ರಾಮ್‌ದೇವ್ ಉತ್ಪಾದನೆಯ ವಿರುದ್ಧ ರಾಜಸ್ಥಾನ ಹೈಕೋರ್ಟ್‌ಗೆ ದೂರು

ಬಿಕಾನೇರ್, ಎ.21: ಬಾಬಾ ರಾಮ್‌ದೇವ್‌ರ ಪತಂಜಲಿ ಆಯುರ್ವೇದ ಸಂಸ್ಥೆಯ ಟೂತ್‌ಪೇಸ್ಟ್‌ನಜಾಹೀರಾತೊಂದರ ವಿರುದ್ಧದ ದೂರೊಂದನ್ನು ಶ್ರೀಗಂಗಾನಗರ ಜಿಲ್ಲೆಯ ಸ್ಥಳೀಯ ನ್ಯಾಯಾಲಯವೊಂದು ಬುಧವಾರ ವಿಚಾರಣೆಗೆ ಅಂಗೀಕರಿಸಿದ್ದು, ವಿಚಾರಣೆಯನ್ನು ಮೇ.19ಕ್ಕೆ ಮುಂದೂಡಿದೆ.
ಅಶೋಕ್ ಗುಪ್ತಾ ಎಂಬ ವೈದ್ಯ ಎ.18ರಂದು ಈ ದೂರು ಸಲ್ಲಿಸಿದ್ದು, ರಾಯ್ಸಿಂಗ್ ನಗರದ ಹೆಚ್ಚುವರಿ ಮುಖ್ಯ ನ್ಯಾಯಾಂಗ ದಂಡಾಧಿಕಾರಿ ಮಹೇಂದ್ರ ಸಿಂಗ್ ಬೇನಿವಾಲ್ ಅದನ್ನು ಬುಧವಾರ ಅಂಗೀಕರಿಸಿದ್ದಾರೆ.
ತನ್ನ ದೂರಿನಲ್ಲಿ ಗುಪ್ತಾ, ಟೂತ್‌ಪೇಸ್ಟ್‌ನ ಗುಣಮಟ್ಟದ ಬಗ್ಗೆ ಸಂಶಯವೆತ್ತಿದ್ದಾರೆ. ವೈದ್ಯರನ್ನೇ ಪ್ರಶ್ನಿಸುವ ಜಾಹೀರಾತಿನಿಂದಾಗಿ ದೂರುದಾರರಿಗೆ ನೋವಾಗಿದೆಯೆಂದು ಅವರ ವಕೀಲ ಜಿತೇಂದ್ರ ಸೋನಿ ತಿಳಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯ ಸೆ.419 (ಒಬ್ಬನಂತೆ ವೇಷ ಹಾಕಿ ವಂಚಿಸುವುದು) 420 (ವಂಚನೆ), 500 (ಮಾನ ನಷ್ಟ) ಹಾಗೂ 501 (ಮಾನ ಹಾನಿಕರ ವಿಷಯ ಮುದ್ರಿಸುವುದು) ಅನ್ವಯ ರಾಮ್‌ದೇವ್ ಹಾಗೂ ಬಾಲಕೃಷ್ಣರ ವಿರುದ್ಧ ದೂರು ದಾಖಲಿಸಲಾಗಿದೆ.
ನ್ಯಾಯಾಲಯವು ವಿಚಾರಣೆಯನ್ನು ಮೇ.19ಕ್ಕೆ ಮೂಂದೂಡಿದೆ.





