತೀವ್ರ ಚರ್ಚೆ, ವಿವಾದಕ್ಕೆ ಕಾರಣವಾಗಿದೆ. ನ್ಯಾಯವ್ಯವಸ್ಥೆಯ ಮೇಲಿನ ಹೇರಿಕೆ ಎಂದೂ ಆರೋಪಿಸಲಾಗಿದೆ.

  
 ಸುಪ್ರೀಂಕೋರ್ಟ್ ನ್ಯಾಯಾಧೀಶರಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ)ಅಜಿತ್ ಧೋವಲ್ ಇತ್ತೀಚೆಗೆ ನೀಡಿದ ವಿವರಣೆಯು ಅತ್ಯಂತ ಆಘಾತಕಾರಿಯಾಗಿತ್ತು ಹಾಗೂ ವಿಚಲಿತಗೊಳಿಸುವಂತಿತ್ತು. ರಾಷ್ಟ್ರೀಯ ಭದ್ರತೆಯು ಪಕ್ಷಾತೀತ ವಿಷಯವಾಗಿರಬೇಕು. ಅದನ್ನು ರಾಜಕೀಯ ದೃಷ್ಟಿಕೋನದಿಂದ ನೋಡಬಾರದೆಂಬ ಧೋವಲ್ ಹೇಳಿಕೆಯು ಸಂಪೂರ್ಣ ತಪ್ಪಾದುದಾಗಿದೆ. ದೇಶದ ಆಂತರಿಕ ಹಾಗೂ ಬಾಹ್ಯ ಭದ್ರತೆಗಳೆರಡೂ, ಅಧಿಕಾರದಲ್ಲಿರುವ ರಾಜಕೀಯ ಪಕ್ಷದ ವಿದೇಶಿ ಹಾಗೂ ದೇಶೀಯ ನೀತಿಗಳನ್ನು ಅವಲಂಬಿಸಿರುತ್ತದೆ. ವಿವಿಧ ರಾಜಕೀಯ ಶಕ್ತಿಗಳು ಹಾಗೂ ನಾಗರಿಕ ಸಂಘಟನೆಗಳು ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ತೀವ್ರವಾದ ಭಿನ್ನಾಭಿಪ್ರಾಯಗಳನ್ನು ಹೊಂದಿವೆ. ರಾಷ್ಟ್ರೀಯ ಭದ್ರತೆ ಹಾಗೂ ಮಾನವಹಕ್ಕುಗಳ ನಡುವಣ ತಿಕ್ಕಾಟವು ಪ್ರಸಕ್ತ ಸನ್ನಿವೇಶದ ಪ್ರಮುಖ ರಾಜಕೀಯ ಹಾಗೂ ಸಾಮಾಜಿಕ-ಆರ್ಥಿಕ ಸಮಸ್ಯೆ ಯಾಗಿದೆ. ಕಟ್ಟಾ ರಾಷ್ಟ್ರೀಯವಾದಿಗಳು ಹಾಗೂ ಮಾನವಹಕ್ಕುಗಳ ಕಾರ್ಯಕರ್ತರು ರಾಷ್ಟ್ರೀಯ ಭದ್ರತೆ ಹಾಗೂ ಮಾನವಹಕ್ಕುಗಳ ಬೇಡಿಕೆಗಳ ನಡುವೆ ರೇಖೆಯೊಂದನ್ನು ಎಳೆಯುವ ವಿಷಯದಲ್ಲಿ ಪ್ರಬಲವಾದ ಭಿನ್ನಾಭಿಪ್ರಾಯವನ್ನು ಹೊಂದಿದ್ದಾರೆ. ಹೀಗಿರುವಾಗ ರಾಷ್ಟ್ರೀಯ ಭದ್ರತೆಯೆಂಬುದು ರಾಜಕೀಯೇತರ ಅಥವಾ ಪಕ್ಷೇತರ ವಿಷಯವಾಗಿರಲು ಹೇಗೆ ತಾನೇ ಸಾಧ್ಯ?.

 ಕೆಲವು ನ್ಯಾಯಾಧೀಶರು ರಾಷ್ಟ್ರೀಯ ಭದ್ರತೆಯ ವಿಷಯದ ಬಗ್ಗೆ ಅತ್ಯಾಸಕ್ತಿಯನ್ನು ಹೊಂದಿರುವುದನ್ನು ಇತ್ತೀಚಿನ ಕೆಲವು ತೀರ್ಪುಗಳು ತೋರಿಸಿಕೊಟ್ಟಿವೆ. ಈ ಕಾನೂನುಗಳು ಮಾನವಹಕ್ಕುಗಳ ಸಂಪೂರ್ಣ ಉಲ್ಲಂಘನೆಯೆಂದು ಅವರಿಗೆ ಚೆನ್ನಾಗಿ ತಿಳಿದಿದೆಯಾದರೂ ಅದನ್ನು ಒಪ್ಪಿಕೊಳ್ಳಲು ಅವರು ಸಿದ್ಧರಿಲ್ಲ. ಅಫ್ಝಲ್ ಗುರುವಿಗೆ ವಿವಾದಾತ್ಮಕ ಗಲ್ಲು ಶಿಕ್ಷೆ ಪ್ರಕರಣವು ಇದಕ್ಕೊಂದು ಅತ್ಯುತ್ಕೃಷ್ಟ ಉದಾಹರಣೆಯಾಗಿದೆ.
 
