ಕೊಹಿನೂರ್ ವಜ್ರ ಉಡುಗೊರೆಯಲ್ಲ; ಕಿತ್ತುಕೊಂಡದ್ದು

ನಾವು ಒಂದು ಸುದ್ದಿಯನ್ನು ಪದೇ ಪದೇ ಕೇಳುತ್ತಲೇ ಇದ್ದೇವೆ. ಅಷ್ಟೇ ಗಂಭೀರತೆಯಿಂದ. ಡ್ಯುಕಟಿ ಸೂಪರ್‌ಬೈಕ್‌ನಂತೆ ಕೊಹಿನೂರ್ ಕಥೆಯ ಒಂದು ಆಯಾಮವನ್ನಷ್ಟೇ ನಾವು ತಿಳಿಯುತ್ತಿದ್ದೇವೆ.
ಭಾರತ ಸರಕಾರ ಈ ಅಮೂಲ್ಯ ವಜ್ರವನ್ನು ಬ್ರಿಟನ್‌ನಿಂದ ವಾಪಸ್ ಪಡೆಯಲು ಯಾವುದೇ ಮನವಿ ಸಲ್ಲಿಸುವುದಿಲ್ಲ ಎಂಬ ವದಂತಿ ಬಗೆಗಿನ ಚರ್ಚೆಗಾಗಿ ಬಿಬಿಸಿ ಟೆಲಿವಿಷನ್ ಸ್ಟುಡಿಯೊಗೆ ನನ್ನನ್ನು ಆಹ್ವಾನಿಸಿದರು. ಬಹುತೇಕ ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಭಾರತ ಅದನ್ನು ವಾಪಸ್ ಕೇಳದಿರಲು ಕಾರಣವೆಂದರೆ, ಮಹಾರಾಜ ರಂಜಿತ್ ಸಿಂಗ್ ಇದನ್ನು ಈಸ್ಟ್ ಇಂಡಿಯಾ ಕಂಪೆನಿಗೆ ಉಡುಗೊರೆಯಾಗಿ ನೀಡಿದ್ದು, ಅದು ನಿಗೂಢ ಅಥವಾ ವಿಲಕ್ಷಣ ಎಂಬ ಪದವನ್ನು ಹೊಂದಿರುವ ಪುಟ್ಟ ವಾಕ್ಯ. ಅದರ ಮೊದಲ ಭಾಗ ನಿಖರತೆಗೆ ಮೈಲು ದೂರ. ಎರಡನೆ ಭಾಗ..ಮುಕ್ತವಾಗಿ ಹೇಳಬೇಕೆಂದರೆ ಅತಿಮಾನುಷ ಹಾಗೂ ಎರಡನೆ ಭಾಗದ ಬಗ್ಗೆ ನಾನು ಕ್ಷಿಪ್ರವಾಗಿ ಮತ್ತು ಸ್ವಚ್ಛವಾಗಿ ವಿವರಿಸಬಲ್ಲೆ. ಮಹಾರಾಜಾ ರಂಜಿತ್ ಸಿಂಗ್ 1839ರಲ್ಲಿ ಮೃತಪಟ್ಟರು. ಈ ವಜ್ರವನ್ನು ಬ್ರಿಟಿಷರು ಸುಮಾರು ಒಂದು ದಶಕದ ಬಳಿಕ ವಶಪಡಿಸಿಕೊಂಡರು.
ಎರಡನೆ ಭಾಗಕ್ಕೆ ಬಂದರೆ, ಅದು ಅಸ್ಪಷ್ಟ. ಆದರೆ ನನ್ನ ಅಭಿಪ್ರಾಯದ ಪ್ರಕಾರ, ಅದು ಅಷ್ಟೇ ಸ್ಪಷ್ಟವಾದ ತಪ್ಪುಹೇಳಿಕೆ. ಕೊಹಿನೂರ್ ವಜ್ರ ಎಂದೂ ಉಡುಗೊರೆಯಾಗಿರಲೇ ಇಲ್ಲ. ಇದನ್ನು ಬಲಾತ್ಕಾರವಾಗಿ ಬ್ರಿಟಿಷರು ಕಿತ್ತುಕೊಂಡರು. ಅದು ಕೂಡಾ ಹೆದರಿದ ಪುಟ್ಟ ಬಾಲಕನಿಂದ. ಹೀಗೆ ಈ ಅಮೂಲ್ಯ ವಜ್ರ ಬ್ರಿಟಿಷರಿಗೆ ಸೇರಿತು. ಕಾನೂನು ಬದ್ಧತೆಯ ಹಿನ್ನೆಲೆಯಲ್ಲಿ ಸಂಶಯಾತ್ಮಕ ಹಾಗೂ ಅನೈತಿಕತೆ ವಿಚಾರದಲ್ಲಿ ಇದು ಸುಸ್ಪಷ್ಟ.
