ಕ್ರಿಕೆಟಿಗೆ ನೀರಿಲ್ಲ

ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಮತ್ತೆ ಬಂದಿದ್ದು ಇದರ ಉದ್ಘಾಟನಾ ಪಂದ್ಯದ ವೇಳೆ ವಾಂಖೆಡೆ ಸ್ಟೇಡಿಯಂನಲ್ಲಿ ಪ್ರತೀ ಬಾರಿಯಂತೆ ನೀಲಿ ಟೀ ಶರ್ಟ್ ಧರಿಸಿದ್ದ ಅಭಿಮಾನಿಗಳ ಸಾಗರವೇ ನೆರೆದಿತ್ತು. ಆದರೆ ಈ ಬಾರಿ ಅತ್ಯಂತ ಜನಪ್ರಿಯ ಚಿತ್ರಣ ಮಾತ್ರ ವಾಂಖೆಡೆಯ ತುಂಬಿ ತುಳುಕುತ್ತಿದ್ದ ಸ್ಟೇಡಿಯಂ ಆಗಲಿ ಅಥವಾ ಮುಂಬೈಯ ಕ್ರಿಕೆಟ್ ಹುಚ್ಚಿನ ಜನಸಮೂಹವಾಗಲಿ ಆಗಿರಲಿಲ್ಲ. ಬದಲಿಗೆ ಪಂದ್ಯಾವಳಿಗಿಂತ ಕೆಲವು ದಿನಗಳ ಮೊದಲು ನಾಲ್ಕು ಮಂದಿ ಕೆಲಸಗಾರರು ಮೈದಾನಕ್ಕೆ ನೀರುಣಿಸುತ್ತಿರುವ ದೃಶ್ಯಗಳು ಸುದ್ದಿಯ ಕೇಂದ್ರಬಿಂದುವಾಗಿದ್ದವು. ಈ ಬಾರಿ ಐಪಿಎಲ್ ಆರಂಭಕ್ಕೂ ಮುನ್ನವೇ ನೀರಿನ ಸಮಸ್ಯೆ ಪಂದ್ಯಾವಳಿಯ ಮೇಲೆ ಪ್ರಭಾವ ಬೀರಿತ್ತು. ಬರಪೀಡಿತ ರಾಜ್ಯವಾದ ಮಹಾರಾಷ್ಟ್ರದಿಂದ ಐಪಿಎಲ್ ಪಂದ್ಯಾವಳಿಯ ಉಳಿದ ಪಂದ್ಯಗಳನ್ನು ಹೊರಗಿನ ರಾಜ್ಯಗಳಿಗೆ ಸ್ಥಳಾಂತರಿಸಬೇಕೆಂದು ಕೋರಿ ಮುಂಬೈ ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಲಾಗಿದೆ.
ನ್ಯಾಯಾಲಯದ ತೀರ್ಪನ್ನು ಮುಂದಿನ ತಿಂಗಳಿಂದ ಅನುಷ್ಠಾನಕ್ಕೆ ತರಲಾಗುವುದರಿಂದ ಈ ನಿರ್ಧಾರದ ಉಪಯೋಗಗಳನ್ನು ತಿಳಿಯುವುದು ಅನಿವಾರ್ಯವಾಗುತ್ತದೆ. ಈ ದುರುಪಯೋಗಪಡಿಸಲ್ಪಟ್ಟ ನೀರನ್ನು ಮರಾಠವಾಡದ ಸಿಟಿಲೊಡೆದ ಜಮೀನುಗಳಿಗೆ ಹರಿಸಲಾಗುವುದೇ? ಈ ತೀರ್ಪನ್ನು ಕೇಳಿದ ನಂತರ ರೈತರು ನಿಜವಾಗಿಯೂ ನಿಟ್ಟುಸಿರು ಬಿಡಲಿದ್ದಾರೆಯೇ? ಭಾರತದ ಹತ್ತು ರಾಜ್ಯಗಳನ್ನು ಬರಪೀಡಿತ ಎಂದು ಘೋಷಿಸಿರುವಾಗ ಪಂದ್ಯಾವಳಿಯನ್ನು ಸ್ಥಳಾಂತರಿಸುವ ಉದ್ದೇಶ ಮತ್ತು ನಿರ್ಧಾರ ಸರಿಯಾದದ್ದೇ? ಮತ್ತು ಮುಖ್ಯವಾದ ಅಂಶವೆಂದರೆ, ಹಲವು ವರ್ಷಗಳಲ್ಲಿ ಸರಕಾರಗಳು ನೀರಿನ ನಿರ್ವಹಣೆ ಬಗ್ಗೆ ತೋರಿರುವ ನಿರ್ಲಕ್ಷ್ಯ ಮತ್ತು ಉದಾಸೀನ ಧೋರಣೆಯ ಪ್ರತಿಲವೇ ಈ ನೀರಿನ ಕೊರತೆಯ ಸಮಸ್ಯೆಯಲ್ಲದೆ ಕೇವಲ ಒಂದು ಕ್ರೀಡೆಯ ಮೇಲೆ ನೀರನ್ನು ಅತಿಯಾಗಿ ಬಳಸುತ್ತದೆ ಎಂಬ ಆಪಾದನೆ ಮಾಡುವುದು ಸರಿಯೇ?