  ರಾಷ್ಟ್ರೀಯ ಭದ್ರತೆಯ ಬಗ್ಗೆ ಸುಪ್ರೀಂಕೋರ್ಟ್ ನ್ಯಾಯಾಧೀಶರಿಗೆ ರಾಷ್ಟ್ರೀಯ ಭದ್ರತಾ ಅಧಿಕಾರಿಯಿಂದ ಸರ್ವಪಕ್ಷೀಯ ಹಾಗೂ ಪಕ್ಷಾತೀತ ವಿವರಣೆಯನ್ನು ಕೇಳುವ ಅಗತ್ಯವಾದರೂ ಏನಿದೆ?. ಒಂದು ವೇಳೆ ಅದು ಸರಿಯೆಂದಾದರೆ, ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ತಾರತಮ್ಯ ಕ್ಕೊಳಗಾದ ಮುಖವಿಲ್ಲದ ಹಾಗೂ ಧ್ವನಿಯಿಲ್ಲದ ಸಾರ್ವಜನಿಕರ ಸಂವಿಧಾನದ ಹಕ್ಕುಗಳನ್ನು ಸಾಮಾಜಿಕ ಕಾರ್ಯಕರ್ತರು ಹಾಗೂ ಮಾನವ ಹಕ್ಕುಗಳ ಸಮರ್ಥಕರ ವಾದಗಳನ್ನು ಅವರು ಯಾಕೆ ಆಲಿಸುವುದಿಲ್ಲ?. ಅದೇ ರೀತಿ ನಿರ್ವಸಿತ ಆದಿವಾಸಿಗಳ, ಶೋಷಣೆಗೊಳಗಾದ ದಲಿತರ ಹಾಗೂ ಭಯಭೀತರಾದ ಅಲ್ಪಸಂಖ್ಯಾತರ, ದೌರ್ಜನ್ಯಕ್ಕೊಳಗಾದ ಮಹಿಳೆಯರ ಮತ್ತು ಕಿರುಕುಳಕ್ಕೊಳಗಾದ ಮಕ್ಕಳ ಅಹವಾಲುಗಳಿಗೆ ಯಾಕೆ ಕಿವಿಗೊಡುವುದಿಲ್ಲ?. ನ್ಯಾಯಾಧೀಶರು ವಿಶೇಷವಾಗಿ ಜಗತ್ತಿನ ಈ ನೊಂದಿತರ ನೋವು ಹಾಗೂ ಬವಣೆಗಳನ್ನು ಆಲಿಸುವ ಹಾಗೂ ಅರಿಯುವ ಅಗತ್ಯವಿದೆ.

 ರಾಷ್ಟ್ರೀಯ ಭದ್ರತೆಯೆಂಬುದು ಕೇವಲ ಆಡಳಿತಾರೂಢ ಗಣ್ಯರ ಭದ್ರತೆ ಮಾತ್ರವೇ ಅಲ್ಲ, ಈ ದೇಶದ ಜನತೆಯ ಸುರಕ್ಷತೆ ಕೂಡಾ ಆಗಿದೆ. ಭದ್ರತೆಯ ವಿಷಯದಲ್ಲಿ ಸರಕಾರವನ್ನು ಯಾವಾಗಲೂ ನಂಬಲು ಸಾಧ್ಯವಿಲ್ಲ. ಹಲವಾರು ಸಂದರ್ಭಗಳಲ್ಲಿ ಪಕ್ಷ ಹಾಗೂ ರಾಜಕೀಯ ಕಾರಣಗಳಿಂದಾಗಿ ಗಡಿ ಹಾಗೂ ಆಂತರಿಕ ಭದ್ರತೆಯ ವಿವಾದಗಳು ಹುಟ್ಟಿಕೊಳ್ಳುತ್ತವೆ. ತಥಾಕಥಿತ ಭಯೋತ್ಪಾದನೆಯ ವಿರುದ್ಧ ಅಮೆರಿಕ ಹಾಗೂ ಇಸ್ರೇಲ್‌ನ ಹೋರಾಟದಲ್ಲಿ ಕೈಜೋಡಿಸುವ ಭಾರತದ ನಿರ್ಧಾರವನ್ನೇ ಇದಕ್ಕೆ ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಜಮ್ಮುಕಾಶ್ಮೀರ ಹಾಗೂ ಈಶಾನ್ಯಭಾರತದ ಬಿಕ್ಕಟ್ಟುಗಳು, ಸ್ಥಳೀಯ ಜನತೆ ದೂರವಾಗಲು ಕಾರಣವಾದ ಹಿಂದಿನ ಹಾಗೂ ಹಾಲಿ ಸರಕಾರಗಳ ಜನವಿರೋಧಿ ನೀತಿಗಳ ಪರಿಣಾಮವಾಗಿದೆ. ಲಕ್ಷಾಂತರ ಆದಿವಾಸಿಗಳ ಪ್ರಜಾತಾಂತ್ರಿಕ ಹಕ್ಕುಗಳನ್ನು ಕಡೆಗಣಿಸಿದ್ದರಿಂದಲೇ ನಕ್ಸಲ್ ಸಮಸ್ಯೆ ಹೆಡೆಯೆತ್ತಿದೆ.