ಬಾಲ ರಾಜ ದುಲೀಪ್‌ಸಿಂಗ್ ಈಸ್ಟ್ ಇಂಡಿಯಾ ಕಂಪೆನಿ ಜತೆ ಭೈರೋವಲ್ ಒಪ್ಪಂದವನ್ನು 1846ರ ಡಿಸೆಂಬರ್ 16ರಂದು ಮಾಡಿಕೊಂಡಾಗ ಆತನಿಗೆ ಇನ್ನೂ ಕೇವಲ ಎಂಟು ವರ್ಷ ವಯಸ್ಸು. ಅದು ಪುಟ್ಟ ಬಾಲಕನಿಗೆ ಸಾಮ್ರಾಜ್ಯ ಹಾಗೂ ಕೊಹಿನೂರ್ ಎರಡನ್ನೂ ಕಳೆದುಕೊಳ್ಳುವಂತೆ ಮಾಡಿತು. ಆ ವರ್ಷದ ಮೊದಲರ್ಧದಲ್ಲಿ ಬ್ರಿಟಿಷರು ಸ್ನೇಹಿತರಂತೆ ಪಂಜಾಬ್‌ಗೆ ಬಂದರು. ಬಳಿಕ ಒಳಗೊಳಗೇ ರಕ್ಷಕ ಸೈನ್ಯವನ್ನು ಈ ಭಾಗದಲ್ಲಿ ಬೆಳೆಸಿದರು. ದಿಲೀಪ್‌ಸಿಂಗ್‌ನನ್ನು ತಾಯಿಯಿಂದ ಪ್ರತ್ಯೇಕಿಸಿದರು. ರಾಜಮಾತೆ ಮಹಾರಾಣಿಯನ್ನು ಆಕೆಯ ಆಕ್ರಂದನದ ನಡುವೆಯೇ ಎಳೆದೊಯ್ದು ಗೋಪುರದಲ್ಲಿ ಕೂಡಿ ಹಾಕಲಾಯಿತು. ಎರಡು ಆಂಗ್ಲೊ- ಸಿಕ್ಖ್ ಯುದ್ಧಗಳು ರಾಜ್ಯವನ್ನು ಮತ್ತಷ್ಟು ದುರ್ಬಲಗೊಳಿಸಿದವು. ಏಕಾಂತ ಹಾಗೂ ಭೀತಿ, ದೂರದಿಂದ ಫಿರಂಗಿ ಸದ್ದುಗಳು ಆತನ ಕಿವಿಗೆ ಅಪ್ಪಳಿಸುತ್ತಿದ್ದವು. ಪ್ರಬಲವಾಗಿ ಬೆಳೆದಿದ್ದ ಬ್ರಿಟಿಷರು ಈ ಪುಟ್ಟ ಬಾಲಕನ್ನು ಸುಲಭವಾಗಿ ಶರಣಾಗುವಂತೆ ಮಾಡಿದರು. ಆತನ ವರ್ತಮಾನ ಹಾಗೂ ಭವಿಷ್ಯದ ದೃಷ್ಟಿಯಿಂದ ಒಪ್ಪಂದಕ್ಕೆ ಸಹಿ ಮಾಡುವಂತೆ ಒತ್ತಡ ಹೇರಿದರು. ಬಳಿಕ ಬ್ರಿಟಿಷರ ಈ ನಡತೆ ವಿರುದ್ಧ ಕಾನೂನು ಕ್ರಮಕ್ಕೂ ಅವರು ಮುಂದಾಗಬಹುದಿತ್ತು. ಆದರೆ ದಿಲೀಪ್ ಸಿಂಗ್ ಆ ವೇಳೆಗೆ ಇಂಗ್ಲೆಂಡಿನ ದೇಶದ್ರೋಹದ ಆರೋಪದಲ್ಲಿ ಗಡಿಪಾರಾದರು. ಹೀಗೆ ಹಂತ ಹಂತದಲ್ಲೂ ಅವರಿಗೆ ಚಿತ್ರ ಹಿಂಸೆ ಎದುರಾಯಿತು. ಅಂತಿಮವಾಗಿ ಚಿತ್ರಹಿಂಸೆ ಅನುಭವಿಸಿಯೇ ಜೀವನ ಕೊನೆಗೊಳಿಸಿದರು.
