ರೀಸ್‌ಗೆ ತಲುಪಿದ ಒಲಿಂಪಿಕ್ಸ್ ಜ್ಯೋತಿ

ಏನ್ಸಿಯಂಟ್ ಒಲಿಂಪಿಯಾ(ಗ್ರೀಸ್), ಎ.21: ಏನ್ಸಿಯೆಂಟ್ ಗೇಮ್ಸ್ ಸ್ಥಳಕ್ಕೆ ಒಲಿಂಪಿಕ್ಸ್ ಜ್ಯೋತಿ ತಲುಪುವುದರೊಂದಿಗೆ ಈ ವರ್ಷದ ರಿಯೋ ಡಿ ಜನೈರೊ ಒಲಿಂಪಿಕ್ಸ್ ಆರಂಭಕ್ಕೆ ದಿನಗಣನೆ ಆರಂಭವಾಗಿದೆ.
ಆ.5 ರಿಂದ 21ರ ತನಕ ಇದೇ ಮೊದಲ ಬಾರಿ ದಕ್ಷಿಣ ಅಮೆರಿಕದಲ್ಲಿ ನಡೆಯಲಿರುವ ಒಲಿಂಪಿಕ್ಸ್ ಗೇಮ್ಸ್‌ನ ತಯಾರಿ ಹಲವು ಸಮಸ್ಯೆಗಳಿಂದ ಪೀಡಿತವಾಗಿದ್ದು, ಆಯೋಜಕರಿಗೆ ಹಣಕಾಸು ಸಮಸ್ಯೆ ಎದುರಾಗಿತ್ತು. ಮೊದಲ ಆಧುನಿಕ ಒಲಿಂಪಿಕ್ಸ್ ನಡೆದ ಅಥೆನ್ಸ್‌ನಲ್ಲಿ ಎ.27 ರಂದು ಬ್ರೆಝಿಲ್ ಸಂಘಟಕರು ಕ್ರೀಡಾ ಜ್ಯೋತಿಯನ್ನು ಸ್ವೀಕರಿಸಲಿದ್ದಾರೆ.
ರಾಜಧಾನಿ ಬ್ರೆಸಿಲಿಯಾದಲ್ಲಿ ಮೇ 3 ರಿಂದ ರಿಲೇ ಆರಂಭವಾಗಲಿದ್ದು, ಉದ್ಘಾಟನಾ ಸಮಾರಂಭ ನಡೆಯಲಿರು ರಿಯೋ ಜನೈರೊದಲ್ಲಿ ಅಂತ್ಯವಾಗಲಿದೆ.
Next Story