ಗ್ರಾಮಾಂತರ ಪ್ರದೇಶಗಳಲ್ಲಿ ಬಹಳಷ್ಟು ಸಮಸ್ಯೆಗಳನ್ನು, ಕಷ್ಟಗಳನ್ನು ಎದುರಿಸಿದರೂ ಕ್ರಿಕೆಟ್ ತನ್ನ ಅದ್ಧೂರಿತನದಿಂದ ತನ್ನನ್ನು ಸಂಶಯಿಸುವವರನ್ನು ಸೂಕ್ತ ರೀತಿಯಲ್ಲಿ ದೂರ ಮಾಡುತ್ತಾ ಬಂದಿದೆ. ರಾಜ್ಯದ ಮರಾಠವಾಡ ಪ್ರದೇಶವು ಅತ್ಯಂತ ಗಂಭೀರ ಸ್ವರೂಪದ ಬರಕ್ಕೆ ತುತ್ತಾಗಿದೆ ಎಂಬುದರಲ್ಲಿ ಕೊಂಚವೂ ಕೂಡಾ ಸಂದೇಹವಿಲ್ಲ.
ಸ್ಥಿತಿಯನ್ನು ಹತೋಟಿಗೆ ತರಲು ಶೀಘ್ರ ಸೂಕ್ತ ಕ್ರಮವನ್ನು ಕೈಗೊಳ್ಳುವ ಅನಿವಾರ್ಯತೆಯಿದೆ. ಅದೇ ವೇಳೆ ಸದ್ಯದ ಪರಿಸ್ಥಿತಿಗೆ ಕ್ರಿಕೆಟ್‌ಅನ್ನು ದೂಷಿಸುವುದು ಸಮಸ್ಯೆಯ ತೀವ್ರತೆಯನ್ನು ಕ್ಷುಲ್ಲಕವಾಗಿಸುವ ಯತ್ನವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಮಹಾರಾಷ್ಟ್ರದಲ್ಲಿ ಉದ್ಭವವಾಗಿರುವ ಬಹುದೊಡ್ಡ ಸಮಸ್ಯೆ ನೀರಿನ ಅಭಾವವಲ್ಲ ಬದಲಿಗೆ ನೀರನ್ನು ವಿವೇಚನೆಯಿಂದ ಉಪಯೋಗಿಸುವಲ್ಲಿ ವಿಲವಾಗಿರುವ ಅಲ್ಲಿನ ನೀರಸ ಆಡಳಿತ ಯಂತ್ರವಾಗಿದೆ. ಇಂದಿನ ನೀರಿನ ಸಮಸ್ಯೆಗೆ ಕಾರಣ ನೀರಿನ ಅಸಮರ್ಪಕ ನಿರ್ವಹಣೆಯೇ ಹೊರತು ನೀರಿನ ಕೊರತೆಯೂ ಅಲ್ಲ ಅಥವಾ ನೀರಿನ ದುರುಪಯೋಗವೂ ಅಲ್ಲ. ರಾಜ್ಯವು ಸತತ ಎರಡನೆ ಬಾರಿ ಬರದ ಸ್ಥಿತಿಯನ್ನು ಎದುರಿಸುತ್ತಿರುವುದು ನಿಜ ಆದರೆ ಸಮಸ್ಯೆಯ ಮೂಲವಿರುವುದು ಸದ್ಯ ಇರುವ ಸಂಪನ್ಮೂಲಗಳನ್ನು ಉಪಯೋಗಿಸಿದ, ದುರುಪಯೋಗಿಸಿದ ಮತ್ತು ಉಪಯೋಗಿಸದೇ ಇರುವುದರಲ್ಲಿ. ದೇಶದಲ್ಲೇ ಅತ್ಯಂತ ಹೆಚ್ಚು ಅಣೆಕಟ್ಟುಗಳನ್ನು ಹೊಂದಿರುವ ರಾಜ್ಯಕ್ಕೆ ನೀರಿನ ಕೊರತೆ ಅಷ್ಟೊಂದು ದೊಡ್ಡ ಸಮಸ್ಯೆಯಾಗಬಾರದಿತ್ತು. ಕೇವಲ ಶೇ.18ರಷ್ಟು ಉಳುವ ಜಮೀನಿಗೆ ನೀರುಣಿಸಲಾಗುತ್ತಿದೆ ಮತ್ತು ಶೇ.12ಕ್ಕೂ ಕಡಿಮೆ ಕಿರು ನೀರಾವರಿ ಯೋಜನೆಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ.
