ಬೀಡಿ ಕಾರ್ಮಿಕರಿಂದ ಮುಂದುವರಿದ ಧರಣಿ

ವಿಟ್ಲ, ಎ.21: ಬೀಡಿ ಕಾರ್ಮಿಕರಿಗೆ ಕೆಲಸ ನೀಡಬೇಕು ಎಂದು ಒತ್ತಾಯಿಸಿ ಎಐಟಿಯುಸಿ ಹಾಗೂ ಸಿಐಟಿಯು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ನೇತೃತ್ವದಲ್ಲಿ ಬಿ.ಸಿ.ರೋಡ್‌ನ ಭಾರತ್ ಬೀಡಿ ಡಿಪೋ ಎದುರು ನಡೆಯುತ್ತಿರುವ ಅನಿರ್ದಿ ಷ್ಟಾವಧಿ ಧರಣಿ ಮುಂದುವರಿದಿದೆ.
ಧರಣಿ ನಿರತರನ್ನು ಉದ್ದೇಶಿಸಿ ಮಾತ ನಾಡಿದ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮನೋಹರ ಶೆಟ್ಟಿ, ಬೀಡಿ ಕಾರ್ಮಿಕರು ಅತ್ಯಂತ ಶೋಚನೀಯ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಕಾರ್ಮಿಕರು ಶ್ರಮಪಟ್ಟು ದುಡಿದುದರ ಫಲವಾಗಿ ಮಾಲಕರು ಹೇರಳ ಲಾಭ ಪಡೆದುಕೊಂಡು ಐಶಾರಾಮದಿಂದಿದ್ದಾರೆ. ಕೇಂದ್ರ ಸರಕಾರ ಕೂಡಾ ಕೈಗಾರಿಕೆಗೆ ಮಾರಕವಾದ ಕರಾಳ ಶಾಸನ ಜಾರಿಗೊಳಿಸಿ ಬೀಡಿ ಕಾರ್ಮಿಕರನ್ನು ಬೀದಿ ಪಾಲು ಮಾಡಲು ಹೊರಟಿದೆ ಎಂದರು.
ತುಂಬೆ ವೆಂಟೆಡ್ ಡ್ಯಾಂ ಸಂತ್ರಸ್ತ ಹೋರಾಟ ಸಮಿತಿಯ ಪ್ರಧಾನ ಕಾರ್ಯ ದರ್ಶಿ ಎನ್.ಕೆ ಇದಿನಬ್ಬ, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಅಧ್ಯಕ್ಷ ಶರತ್ ಕುಮಾರ್, ತಾಲೂಕು ಸಂಘದ ಕಾರ್ಯದರ್ಶಿ ಸುರೇಶ್ ಮಯ್ಯ, ವಿದ್ಯುತ್ ಗುತ್ತಿಗೆ ದಾರರ ಬಂಟ್ವಾಳ ತಾಲೂಕು ಅಧ್ಯಕ್ಷ ರಾಮಣ್ಣ ಬಂಗೇರ, ಪ್ರಧಾನ ಕಾರ್ಯದರ್ಶಿ ಏಳಬೆ ಪದ್ಮನಾಭ ಮಯ್ಯ, ಜೆಡಿಎಸ್ ಬಂಟ್ವಾಳ ತಾಲೂಕು ಅಧ್ಯಕ್ಷ ಹಾರೂನ್ ರಶೀದ್, ಸಾಮಾಜಿಕ ನ್ಯಾಯಪರ ಸಮಿತಿ ಮುಖಂಡರಾದ ಪ್ರಭಾಕರ ದೈವಗುಡ್ಡೆ, ರಾಮಚಂದ್ರ ಸುವರ್ಣ ಕಾಯರ್‌ಮಾರ್, ಅಯೂಬ್ ಜಿ.ಕೆ. ಗೂಡಿನಬಳಿ ಮಾತನಾ ಡಿದರು. ಪಾಣೆಮಂಗಳೂರು ಫಿರ್ಕಾ ಬೀಡಿ ಆ್ಯಂಡ್ ಜನರಲ್ ವರ್ಕರ್ಸ್ ಯೂನಿಯನ್ (ಎಐಟಿಯುಸಿ)ನ ಅಧ್ಯಕ್ಷೆ ಸರಸ್ವತಿ ಕಡೇ ಶಿವಾಲಯ, ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್, ಉಪಾಧ್ಯಕ್ಷ ಕೆ. ಈಶ್ವರ್, ಸಹ ಕಾರ್ಯದರ್ಶಿ ಶುಭಾಷಿನಿ, ಪಾಣೆಮಂಗಳೂರು ಫಿರ್ಕಾ ಬೀಡಿ ಕೆಲಸ ಗಾರರ ಸಂಘ (ಸಿಐಟಿಯು)ದ ಅಧ್ಯಕ್ಷ ಬಿ. ನಾರಾಯಣ, ವಾಸುಗಟ್ಟಿ ಧರಣಿಯ ನೇತೃತ್ವ ವಹಿಸಿದ್ದರು.





