ದೇವೇಗೌಡರ ಅಸ್ಪಶ್ಯತೆ
ಮಾನ್ಯರೆ,
ಇತ್ತೀಚೆಗೆ ದೇವಸ್ಥಾನ ಪ್ರವೇಶ ನಿಷೇಧ ಒಂದಕ್ಕೆ ಸಂಬಂಧಿಸಿ ದೇವೇಗೌಡರು ದಲಿತರನ್ನು ತಡೆದ ಕ್ರಮವನ್ನು ಸಮರ್ಥಿಸಿದರು. ಕಾರಣ, ದೇವಸ್ಥಾನದ ಹಿಡಿತ ಒಕ್ಕಲಿಗರಲ್ಲಿರುವುದು. ತನ್ನ ಸಮರ್ಥನೆಗೆ ಅವರು ನೀಡಿದ ನೆಪಗಳೋ ಅತ್ಯಂತ ಕ್ರೂರವಾದದು. ‘‘ಬೇರೆ ದೇವಸ್ಥಾನಗಳಲ್ಲಿ ನಮ್ಮನ್ನೂ ಒಳಗೆ ಬಿಡುವುದಿಲ್ಲ...ಆ ದೇವಸ್ಥಾನಗಳಲ್ಲಿ ಇವರನ್ನು ಒಳಗೆ ಬಿಡುವುದಿಲ್ಲ...ಆದುದರಿಂದ ಇಲ್ಲಿ ದಲಿತರನ್ನು ಒಳಗೆ ಪ್ರವೇಶ ನೀಡದೇ ಇರುವುದು ಸರಿ’’ ಎಂಬರ್ಥದಲ್ಲಿ ಅವರು ಮಾತನಾಡಿದರು. ಚುನಾವಣೆ ಬಂದಾಗ, ದಲಿತರ ಪರವಾಗಿ ಮಾತನಾಡುವ ದೇವೇಗೌಡರು ಅಂತಿಮವಾಗಿ ತಾನು ಈ ನಾಡಿನ ಸಮಸ್ತ ಜನರ ನಾಯಕನಲ್ಲ, ಬರೇ ಒಕ್ಕಲಿಗರ ನಾಯಕ ಎನ್ನುವುದನ್ನು ಸಾಬೀತು ಪಡಿಸಿದ್ದಾರೆ. ಅಷ್ಟೇ ಅಲ್ಲ, ದಲಿತರು, ಕೆಳವರ್ಗದ ಜನರು ಮತ್ತು ಒಕ್ಕಲಿಗರು ಬೇರೆ ಬೇರೆ ಎನ್ನುವುದನ್ನು ಬಹಿರಂಗವಾಗಿ ಘೋಷಿಸಿದ್ದಾರೆ. ಹಿಂದುಳಿದವರ್ಗದ ಜನರಲ್ಲೇ ಇಷ್ಟರ ಮಟ್ಟಿಗೆ ಜಾತೀಯತೆ ಇರುವಾಗ, ನಾವು ಕೇವಲ ಬ್ರಾಹ್ಮಣರನ್ನಷ್ಟೇ ಜಾತೀಯತೆಗೆ ಹೊಣೆ ಮಾಡುವುದು ಎಷ್ಟು ಸರಿ?
Next Story