ಪ್ರಸ್ತುತ ಸ್ಥಿತಿ
ಸರ್ವಶ್ರೇಷ್ಠ ವಿಲಿಯಂ ಡೆಲ್ರಿಂಪ್ ಅವರ ಜತೆ ಸೇರಿ ನಾನು ಈಗ ಕೊಹಿನೂರ್‌ನ ಇತಿಹಾಸ ಬರೆಯುತ್ತಿದ್ದೇನೆ. ಆದ್ದರಿಂದ ಈ ಸಂಬಂಧ ಬ್ರಿಟನ್ ಹಾಗೂ ಭಾರತದ ಪ್ರಾಚ್ಯವಸ್ತು ವಿಭಾಗದಲ್ಲಿರುವ ಎಲ್ಲ ದಾಖಲೆಗಳನ್ನೂ ಜಾಲಾಡಿದ್ದೇವೆ. ಭಾರತ ಸರಕಾರ ಹೇಳಿದಂತೆ ಇದು ಉಡುಗೊರೆಯಾಗಿತ್ತೇ ಎನ್ನುವುದಕ್ಕೆ 1848ರ ಮೇ ತಿಂಗಳ ಸಂಚಿಕೆಯ ಡೆಲ್ಲಿ ಗಜೆಟ್ ಎಂಬ ಬ್ರಿಟನ್ ಪತ್ರಿಕೆಯಲ್ಲಿ ವಿವರ ಸಿಗುತ್ತದೆ:
ಆ ಪ್ರಖ್ಯಾತ ವಜ್ರ (ವಿಶ್ವದ ಅತಿದೊಡ್ಡ ಹಾಗೂ ಅತ್ಯಮೂಲ್ಯ)ವನ್ನು ಲಾಹೋರ್ ಸಾಮ್ರಾಜ್ಯದಿಂದ ಖಜಾನೆ ಮುಟ್ಟುಗೋಲು ಹಾಕಿಕೊಂಡಿತು. ಇದೀಗ ಬಿಟ್ರಿಷ್ ಭದ್ರತೆಯ ಸುಪರ್ದಿಯಲ್ಲಿ ಗೋವಿಂದಪುರ ಕೋಟೆ ಬಳಿ ಇದೆ. ನಮ್ಮ ಮಿಲಿಟರಿಯ ಒಂದು ಅದ್ಭುತ ಸ್ಮರಣಿಕೆಯಾಗಿ ಇದನ್ನು ಇಂಗ್ಲೆಂಡಿಗೆ ತರಲಾಗಿದೆ. ಇದು ನಮ್ಮ ಭಾರತೀಯ ಹಸ್ತದ ವೈಭವದ ಗಮನವನ್ನು ಸೆಳೆಯುವಂಥ ಅಪರೂಪದ ವಜ್ರ
ಕೊಹಿನೂರ್ ವಜ್ರವನ್ನು ಉಡುಗೊರೆಯಾಗಿ ನೀಡಲಾಗಿದೆ ಎನ್ನುವುದು ಕಟ್ಟುಕಥೆ ಎಂದು ಒತ್ತಿಹೇಳುವ ಸಲುವಾಗಿ ನಾನು ಬಿಬಿಸಿ ಸ್ಟುಡಿಯೊಗೆ ಹೋಗಿದ್ದೆ. ಆದರೆ ಭಾರತ ಸರಕಾರದ ಈ ನಾಟಕೀಯ ನಿರ್ಧಾರದ ಕಾರಣದಿಂದ ಇಡೀ ಯೋಚನೆ ತದ್ವಿರುದ್ಧವಾಯಿತು. ಆದರೆ ಇದೀಗ ಭಾರತ ಸರಕಾರ, ಕೊಹಿನೂರ್ ವಜ್ರವನ್ನು ಪಡೆಯಲು ಎಲ್ಲ ಪ್ರಯತ್ನಗಳನ್ನೂ ಮಾಡಲಾಗುತ್ತದೆ ಎಂದು ಹೇಳಿಕೆ ನೀಡುವುದರಲ್ಲಿ ಯಾವ ಅರ್ಥವಿದೆ? ಈ ಅಪರೂಪದ ವಜ್ರ ದೂರದ ಭವಿಷ್ಯದ ದೃಷ್ಟಿಯಿಂದ ಲಂಡನ್‌ನಲ್ಲೇ ಉಳಿಯುತ್ತದೆ ಎಂಬ ಖಾತ್ರಿ ನನಗಿದೆ. ಆದಾಗ್ಯೂ ಈ ಶಾಪಗ್ರಸ್ತ ಮಣಿಯಲ್ಲಿ ಹಲವು ವರ್ಷಗಳ ಕಾಲ ಮುಳುಗಿದವರು, ನೇರ ಎನಿಸುವ ದಾಖಲೆಗಳನ್ನು ನೋಡುವುದು ಸೂಕ್ತ.
ಕೃಪೆ: scroll.in