   ಅಮೆರಿಕದ ಮೇಲೆ ನಡೆದ 9/11ರ ಭಯೋತ್ಪಾದಕ ದಾಳಿ ಘಟನೆಯ ಬಳಿಕ ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ಪ್ರಜಾತಾಂತ್ರಿಕ ಹಕ್ಕುಗಳನ್ನು ಹಾಗೂ ಪೌರ ಸ್ವಾತಂತ್ರಗಳನ್ನು ಹತ್ತಿಕ್ಕುವುದು ಸಾಮಾನ್ಯವಾಗಿಬಿಟ್ಟಿದೆ. ಮಾನವಹಕ್ಕುಗಳು ನಿಜಕ್ಕೂ ರಾಷ್ಟ್ರೀಯ ಭದ್ರತೆಯ ಮುಂದೆ ಅತಾರ್ಕಿಕವಾಗಿದೆಯೇ?. ಜನತೆಯ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವ ಕಡೆಗಣಿಸುವ ಮೂಲಕ ನಮ್ಮ ದೇಶವನ್ನು ನಿಜಕ್ಕೂ ಭದ್ರವಾಗಿಡಲು ಸಾಧ್ಯವೇ?. ಸತ್ಯವೇನೆಂದರೆ, ಪ್ರಜಾತಾಂತ್ರಿಕ ಹಕ್ಕುಗಳನ್ನು ಅನುಭವಿಸುವ ಮುಕ್ತ ಸ್ವಾತಂತ್ರದ ಹಾಗೂ ಸಂತೃಪ್ತ ಜನತೆಯೇ ದೇಶದ ಭದ್ರತೆಗೆ ನೀಡಬಹುದಾದ ಅತ್ಯಂತ ಖಚಿತವಾದ ಖಾತರಿಯಾಗಿದೆ.

   ಇನ್ನೊಂದೆಡೆ, ನಾಗರಿಕ ಹಕ್ಕುಗಳ ದಮನ, ಅಲ್ಪಸಂಖ್ಯಾತರನ್ನು ರಾಜಕೀಯವಾಗಿ ಮೂಲೆಗುಂಪು ಗೊಳಿಸುವುದು, ಆರ್ಥಿಕ ಅಸಮಾನತೆ ಹಾಗೂ ಸಾಮಾಜಿಕ ಅಸೌಹಾರ್ದತೆಯು ದೇಶಕ್ಕೆ ಮಾತ್ರವಲ್ಲ ಇಡೀ ಜಾಗತಿಕ ಭದ್ರತೆಗೆ ಎದುರಾಗುವ ಗಂಭೀರ ಬೆದರಿಕೆಗಳಾಗಿವೆ. ಮಾನವಹಕ್ಕುಗಳ ಕುರಿತ ಸಾರ್ವತ್ರಿಕ ಘೋಷಣೆ (1948) ಹಾಗೂ ನಮ್ಮ ಸಂವಿಧಾನ ಕೂಡಾ ಈ ಅಂಶವನ್ನೇ ಉಲ್ಲೇಖಿಸಿದೆ. ಹೀಗಾಗಿ ನ್ಯಾಯಾಧೀಶರು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿ ಕೇವಲ ಒಂದು ಪಕ್ಷದ ಅಭಿಪ್ರಾಯಗಳನ್ನು ಮಾತ್ರವೇ ಅರಿಯುವುದು ನ್ಯಾಯಸಮ್ಮತವೆನಿಸದು. ಅವರು ನಾಗರಿಕ ಹಕ್ಕುಗಳ ಹೋರಾಟಗಾರರ ವಿವರಣೆಗಳನ್ನೇ ಕೂಡಾ ಆಲಿಸಬೇಕಾಗಿದೆ.

share
- ಗಿರೀಶ್ ಪಟೇಲ್
- ಗಿರೀಶ್ ಪಟೇಲ್
Next Story
X