ಜ್ಯವು ಇತ್ತೀಚಿನ ದಿನಗಳಲ್ಲಿ ಬೃಹತ್ ನೀರಾವರಿ ಹಗರಣವೊಂದಕ್ಕೂ ಸಾಕ್ಷಿಯಾಗಿದ್ದು, ಈ ಸುದ್ದಿ ಮಾತ್ರ ಮಾಧ್ಯಮಗಳಲ್ಲಿ ಹೇಳಹೆಸರಿಲ್ಲದಂತೆ ಮಾಯವಾಗಿದೆ. ಇತರ ಪೂರಕ ಯೋಜನೆಗಳಾದ ಕೆರೆಗಳ ಹೂಳೆತ್ತುವಿಕೆ, ಅಂತರ್ಜಲ ಶೇಖರಣೆ, ನೀರು ಶೇಖರಣಾ ಟ್ಯಾಂಕ್‌ಗಳು ಮತ್ತು ಹನಿ ನೀರಾವರಿ ತಂತ್ರಜ್ಞಾನದ ಮೂಲಕ ನೀರನ್ನು ಶೇಖರಿಸುವ ಕಲ್ಪನೆಯ ಅಳವಡಿಸಿಕೊಳ್ಳುವಿಕೆ ಇತ್ಯಾದಿಗಳು ರಾಜ್ಯದ ಹಲವು ಭಾಗಗಳಲ್ಲಿ ದಿನದ ಬೆಳಕನ್ನೇ ಕಾಣಲಿಲ್ಲ. ನೀರಿನ ಸಮಸ್ಯೆಗೆ ಹರಕೆಯ ಕುರಿಯನ್ನಾಗಿ ಮಾಡಲಾಗಿರುವ ಮತ್ತೊಂದು ಬೆಳೆಯೆಂದರೆ ಕಬ್ಬು. ಕಬ್ಬು ಬೆಳೆಗೆ ಇತರ ಎಲ್ಲಾ ಬೆಳೆಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಅಗತ್ಯವಿದೆಯಾದರೂ ಕೆಲವೊಂದು ಅಂಶಗಳನ್ನು ದೃಷ್ಟಿಯಲ್ಲಿಟ್ಟುಕೊಳ್ಳಬೇಕಾಗುತ್ತದೆ. ಗ್ರಾಮೀಣ ವ್ಯವಹಾರಗಳ ತಜ್ಞ ಹರೀಶ್ ದಾಮೋದರನ್ ಇತ್ತೀಚೆಗೆ ವಾದಿಸಿದಂತೆ, ಕಬ್ಬು ಕೊಯ್ಲು ಮಾಡುವ ಮೊದಲು ತೆಗೆದುಕೊಳ್ಳುವ ಸಮಯ ಇತರ ಬೆಳೆಗಳಿಗಿಂತ ದುಪ್ಪಟ್ಟಾಗಿರುತ್ತದೆ.
