ಕಿನ್ನಿಗೋಳಿ: ಉಚಿತ ತಪಾಸಣಾ ಶಿಬಿರ

ಕಿನ್ನಿಗೋಳಿ, ಎ.21: ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದಲ್ಲಿ ಮತ್ತು ವಾತಾವರಣದ ಸಮಸ್ಯೆ ಯಿಂದ ಕಿಡ್ನಿಯಲ್ಲಿ ಕಲ್ಲು ಹಾಗೂ ಮೂತ್ರಕೋಶದ ಸಮಸ್ಯೆ ಕಾಣಿಸಿಕೊಳ್ಳುತ್ತ್ತದೆ. ಈ ನಿಟ್ಟಿನಲ್ಲಿ ಆರೋ ಗ್ಯದ ಬಗ್ಗೆ ಕಾಳಜಿ ಅಗತ್ಯ ಎಂದು ಯುರೋಲಜಿ ತಜ್ಞ ಡಾ. ನಿಶ್ಚಿತ್ ಡಿಸೋಜ ಹೇಳಿದರು. ಕಿನ್ನಿಗೋಳಿಯ ಕನ್ಸೆಟ್ಟಾ ಆಸ್ಪತ್ರೆ, ಸಂಜೀವಿನಿ ಹಾಗೂ ರೋಟರಿ ಕ್ಲಬ್ ಆಶ್ರಯದಲ್ಲಿ ಉಚಿತ ಮೂತ್ರಪಿಂಡದ ರೋಗಗಳ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು. ರೋಟರಿಯ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಕಾರ್ಯದರ್ಶಿ ಜೆರಾಲ್ದ್ ಮಿನೇಜಸ್, ರೊಬರ್ಟ್ ರೋಸಾರಿಯೊ, ಮೈಕಲ್ ಪಿಂಟೊ, ಗಂಗಾಧರ ಶೆಟ್ಟಿ, ಕನ್ಸೆಟ್ಟಾ ಆಸ್ಪತ್ರೆಯ ಮುಖ್ಯಸ್ಥೆ ಡಾ. ಜೀವಿತಾ, ಸಂಜೀವಿನಿಯ ಸಂಯೋಜಕಿ ಹೋಪ್, ಸೋಫಿಯ, ಜಯಪಾಲ ಶೆಟ್ಟಿ, ಲಲಿತಾ ಭಾಸ್ಕರ್ ಮತ್ತಿತರರು ಉಪಸ್ಥಿತರಿದ್ದರು.
Next Story