ತ್ತೆ ಈ ಪ್ರದೇಶದಲ್ಲಿ ಕಬ್ಬು ಬೆಳೆಯುವ ಪ್ರದೇಶವು ಕೃಷಿಯೋಗ್ಯ ಜಮೀನಿಗೆ ಹೋಲಿಸಿದರೆ ಅತ್ಯಂತ ಕಡಿಮೆ. ಇಂಥಾ ಅನೇಕ ಅಂಶಗಳಿಂದ ಏನನ್ನು ಗ್ರಹಿಸಬಹುದು ಎಂದರೆ ಸರಕಾರಗಳು ಹಲವು ವರ್ಷಗಳಲ್ಲಿ ಪರಿಣಾಮಕಾರಿಯಾಗಿ ಎದ್ದುಕಾಣುವ ಕಾರಣವನ್ನೇ ಮುಂದೆಯಿಡುತ್ತಾ ಬಂದಿವೆ. ಇದರಿಂದಾಗಿ ಆಡಳಿತವರ್ಗವು, ದಾರಿ ತಪ್ಪಿದ ರೈತರಿಂದ ಅಥವಾ ತಮ್ಮ ನಿಲುವಿನಿಂದ ಕದಲಲು ನಿರಾಕರಿಸುವ ಕ್ರಿಕೆಟ್ ಅಭಿಮಾನಿಗಳಿಂದ ಉಲ್ಬಣಿಸಲ್ಪಟ್ಟ, ಬೇಜವಾಬ್ದಾರಿತನದಿಂದ ಉಂಟಾದ ಸಮಸ್ಯೆಯ ಮಧ್ಯೆ ತಾನು ಅಸಹಾಯಕ ಎಂದು ಬಿಂಬಿಸಿಕೊಳ್ಳುವಲ್ಲಿ ಸಲವಾಗಿದೆ. ನಿಜವಾಗಿ ಈ ಬಾರಿ ನಾವು ಸಾಮಾಜಿಕ ಜಾಲತಾಣಗಳಲ್ಲಿ ಒಂದು ವ್ಯತಿರಿಕ್ತ ಬೆಳವಣಿಗೆಯನ್ನು ಕಂಡಿದ್ದು ಬಹಳಷ್ಟು ಜನರು ಕ್ರೀಡೆಗೆ ಬೆಂಬಲ ಸೂಚಿಸುವ ಬದಲು ರೈತರ ಪರವಾಗಿ ನಿಂತಿದ್ದಾರೆ. ನ್ಯಾಯಾಲಯವು ಉಳಿದ ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಸೂಚಿಸುವ ಮೂಲಕ ಮತ್ತು ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್ ಮತ್ತು ಸುನೀಲ್ ಗವಾಸ್ಕರ್ ಅಂಥವರು ಮಂಡಳಿಯ ನಿರ್ಧಾರದ ಬಗ್ಗೆ ಅಸಮ್ಮತಿ ಸೂಚಿಸುವುದರ ಜೊತೆಗೆ ಈ ಅನುಭೂತಿಯು ಪರಾಕಾಷ್ಠೆ ತಲುಪಿತು
. ಈ ಅನಿರೀಕ್ಷಿತ ಘಟನೆಗಳ ಸರಪಳಿಯು ಕೇವಲ ನಮ್ಮ ಸಮಾಜದ ಒಂದು ಭಾಗದ ಭಾವನಾತ್ಮಕ ಪ್ರತಿಕ್ರಿಯೆಗಳಿಂದ ಮಾತ್ರ ಆಗಿರಲಿಲ್ಲ ಬದಲಿಗೆ ನ್ಯಾಯಾಲಯವು ಈ ಪ್ರಕರಣವನ್ನು ನಿಭಾಯಿಸಿದ ರೀತಿಯಿಂದಲೂ ಆಗಿತ್ತು. ನ್ಯಾಯಾಂಗದ ಮೇಲಿನ ಹಿಡಿತ ಎಂದು ಕಾಣುತ್ತಿದ್ದ ಪ್ರಕರಣದಲ್ಲಿ ಸರಕಾರವು ಯಾವುದೇ ರೀತಿಯ ಆಕ್ಷೇಪವನ್ನು ಎತ್ತಲಿಲ್ಲ. ಆದರೆ ನಮ್ಮ ‘ಸಾಮೂಹಿಕ ಆತ್ಮಸಾಕ್ಷಿ’ಯ ತರಾತುರಿಯ ಉತ್ಸಾಹದಿಂದ ತುಂಬಿದ್ದ ತೀರ್ಪಿನ ಹಿಂದೆ ಕೈಯಾಡಿಸಿತ್ತು. ತರ್ಕ ಮತ್ತು ವಿಚಾರಗಳ ಬದಲಿಗೆ ಭಾವನೆಗಳು ಮತ್ತು ಒಳಜ್ಞಾನ ನಿರ್ಣಾಯಕ ಪಾತ್ರ ನಿರ್ವಹಿಸಿದ ಎರಡನೆ ಪ್ರಕರಣ ಇದಾಗಿದೆ. ಗುಣಪಡಿಸುವುದಕ್ಕಿಂತ ತಡೆಗಟ್ಟುವುದು ಉತ್ತಮ ಎಂಬ ಮಾತೊಂದಿದೆ. ಆದರೆ ದುರದೃಷ್ಟವಶಾತ್ ನಾವು ಈ ಪಾಠವನ್ನು ಕಲಿತಿಲ್ಲ.







